Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕಲೈನಾರ್ ಕರುಣಾನಿಧಿ ನಿಧನಕ್ಕೆ ಪ್ರಧಾನ ಮಂತ್ರಿ ಸಂತಾಪ.


ಕಲೈನಾರ್ ಕರುಣಾನಿಧಿ ನಿಧನಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

“ಕಲೈನಾರ್ ಕರುಣಾನಿಧಿ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಅವರು ಭಾರತದ ಅತ್ಯಂತ ಹಿರಿಯ ನಾಯಕರಲ್ಲಿ ಒಬ್ಬರು. ನಾವು ಜನಮಾನಸದಲ್ಲಿ ಆಳವಾಗಿ ಬೇರೂರಿದ್ದ ಜನನಾಯಕರೊಬ್ಬರನ್ನು ಕಳೆದುಕೊಂಡಿದ್ದೇವೆ, ಅವರೊಬ್ಬ ಖ್ಯಾತ ಚಿಂತಕರಾಗಿದ್ದರು, ಉತ್ತಮ ಬರಹಗಾರರಾಗಿದ್ದರು ಮತ್ತು ಬಡವರ ಹಾಗೂ ಬಡತನದ ಅಂಚಿನಲ್ಲಿರುವವರ ಕಲ್ಯಾಣಕ್ಕಾಗಿ ಜೀವನವನ್ನು ಮುಡಿಪಾಗಿಟ್ಟ ದಿಗ್ಗಜರಾಗಿದ್ದರು.

ಕಲೈನಾರ್ ಕರುಣಾನಿಧಿ ಪ್ರಾದೇಶಿಕ ಆಶೋತ್ತರಗಳ ಪರವಾಗಿ ನಿಂತವರು ಮತ್ತು ರಾಷ್ಟ್ರೀಯ ಪ್ರಗತಿಗಾಗಿಯೂ ಶ್ರಮಿಸಿದವರು. ಅವರು ತಮಿಳರ ಕಲ್ಯಾಣಕ್ಕಾಗಿ ಅಹರ್ನಿಶಿ ದುಡಿದವರು ಮತ್ತು ತಮಿಳುನಾಡಿನ ಧ್ವನಿ ಕೇಳಿಸುವಂತೆ ಮಾಡುವಲ್ಲಿ ಕ್ರಿಯಾಶೀಲ ಪಾತ್ರ ವಹಿಸಿದವರು.

ಹಲವು ಸಂಧರ್ಭಗಳಲ್ಲಿ ನನಗೆ ಕರುಣಾನಿಧಿ ಜೀ ಅವರ ಜತೆ ಸಂವಾದ ನಡೆಸುವ ಅವಕಾಶ ಪ್ರಾಪ್ತವಾಗಿತ್ತು. ನೀತಿಯನ್ನು ಅರ್ಥ ಮಾಡಿಕೊಳ್ಳುವ ಮತ್ತು ಸಾಮಾಜಿಕ ಕಲ್ಯಾಣಕ್ಕೆ ಅವರ ಆದ್ಯತೆ ಗಮನಾರ್ಹವಾದುದು. ಪ್ರಜಾಸತ್ತಾತ್ಮಕ ಆದರ್ಶಗಳಿಗೆ ದೃಢ ಬದ್ಧತೆ ಹೊಂದಿದ್ದ ಅವರು ತುರ್ತು ಪರಿಸ್ಥಿತಿಗೆ ವ್ಯಕ್ತಪಡಿಸಿದ ಬಲವಾದ ವಿರೋಧ ಸದಾ ಸ್ಮರಣೀಯ.

ಕರುಣಾನಿಧಿ ಜೀ ಅವರ ಕುಟುಂಬ ಮತ್ತು ಅಸಂಖ್ಯಾತ ಬೆಂಬಲಿಗರ ಜೊತೆ ಈ ದುಃಖದ ಸಂಧರ್ಭದಲ್ಲಿ ನಾನೂ ಸಹಭಾಗಿ. ಅವರಿಗೆ ದುಃಖ ಭರಿಸುವ ಶಕ್ತಿ ಲಭಿಸಲಿ. ಭಾರತ ಮತ್ತು ನಿರ್ದಿಷ್ಟವಾಗಿ ತಮಿಳುನಾಡು ಅವರನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ” ಎಂದು ಪ್ರಧಾನ ಮಂತ್ರಿ ಶೋಕಿಸಿದ್ದಾರೆ.

***