Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕರ್ನಾಟಕದಲ್ಲಿ ಎಸ್ಟಿ ಪಟ್ಟಿಗೆ “ನಾಯಕ” ಸಮಾನಾರ್ಥವಾದ ” ಪರಿವಾರ ಮತ್ತು ತಳವಾರ’ ಸಮುದಾಯಗಳ ಸೇರ್ಪಡೆಗೆ ಸಂಪುಟ ಸಮ್ಮತಿ


ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಕರ್ನಾಟಕದಲ್ಲಿ “ನಾಯಕ’ ಪದಕ್ಕೆ ಸಮಾನಾರ್ಥಕವಾದ “ಪರಿವಾರ ಮತ್ತು ತಳವಾರ’ ಸಮುದಾಯಗಳನ್ನು ಎಸ್ಟಿ ಪಟ್ಟಿಯ ಶ್ರೇಣಿ ಸಂಖ್ಯೆ 38ರಲ್ಲಿ ಸೇರ್ಪಡೆಗೊಳಿಸಲು ತಾತ್ವಿಕ ಒಪ್ಪಿಗೆ ನೀಡಿದೆ. 
 
ಪರಿಣಾಮ: ಕರ್ನಾಟಕದಲ್ಲಿ ತಮ್ಮನ್ನು ಎಸ್ಟಿ ಪಟ್ಟಿಯಲ್ಲಿ ಸೇರ್ಪಡೆಗೊಳಿಸಬೇಕೆಂಬ “ಪರಿವಾರ’ ಮತ್ತು ‘ತಳವಾರ’ ಸಮುದಾಯಗಳ ಬಹುಕಾಲದ ಬೇಡಿಕೆಯನ್ನು ಈ ನಿರ್ಧಾರವು ಈಡೇರಿಸಲಿದೆ. ಇದರಿಂದ “ಪರಿವಾರ’ ಮತ್ತು “ತಳವಾರ’ ಸಮುದಾಯಗಳವರು ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ಪ್ರಮಾಣಪತ್ರ ಪಡೆಯಲು ಅರ್ಹರಾಗಲಿದ್ದಾರೆ ಮತ್ತು ಪರಿಶಿಷ್ಟ ಪಂಗಡಕ್ಕೆ ಲಭ್ಯವಾಗುವ ಎಲ್ಲ ಸವಲತ್ತುಗಳನ್ನು ಪಡೆಯಲು ಅರ್ಹತೆ ಗಳಿಸಲಿದ್ದಾರೆ.
 
ಹಿನ್ನೆಲೆ:
“ನಾಯಕ’ ಪದಕ್ಕೆ ಸಮಾನಾರ್ಥಕವಾದ “ಪರಿವಾರ ಮತ್ತು ತಳವಾರ’ ಸಮುದಾಯಗಳನ್ನು ಎಸ್ಟಿ ಪಟ್ಟಿಯ ಶ್ರೇಣಿ ಸಂಖ್ಯೆ 38ರಲ್ಲಿ ಸೇರ್ಪಡೆಗೊಳಿಸಬೇಕೆಂದು ಕರ್ನಾಟಕ ಸರ್ಕಾರವು ಶಿಫಾರಸು ಮಾಡಿತ್ತು.
 
ನಿರ್ದಿಷ್ಟ ರಾಜ್ಯ ಇಲ್ಲವೇ ಕೇಂದ್ರಾಡಳಿತ ಪ್ರದೇಶದ ಶಿಫಾರಸನ್ನು ಆಧರಿಸಿ, ಆ ರಾಜ್ಯ/ಕೇಂದ್ರಾಡಳಿತ ಪ್ರದೇಶದೊಡನೆ ಚರ್ಚೆ ಬಳಿಕ ಪರಿಶಿಷ್ಟ ಪಂಗಡವೊಂದನ್ನು ಪಟ್ಟಿಗೆ ಸೇರ್ಪಡೆಗೊಳಿಸಿರು ವುದಾಗಿ ರಾಷ್ಟ್ರಪತಿಯವರು ಆದೇಶ ಹೊರಡಿಸುತ್ತಾರೆ. ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರ್ಪಡೆ ಇಲ್ಲವೇ ತೆಗೆದುಹಾಕುವಿಕೆ ಮತ್ತು ಮಾರ್ಪಡಿಸುವಿಕೆಯನ್ನು ಸಂಸತ್ತಿನಲ್ಲಿ ಕಾಯಿದೆಯ ತಿದ್ದುಪಡಿ ಮೂಲಕ ಮಾತ್ರವಷ್ಟೇ ಮಾಡಬಹುದಾಗಿದೆ. 
………………………………