Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕಾಂಡ್ಲಾ ಬಂದರು ಟ್ರಸ್ಟ್ ನ ವಿವಿಧ ಯೋಜನೆಗೆ ಚಾಲನೆ ನೀಡಿದ ಪ್ರಧಾನಮಂತ್ರಿ

ಕಾಂಡ್ಲಾ ಬಂದರು ಟ್ರಸ್ಟ್ ನ ವಿವಿಧ ಯೋಜನೆಗೆ ಚಾಲನೆ ನೀಡಿದ ಪ್ರಧಾನಮಂತ್ರಿ

ಕಾಂಡ್ಲಾ ಬಂದರು ಟ್ರಸ್ಟ್ ನ ವಿವಿಧ ಯೋಜನೆಗೆ ಚಾಲನೆ ನೀಡಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ಇಂದು ಗುಜರಾತ್ ನ ಗಾಂಧಿಧಾಮದಲ್ಲಿ ಕಾಂಡ್ಲಾ ಬಂದರು ಟ್ರಸ್ಟ್ ನ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದರು.

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸಮುದಾಯ ಕೇಂದ್ರದ ನಿರ್ಮಾಣಕ್ಕಾಗಿ; ಮತ್ತು 14 ಮತ್ತು 16ನೇ ಜನರಲ್ ಕಾರ್ಗೋ ಬರ್ತ್ ಅಭಿವೃದ್ಧಿಯ ಶಂಕುಸ್ಥಾಪನೆ ನೆರವೇರಿಸಲು ಅವರು ಫಲಕದ ಅನಾವರಣ ಮಾಡಿದರು.

ಕಚ್ ಉಪ್ಪು ಜಂಕ್ಷನ್ ನಲ್ಲಿ ಅವರು ಅಂತರ ವಿನಿಮಯ ಸಹಿತ –ಆರ್.ಓ.ಬಿ. ನಿರ್ಮಾಣಕ್ಕೆ; ಎರಡು ಸಂಚಾರಿ ಬಂದರು ಕ್ರೇನ್ ನಿಯೋಜನೆ; ಮತ್ತು ಕಾಂಡ್ಲಾ ಬಂದರಿನಲ್ಲಿ ರಸಗೊಬ್ಬರ ನಿರ್ಮಹಣೆ ವ್ಯವಸ್ಥೆಯ ನಿರ್ಮಾಣಕ್ಕೆ ಮಂಜೂರಾತಿಯ ಪತ್ರವನ್ನೂ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಶ್ರೀ. ನಿತಿನ್ ಗಡ್ಕರಿ, ಸಾಗರ ಮಾಲಾ ಯೋಜನೆ ಮತ್ತು ಬಂದರು ನೇತೃತ್ವದ ಅಭಿವೃದ್ಧಿ ಗುಜರಾತ್ ರಾಜ್ಯದ ಮೇಲೆ ಧನಾತ್ಮಕ ಪರಿಣಾಮ ಬೀರಿದೆ ಮತ್ತು ಉದ್ಯೋಗ ಸೃಷ್ಟಿಯನ್ನೂ ಮಾಡಿದೆ ಎಂದರು.

ಗುಜರಾತ್ ಮುಖ್ಯಮಂತ್ರಿ ಶ್ರೀ. ವಿಜಯ್ ರೂಪಾನಿ ಅವರು ರಾಜ್ಯದ ಶ್ರೀಮಂತ ಸಾಗರ ಸಂಪ್ರದಾಯ ಕುರಿತು ಮಾತನಾಡಿ, ಈ ಸ್ಫೂರ್ತಿ ಇಂದಿಗೂ ಮುಂದುವರಿದಿದೆ ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ತಮಗೆ ಹೆಲಿಪ್ಯಾಡ್ ನಿಂದ ಸಭಾ ಕಾರ್ಯಕ್ರಮದ ಸ್ಥಳದವರೆಗೆ ರಸ್ತೆಯುದ್ದಕ್ಕೂ ಆತ್ಮೀಯ ಸ್ವಾಗತ ನೀಡಿದ ಜನತೆಗೆ ಧನ್ಯವಾದ ಅರ್ಪಿಸಿದರು.

ಕಚ್ ಜನತೆ ನೀರಿನ ಮಹತ್ವವನ್ನು ಚೆನ್ನಾಗಿ ಅರಿತಿದ್ದಾರೆ ಎಂದರು. ಕಚ್ ವಲಯದ ವೈಭವದ ಹಾಗೂ ಶ್ರೀಮಂತ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಅವರು ಮಾತನಾಡಿದರು.

ಭಾರತವು ಜಾಗತಿಕ ವಾಣಿಜ್ಯ ರಂಗದಲ್ಲಿ ತನ್ನದೇ ಸ್ಥಾನ ರೂಪಿಕೊಳ್ಳ ಬಯಸಿದರೆ, ಅದನ್ನು ಬಂದರು ವಲಯದಲ್ಲಿ ಉತ್ತಮವಾಗಿ ಮಾಡಿಕೊಳ್ಳಬಹುದಾಗಿದೆ ಎಂದು ಪ್ರಧಾನಿ ಹೇಳಿದರು.

ಮೂಲಸೌಕರ್ಯ ಮತ್ತು ಸಾಮರ್ಥ್ಯದ ಸಮ್ಮಿಲನ ಬಂದರು ವಲಯದ ಅಭಿವೃದ್ಧಿಗೆ ಅತ್ಯಂತ ಮಹತ್ವದ್ದಾಗಿ ಎಂದ ಅವರು, ಕಾಂಡ್ಲಾ ಬಂದರು ಏಷ್ಯಾದಲ್ಲಿ ಅತ್ಯುತ್ತಮ ಬಂದರುಗಳಲ್ಲಿ ಒಂದಾಗಿ ಹೊರಹೊಮ್ಮಿದೆ ಎಂದರು.

ಇರಾನ್ ನಲ್ಲಿ ಚಬಹರ್ ಬಂದರನ್ನು ಭಾರತದ ಪಾಲುದಾರಿಕೆಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ, ಇದು ಕಾಂಡ್ಲಾ ಬಂದರಿನ ಅಭಿವೃದ್ದಿಗೂ ಇಂಬು ನೀಡುತ್ತದೆ ಎಂದರು. ಇಂದು ಶಂಕುಸ್ಥಾಪನೆ ನೆರವೇರಿಸಲಾದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸಮುದಾಯ ಕೇಂದ್ರದ ಬಗ್ಗೆಯೂ ಪ್ರಧಾನಿ ಪ್ರಸ್ತಾಪಿಸಿದರು.

ಭಾರತ 75ನೇ ಸ್ವಾತಂತ್ರ್ಯೋತ್ಸವ ಆಚರಿಸುವ ಹೊತ್ತಿಗೆ ಮುಂದಿನ ಐದು ವರ್ಷಗಳಲ್ಲಿ ದೇಶಕ್ಕೆ ಏನೇನು ಕೊಡಗೆ ನೀಡಲು ಸಾಧ್ಯವೋ ಅದರ ಸಂಕಲ್ಪ ಮಾಡುವಂತೆ ಜನತೆಗೆ ಪ್ರಧಾನಿ ಕರೆ ನೀಡಿದರು.

ದೇಶ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಶತಮಾನೋತ್ಸವ ವರ್ಷ ಆಚರಿಸುತ್ತಿದ್ದು, ಕಾಂಡ್ಲಾ ಬಂದರು ಟ್ರಸ್ಟ್ ಗೆ ‘ದೀನದಯಾಳ್ ಬಂದರು ಟ್ರಸ್ಟ್ – ಕಾಂಡ್ಲಾ’ ಎಂದು ಪುನರ್ನಾಮಕರಣ ಮಾಡಲಾಗುವುದು ಎಂದು ತಿಳಿಸಿದರು

****

AKT/NT