ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕಸ್ಟಂಸ್ ವಿಚಾರಗಳಲ್ಲಿ ಪರಸ್ಪರ ನೆರವು ಮತ್ತು ಸಹಕಾರಕ್ಕೆ ಸಂಬಂಧಿಸಿದಂತೆ ಉರುಗ್ವೆಯೊಂದಿಗೆ ಭಾರತ ಒಪ್ಪಂದಕ್ಕೆ ಅಂಕಿತ ಹಾಕಲು ಮತ್ತು ಸ್ಥಿರೀಕರಿಸಲು ತನ್ನ ಅನುಮೋದನೆ ನೀಡಿದೆ.
ಈ ಒಪ್ಪಂದವು, ಕಸ್ಟಮ್ಸ್ ಅಪರಾಧಗಳ ತನಿಖೆಗ ಮತ್ತು ತಡೆಗಾಗಿ ಸೂಕ್ತ ಮಾಹಿತಿಯ ಲಭ್ಯತೆಗೆ ಸಹಾಯ ಮಾಡುತ್ತದೆ. ಈ ಒಪ್ಪಂದವು ವಾಣಿಜ್ಯಕ್ಕೆ ಅವಕಾಶ ನೀಡುತ್ತದೆ ಮತ್ತು ಎರಡು ರಾಷ್ಟ್ರಗಳ ನಡುವೆ ನಡೆದ ವಾಣಿಜ್ಯದ ಸರಕುಗಳ ಸಮರ್ಥ ವಿಲೇವಾರಿಯ ಖಾತ್ರಿಯನ್ನು ಒದಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ಈ ಕರಡು ಒಪ್ಪಂದವು ಭಾರತೀಯ ಕಸ್ಟಮ್ಸ್ ಕಾಳಜಿಗಳು ಮತ್ತು ಅಗತ್ಯಗಳು ಅದರಲ್ಲೂ ಕಸ್ಟಮ್ ಮೌಲ್ಯ ಘೋಷಣೆ, ಸರಕುಗಳ ಮೂಲದ ನೆಲೆಯ ಪ್ರಮಾಣಪತ್ರದ ನಿಖರತೆ ಮತ್ತು ಎರಡೂ ರಾಷ್ಟ್ರಗಳ ನಡುವೆ ನಡೆದ ಸರಕುಗಳ ವ್ಯಾಪಾರದ ವಿವರಣೆ ಸಂಬಂಧಿಸಿದಂತೆ ನಿಖರತೆಯ ಮಾಹಿತಿಯ ವಿನಿಮಯ ಕ್ಷೇತ್ರದ ಹೊಣೆಯನ್ನು ನೋಡಿಕೊಳ್ಳುತ್ತದೆ.
ಹಿನ್ನೆಲೆ:
ಉರುಗ್ವೆಯು ಲ್ಯಾಟಿನ್ ಅಮೆರಿಕಾದ ವಾಣಿಜ್ಯ ವಿಭಾಗ ಮೆರ್ಕೋಸುರ್ ಸದಸ್ಯರ ಪೈಕಿ ಭಾರತದ ಮಹತ್ವದ ವಾಣಿಜ್ಯ ಪಾಲುದಾರ ರಾಷ್ಟ್ರವಾಗಿದೆ. ಭಾರತವು ಮೆರ್ಕೋಸುರ್ ನೊಂದಿಗೆ ಐಚ್ಛಿಕ ವಾಣಿಜ್ಯ ಒಪ್ಪಂದ (ಪಿಟಿಎ)ಗೆ ಅಂಕಿತ ಹಾಕಿದ್ದು, ಇದು 2009ರ ಜೂನ್ 1ರಿಂದ ಜಾರಿಗೆ ಬಂದಿದೆ. ಭಾರತ ಮತ್ತು ಉರುಗ್ವೆ ನಡುವಿನ ವಾಣಿಜ್ಯ ಕ್ರಮೇಣ ವಿಸ್ತಾರವಾಗಿದೆ. ಈ ಒಪ್ಪಂದವು ಎರಡೂ ರಾಷ್ಟ್ರಗಳ ನಡುವಿನ ಕಸ್ಟಮ್ಸ್ ಪ್ರಾಧಿಕಾರಗಳ ನಡುವೆ ಮಾಹಿತಿಯ ವಿನಮಯಕ್ಕೆ ಕಾನೂನು ಚೌಕಟ್ಟು ಒದಗಿಸುತ್ತದೆ ಮತ್ತು ಕಸ್ಟಮ್ಸ್ ಕಾನೂನು, ಕಸ್ಟಮ್ಸ್ ಅಪರಾಧಗಳ ತಡೆ ಮತ್ತು ತನಿಖೆ ಮತ್ತು ಕಾನೂನುಬದ್ಧ ವಾಣಿಜ್ಯಕ್ಕೆ ಅವಕಾಶ ಕಲ್ಪಿಸುತ್ತದೆ. ಈ ಉದ್ದೇಶಿತ ಒಪ್ಪಂದದ ಕರಡನ್ನು ಎರಡೂ ರಾಷ್ಟ್ರಗಳ ಕಸ್ಟಮ್ಸ್ ಆಡಳಿತದ ಸಮ್ಮತಿಯೊಂದಿಗೆ ಆಖೈರುಗೊಳಿಸಲಾಗುತ್ತದೆ.
AKT/VBA/SH