Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕಸ್ಟಮ್ಸ್ ವಿಚಾರಗಳಲ್ಲಿ ಪರಸ್ಪರ ನೆರವು ಮತ್ತು ಸಹಕಾರಕ್ಕಾಗಿ ಭಾರತ ಮತ್ತು ಪಿಲಿಪ್ಪೀನ್ಸ್ ನಡುವಿನ ಒಪ್ಪಂದಕ್ಕೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕಸ್ಟಮ್ಸ್ (ಸೀಮಾ ಸುಂಕ) ವಿಚಾರಗಳಲ್ಲಿ ಪರಸ್ಪರ ನೆರವು ಮತ್ತು ಸಹಕಾರಕ್ಕಾಗಿ ಭಾರತ ಮತ್ತು ಪಿಲಿಪ್ಪೀನ್ಸ್ ನಡುವಿನ ಒಪ್ಪಂದಕ್ಕೆ ಅಂಕಿತ ಹಾಕಲು ಮತ್ತು ಸ್ಥಿರೀಕರಿಸಲು ತನ್ನ ಅನುಮೋದನೆ ನೀಡಿದೆ.

ಈ ಒಪ್ಪಂದವು ಕಸ್ಟಮ್ಸ್ ಅಪರಾಧಗಳ ತಡೆ ಮತ್ತು ತನಿಖೆಗಾಗಿ ಸೂಕ್ತ ಮಾಹಿತಿಯನ್ನು ಪಡೆದುಕೊಳ್ಳಲು ನೆರವಾಗುತ್ತದೆ. ಈ ಒಪ್ಪಂದವು ವಾಣಿಜ್ಯಕ್ಕೆ ಅವಕಾಶ ನೀಡುವುದರ ಜೊತೆಗೆ ಎರಡೂ ದೇಶಗಳ ನಡುವೆ ಮಾರಾಟವಾದ ಸರಕುಗಳ ಸಮರ್ಥ ವಿಲೇವಾರಿಯ ಖಾತ್ರಿಯನ್ನೂ ಒದಗಿಸಲಿದೆ.
ಎರಡೂ ದೇಶಗಳು ಈ ಒಪ್ಪಂದದ ಜಾರಿಗೆ ಅಗತ್ಯವಿರುವ ರಾಷ್ಟ್ರೀಯ ಕಾನೂನು ಅವಶ್ಯಕತೆಗಳನ್ನು ಪೂರೈಸಿದ ನಂತರ ಈ ಒಪ್ಪಂದ ಜಾರಿಗೆ ಬರಲಿದೆ.
ಹಿನ್ನೆಲೆ: 
ಈ ಒಪ್ಪಂದವು ಎರಡೂ ದೇಶಗಳ ಕಸ್ಟಮ್ಸ್ ಪ್ರಾಧಿಕಾರಗಳಿಗೆ ಬೇಹುಗಾರಿಕೆ ಮತ್ತು ಮಾಹಿತಿಯ ವಿನಿಮಯಕ್ಕೆ ಕಾನೂನಾತ್ಮಕ ಚೌಕಟ್ಟು ಒದಗಿಸುತ್ತದೆ. ಕಸ್ಟಮ್ಸ್ ಅಪರಾಧತಡೆಗಟ್ಟುವಿಕೆ ಮತ್ತು ತನಿಖೆಗೆ ಕಸ್ಟಮ್ಸ್ ಕಾನೂನುಗಳ ಸೂಕ್ತ ಬಳಕೆಗೆ ಮತ್ತು  ನ್ಯಾಯಸಮ್ಮತ ಸುಗಮ ವ್ಯಾಪಾರಕ್ಕೆ ನೆರವಾಗುತ್ತದೆ. ಪ್ರಸ್ತಾಪಿತ ಒಪ್ಪಂದದ ಕರಡು ಪಠ್ಯವನ್ನು ಎರಡೂ ದೇಶಗಳ ಕಸ್ಟಮ್ಸ್ ಆಡಳಿತದ ಸಮ್ಮತಿಯೊಂದಿಗೆ ಆಖೈರುಗೊಳಿಸಲಾಗಿದೆ. ಈ ಕರಡು ಒಪ್ಪಂದವು ಭಾರತೀಯ ಕಸ್ಟಮ್ಸ್ ಕಳಕಳಿಗಳನ್ನು ಮತ್ತು ಅಗತ್ಯಗಳನ್ನು ಅದರಲ್ಲೂ ಎರಡೂ ದೇಶಗಳ ನಡುವೆ ವ್ಯಾಪಾರವಾದ ಸರಕಿನ ಮೂಲ ಕುರಿತ ಖಚಿತತೆಯ ಪ್ರಮಾಣ ಪತ್ರ ಮತ್ತು ಸೀಮಾ ಸುಂಕದ ಮೌಲ್ಯ ಘೋಷಣೆ ಕುರಿತ ನಿಖರ ಮಾಹಿತಿಯ ವಿನಿಮಯದ ಕಾಳಜಿ ವಹಿಸುತ್ತದೆ.