Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕಾನ್ಪುರದ ವಾಯು ಪಡೆ ಸ್ಟೇಷನ್ ನಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕಾಗಿ 6.5628 ಎಕರೆ ರಕ್ಷಣಾ ಇಲಾಖೆ ಜಮೀನನ್ನು ಗುತ್ತಿಗೆ ಆಧಾರದ ಮೇಲೆ ಕೇಂದ್ರೀಯ ವಿದ್ಯಾಲಯ ಸಂಘಟನ್ ಗೆ ವರ್ಗಾಯಿಸಲು ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕಾನ್ಪುರದ ವಾಯು ಪಡೆ ಸ್ಟೇಷನ್ (ಎ.ಎಫ್.ಎಸ್., ಕಾನ್ಪುರ) ನಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕಾಗಿ 6.5628 ಎಕರೆ ರಕ್ಷಣಾ ಇಲಾಖೆ ಜಮೀನನ್ನು ಗುತ್ತಿಗೆ ಆಧಾರದ ಮೇಲೆ ಕೇಂದ್ರೀಯ ವಿದ್ಯಾಲಯ ಸಂಘಟನ್(ಕೆ.ವಿ.ಎಸ್) ಗೆ ವರ್ಗಾಯಿಸಲು ತನ್ನ ಅನುಮೋದನೆ ನೀಡಿದೆ. ಈ ಜಮೀನನ್ನು 16.6.2011ರ ಮುಂಚಿನ ನಿರ್ಧಾರಕ್ಕೆ ಭಾಗಶಃ ಮಾರ್ಪಾಡು ಮಾಡಿ ಶಾಲಾ ಕಟ್ಟಡ ಮತ್ತು ಇತರ ಪೂರಕ ಮೂಲಸೌಕರ್ಯ ನಿರ್ಮಾಣಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತದೆ. ಈ ಮುನ್ನ ಎ.ಎಫ್.ಎಸ್. ಕಾನ್ಪುರದ 8.90 ಎಕರೆ ರಕ್ಷಣಾ ಭೂಮಿಯನ್ನು ಕೆ.ವಿ.ಎಸ್.ಗೆ ವರ್ಗಾಯಿಸಲು ಅನುಮೋದನೆ ನೀಡಲಾಗಿತ್ತು.

ಈ ರಕ್ಷಣಾ ಭೂಮಿಯನ್ನು ಹಾಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಚಾಲ್ತಿಯಲ್ಲಿರುವ ಸರ್ಕಾರದ ನೀತಿಯ ನಿಯಮಗಳಂತೆ ಯಾವುದೇ ಪ್ರೀಮಿಯಂ ಇಲ್ಲದೆ ವಾರ್ಷಿಕ 1 ರೂಪಾಯಿ ನಾಮಮಾತ್ರದ ಬಾಡಿಗೆಯ ಆಧಾರದ ಮೇಲೆ ವರ್ಗಾಯಿಸಲಾಗುತ್ತದೆ. ಶಾಲೆಯ ಮೂಲಸೌಕರ್ಯವನ್ನು ತನ್ನದೇ ನಿರ್ದೇಶನ ಮತ್ತು ತಮ್ಮದೇ ಸ್ವಂತ ಹಣದಲ್ಲಿ ಕೆ.ವಿ.ಎಸ್. ನಿರ್ಮಿಸಲಿದೆ.

ಎ.ಎಫ್.ಎಸ್. ಕಾನ್ಪುರದ ಕೇಂದ್ರೀಯ ವಿದ್ಯಾಲಯವು 1985ರ ಆಗಸ್ಟ್ ನಿಂದ ತಾತ್ಕಾಲಿಕ ಬ್ಯಾರಕ್ ಮಾದರಿಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದು ಸಂಪೂರ್ಣವಾಗಿ ಶಾಲೆಗಾಗಿ ರೂಪಿಸಿರುವ ವಿಶೇಷಣೆಗಳನ್ನು ಸಂಪೂರ್ಣವಾಗಿ ಪೂರ್ಣಗೊಳಿಸುವುದಿಲ್ಲ. ಹಾಲಿ ಇರುವ ಕಟ್ಟಡವು ಹೆಚ್ಚುತ್ತಿರುವ ವಿದ್ಯಾರ್ಥಿಗಳಿಗೆ ಸಾಕಾಗದಾಗಿದೆ ಮತ್ತು ಸೌಲಭ್ಯಗಳ ಅಗತ್ಯವೂ ಇದೆ. ಭೂಮಿಯ ವರ್ಗಾವಣೆಯು ಕೆ.ವಿ.ಎಸ್.ಗೆ ತನ್ನ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗಾಗಿ ಸಕಲ ಅಗತ್ಯ ಸೌಲಭ್ಯಗಳು ಮತ್ತು ಸೌಕರ್ಯವಿರುವ ತನ್ನದೇ ಸ್ವಂತ ಶಾಲಾ ಕಟ್ಟಡ ನಿರ್ಮಾಣ ಮಾಡಲು ಅವಕಾಶ ನೀಡುತ್ತದೆ.

ಕೆ.ವಿ.ಎಸ್.ಗೆ ಜಮೀನು ವರ್ಗಾವಣೆ ಮಾಡುವ ಸಂಬಂಧದ ಔಪಚಾರಿಕತೆಗಳನ್ನು ಎರಡು ತಿಂಗಳುಗಳೊಳಗೆ ಮಾಡಬೇಕಾಗುತ್ತದೆ. ಕೆ.ವಿ.ಎಸ್. ನಂತರ ಈ ಗುತ್ತಿಗೆಯ ಜಮೀನಿನಲ್ಲಿ ತನ್ನದೆ ನಿರ್ದೇಶನ ಮತ್ತು ತಮ್ಮದೇ ಸ್ವಂತ ಹಣದಲ್ಲಿ ಶಾಲಾ ಕಟ್ಟಡ ಇತ್ಯಾದಿ ನಿರ್ಮಾಣ ಮಾಡುತ್ತದೆ.

****

AKT/VBA/SH