Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕಾರ್ ನಿಕೊಬಾರ್ ನಲ್ಲಿ ಪ್ರಧಾನಮಂತ್ರಿ :

ಕಾರ್ ನಿಕೊಬಾರ್  ನಲ್ಲಿ ಪ್ರಧಾನಮಂತ್ರಿ :

ಕಾರ್ ನಿಕೊಬಾರ್  ನಲ್ಲಿ ಪ್ರಧಾನಮಂತ್ರಿ :

ಕಾರ್ ನಿಕೊಬಾರ್  ನಲ್ಲಿ ಪ್ರಧಾನಮಂತ್ರಿ :


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಾರ್ ನಿಕೊಬಾರ್ ಗಿಂದು ಭೇಟಿ ನೀಡಿದರು.

ಪ್ರಧಾನಮಂತ್ರಿ ಅವರು ಸುನಾಮಿ ಸ್ಮಾರಕದಲ್ಲಿ ಪುಷ್ಪಗುಚ್ಛ ಇರಿಸಿದರು ಹಾಗೂ ವಾಲ್ ಆಫ್ ಲಾಸ್ಟ್ ಸೋಲ್ ನಲ್ಲಿ ಮೇಣದಬತ್ತಿ ಬೆಳಗಿದರು.

ದ್ವೀಪದ ಬುಡಕಟ್ಟು ನಾಯಕರ ಹಾಗೂ ಪ್ರಸಿದ್ಧ ಕ್ರೀಡಾಪಟುಗಳ ಜತೆ ಸಂವಾದ ನಡೆಸಿದರು.

ಸಾರ್ವಜನಿಕ ಸಮಾರಂಭದಲ್ಲಿ ಅರೊಂಗ್ ನ ಐ.ಟಿ.ಐ.ಯನ್ನು ಹಾಗೂ ಆಧುನಿಕ ಕ್ರೀಡಾ ಸಂಕೀರ್ಣವನ್ನು ಪ್ರಧಾನಮಂತ್ರಿ ಅವರು ಉದ್ಘಾಟಿಸಿದರು.

ಕ್ಯಾಂಪ್ ಬೆಲ್ ಬೇ ಜೆಟ್ಟಿಯ ವಿಸ್ತರಣೆ ಮತ್ತು ಮಸ್ ಜೆಟ್ಟಿ ಸಮೀಪ ಕಿನಾರೆಯ ಸಂರಕ್ಷಣಾ ಕೆಲಸಗಳಿಗೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ಮಾಡಿದರು.

ಈ ಸಂದರ್ಭದಲ್ಲಿ ದ್ವೀಪ ಹೊಂದಿರುವ ಅದ್ಬುತವಾದ ನೈಸರ್ಗಿಕ ಸೌಂದರ್ಯ, ಸಂಸ್ಕೃತಿ, ಸಂಪ್ರದಾಯ ಮತ್ತು ಕಲೆಯ ಬಗ್ಗೆ ಪ್ರಧಾನಮಂತ್ರಿ ಅವರು ಮಾತನಾಡಿದರು. ದ್ವೀಪದ ಕುಟುಂಬ ಮತ್ತು ಅವಿಭಜಿತ ಸಂಪ್ರದಾಯಗಳ ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರು, ಇದುವೇ ಶತಮಾನಗಳಿಂದ ಭಾರತೀಯ ಸಮಾಜದ ಶಕ್ತಿಯಾಗಿದೆ ಎಂದರು

ಈ ಸಮಾರಂಭಕ್ಕೆ ಆಗಮಿಸುವ ಮುನ್ನ, ವಾಲ್ ಆಫ್ ಲಾಸ್ಟ್ ಸೋಲ್ ಸುನಾಮಿ ಸ್ಮಾರಕಕ್ಕೆ ನೀಡಿದ ಭೇಟಿಯ ಕುರಿತು ಅವರು ಮಾತನಾಡಿದರು. ಸುನಾಮಿಯ ಹಾನಿ ಪುನರ್ನಿರ್ಮಾಣದಲ್ಲಿ ತೋರಿದ ಕಠಿಣ ಪರಿಶ್ರಮಕ್ಕಾಗಿ ಹಾಗೂ ಸ್ಥೈರ್ಯಕ್ಕಾಗಿ ನಿಕೊಬಾರ್ ದ್ವೀಪದ ಜನತೆಯನ್ನು ಪ್ರಧಾನಮಂತ್ರಿ ಅವರು ಅಭಿನಂದಿಸಿದರು

ಇಂದು ಅನಾವರಣ ಮಾಡಿದ ಯೋಜನೆಗಳು ವಿದ್ಯಾಭ್ಯಾಸ, ಆರೋಗ್ಯ, ಉದ್ಯೋಗ, ಕೌಶಲ್ಯಾಭಿವೃದ್ಧಿ, ಸಾರಿಗೆ, ಇಂಧನ, ಕ್ರೀಡೆ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ದೀರ್ಘಾವಧಿಯನ್ನು ಕಾಣಲಿವೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು

ಅಭಿವೃದ್ಧಿ ಪಥದಲ್ಲಿ ಸಾಗುವ ನಿಟ್ಟಿನಲ್ಲಿ ದೇಶದ ಯಾವನೇ ಒಬ್ಬನನ್ನು ಅಥವಾ ಯಾವುದೇ ಮೂಲೆಯ ಭಾಗವನ್ನೂ ಕಡೆಗಣಿಸುವುದಿಲ್ಲ ಎಂಬ ತನ್ನ ಸರಕಾರದ ದೃಢ ನಿರ್ಧಾರವನ್ನು ಪ್ರಧಾನಮಂತ್ರಿ ಅವರು ಪುನರುಚ್ಚರಿಸಿದರು. ಅಂತರವನ್ನು ಕಡಿಮೆಗೊಳಿಸುವ ಹಾಗೂ ಹೃದಯಗಳಲ್ಲಿ ಸಾಮೀಪ್ಯದ ಭಾವನೆ ಮೂಡಿಸುವ ಗುರಿಯಿಟ್ಟಿದ್ದೇವೆ ಎಂದು ಅವರು ಹೇಳಿದರು

ಸಮುದ್ರ ಕಿನಾರೆಯ ಗಾಳಿ ತಡೆಗೋಡೆ ಪೂರ್ತಿಯಾದಾಗ ಕಾರ್ ನಿಕೊಬಾರ್ ದ್ವೀಪ ಸಂರಕ್ಷಣೆಗೆ ಸಹಾಯವಾಗಬಹುದು. ಐ.ಟಿ.ಐ.ಯು ದ್ವೀಪದ ಯುವ ಜನತೆಗೆ ಕೌಶಲ್ಯದ ಜತೆ ಸಬಲೀಕರಣಕ್ಕೆ ಸಹಾಯ ಮಾಡಲಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ನಿಕೊಬಾರ್ ದ್ವೀಪದ ಯುವಜನತೆಯ ಕ್ರೀಡಾಸಕ್ತಿಯನ್ನು ಉಲ್ಲೇಖಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು ಆಧುನಿಕ ಕ್ರೀಡಾ ಸಂಕುಲವು ಅವರ ಕ್ರೀಡಾ ಶೌರ್ಯಗಳನ್ನು ಮಸೆಯಲು ಸಹಾಯ ಮಾಡಲಿದೆ ಮತ್ತು ಅಧಿಕ ಕ್ರೀಡಾ ಮೂಲಸೌಕರ್ಯಗಳನ್ನು ಭವಿಷ್ಯದಲ್ಲಿ ಸೇರಿಸಲಾಗುವುದು ಎಂದು ಅವರು ಹೇಳಿದರು

ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳ ಜನತೆಯ ಸುಗಮ ಜೀವನಕ್ಕಾಗಿ ಕೇಂದ್ರ ಸರಕಾರವು ಕೆಲಸ ಮಾಡುತ್ತಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ದ್ವೀಪದಲ್ಲಿ ಆರೋಗ್ಯ ಸೇವೆಗಳ ವ್ಯವಸ್ಥೆಗಳ ವಿಸ್ತರಣೆ ಕುರಿತೂ ಅವರು ಮಾತನಾಡಿದರು

ಸ್ಥಳೀಯ ಸಂಸ್ಕೃತಿ ಮತ್ತು ಪರಿಸರವನ್ನು ಕಾಪಾಡಿಕೊಂಡು, ಅಭಿವೃದ್ಧಿ ಕಾರ್ಯಗಳ ಪ್ರಯತ್ನ ನಡೆಯುತ್ತಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಕೃಷಿ ಕ್ಷೇತ್ರದಲ್ಲಿ, ಕೊಬ್ಬರಿಯ ಬೆಂಬಲ ಬೆಲೆಯಲ್ಲಿ ಹೆಚ್ಚಳ ಮಾಡಿರುವ ಕುರಿತು ಪ್ರಧಾನಮಂತ್ರಿ ಅವರು ತಿಳಿಸಿದರು. ಮೀನುಗಾರಿಕೆ ಕ್ಷೇತ್ರದಲ್ಲಿರುವವರ ಸಬಲೀಕರಣ ನಿಟ್ಟಿನಲ್ಲಿ ಸರಕಾರವು ಕೆಲಸ ಮಾಡುತ್ತಿದೆ, ಈ ನಿಟ್ಟಿನಲ್ಲಿ ದೇಶದ ಮೀನುಗಾರಿಕಾ ಕ್ಷೇತ್ರವನ್ನು ಇನ್ನೂ ಲಾಭದಾಯಕವಾಗಿಸಲು ಇತ್ತೀಚೆಗೆ ರೂ 7000 ಕೋಟಿಯನ್ನು ಅನುಮೋದಿಸಲಾಗಿದೆ. ದೇಶದ ಸಮುದ್ರ ಕಿನಾರೆಯ ಪ್ರದೇಶಗಳು ನಮ್ಮ ನೀಲ ಕ್ರಾಂತಿಯ ಕೇಂದ್ರಗಳಾಗುವ ಸಾಧ್ಯತೆಯಿದೆ ಎಂದು ಪ್ರಧಾನಮಂತ್ರಿ ಅವರು ತಿಳಿಸಿದರು. ಸಮುದ್ರಕಳೆ ಫಾರ್ಮಿಂಗ್ ನ್ನು ಉತ್ತೇಜಿಸಬೇಕಾಗಿದೆ. ಮೀನುಗಾರರಿಗೆ ಆಧುನಿಕ ದೋಣಿಯನ್ನು ಖರೀದಿಸಲು ಆರ್ಥಿಕ ಸಹಾಯ ಪಡೆಯುತ್ತಿದ್ದಾರೆ ಎಂದು ಪ್ರದಾನಮಂತ್ರಿ ಅವರು ಹೇಳಿದರು. ಸೌರಶಕ್ತಿಯನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಭಾರತ ಕಾಳಜಿ ಪೂರ್ವಕ ಪ್ರಯತ್ನ ಮಾಡುತ್ತಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಈ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಸೌರ ಒಕ್ಕೂಟವನ್ನು ಅವರು ಉಲ್ಲೇಖಿಸಿದರು. ಸಮುದ್ರ ಪ್ರದೇಶವಾದ ಕಾರಣ ನವೀಕರಿಸಬಹುದಾದ ಇಂಧನ ಉತ್ಪಾದನೆಯ ವಿಫುಲ ಅವಕಾಶವಿದೆ ಹಾಗೂ ಕಾರ್ ನಿಕೊಬಾರ್ ನಲ್ಲಿ ಈ ದಿಸೆಯಲ್ಲಿ ಕೆಲಸಗಳಾಗುತ್ತದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಸಂಪೂರ್ಣ ನಿಕೊಬಾರ್ ದ್ವೀಪ ಉದ್ಧೇಶ ಮತ್ತು ಸನಿಹದ ಮಲಾಕ್ಕಾ ಜಲಸಂಧಿಗಳು ಸಂಪನ್ಮೂಲ ಮತ್ತು ಸುರಕ್ಷತೆ ದೃಷ್ಠಿಕೋನಗಳಿಂದ ಅತ್ಯಂತ ಪ್ರಮುಖ್ಯವಾಗಿವೆ, ಈ ನಿಟ್ಟಿನಲ್ಲಿ ಸಮರ್ಪಕ ಸಾರಿಗೆ ಮೂಲ ಸೌಕರ್ಯಗಳ ಅಭಿವೃದ್ಧಿ ಮಾಡಬೇಕಾಗಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಕ್ಯಾಂಪ್ ಬೆಲ್ ಬೇ ಜೆಟ್ಟಿ ಮತ್ತು ಮಸ್ ಜೆಟ್ಟಿ ಗಳ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅವರು ಮಾತನಾಡಿದರು.

ದ್ವೀಪದ ಅಭಿವೃದ್ಧಿಗಾಗಿ ತನ್ನ ಸರಕಾರ ಹೊಂದಿರುವ ಬದ್ಧತೆಗಳನ್ನು ಪ್ರಧಾನಮಂತ್ರಿ ಅವರು ಈ ಸಂದರ್ಭದಲ್ಲಿ ಪುನರುಚ್ಚರಿಸಿದರು.

***