ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀಮತಿ ಉಮಾ ಸಚ್ದೇವ ಅವರನ್ನು ಭೇಟಿ ಮಾಡಿದರು. 90 ವರ್ಷದ ಅವರು ತಮ್ಮ ದಿವಂಗತ ಪತಿ ಕರ್ನಲ್ (ನಿವೃತ್ತ) ಎಚ್.ಕೆ.ಸಚ್ದೇವ ಅವರು ಬರೆದ 3 ಪುಸ್ತಕಗಳ ಪ್ರತಿಗಳನ್ನು ಪ್ರಧಾನ ಮಂತ್ರಿಯವರಿಗೆ ನೀಡಿದರು.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿಯವರು ಹೀಗೆ ಹೇಳಿದ್ದಾರೆ:
“ಇಂದು ನಾನು ಶ್ರೀಮತಿ ಉಮಾ ಸಚ್ದೇವ ಅವರೊಂದಿಗೆ ಸ್ಮರಣೀಯ ಸಂವಾದ ನಡೆಸಿದ್ದೇನೆ. ಅವರಿಗೆ 90 ವರ್ಷ ವಯಸ್ಸಾದರೂ ಅತ್ಯಂತ ಉತ್ಸಾಹ ಮತ್ತು ಆಶಾವಾದದ ಮನೋಭಾವ ಹೊಂದಿದ್ದಾರೆ. ಅವರ ಪತಿ, ಕರ್ನಲ್ (ನಿವೃತ್ತ) ಎಚ್.ಕೆ. ಸಚ್ದೇವ ಅವರು ವ್ಯಾಪಕವಾಗಿ ಗೌರವಿಸಲ್ಪಟ್ಟವರು. ಉಮಾ ಅವರು ಜನರಲ್ ವೇದಮಲಿಕ್@Vedmalik1 ಅವರ ಚಿಕ್ಕಮ್ಮ.”
“ಉಮಾ ಅವರು ತಮ್ಮ ದಿವಂಗತ ಪತಿ ಬರೆದ 3 ಪುಸ್ತಕಗಳ ಪ್ರತಿಗಳನ್ನು ನನಗೆ ನೀಡಿದರು. ಅವುಗಳಲ್ಲಿ ಎರಡು ಗೀತೆಯೊಂದಿಗೆ ಸಂಬಂಧ ಹೊಂದಿವೆ. ‘ರಕ್ತ ಮತ್ತು ಕಣ್ಣೀರು’ ಎಂಬ ಶೀರ್ಷಿಕೆಯ ಮೂರನೆಯ ಪುಸ್ತಕವು ಕರ್ನಲ್ (ನಿವೃತ್ತ) ಎಚ್.ಕೆ.ಸಚ್ದೇವ ಅವರಿಗೆ ವಿಭಜನೆಯ ಆಘಾತಕಾರಿ ಅವಧಿಯಲ್ಲಿ ಆದ ಅನುಭವಗಳು ಮತ್ತು ಅವರ ಜೀವನದ ಮೇಲೆ ಅದು ಬೀರಿದ ಪರಿಣಾಮಗಳ ಹೃದಯಸ್ಪರ್ಶಿ ವೃತ್ತಾಂತವಾಗಿದೆ.”
“ವಿಭಜನೆಯಿಂದ ತೊಂದರೆಗೊಳಗಾದವರಿಗೆ, ತಮ್ಮ ಜೀವನವನ್ನು ಮೊದಲಿನಿಂದ ಕಟ್ಟಿಕೊಂಡವರಿಗೆ ಮತ್ತು ರಾಷ್ಟ್ರೀಯ ಪ್ರಗತಿಗೆ ಕೊಡುಗೆ ನೀಡಿದವರಿಗೆ ಗೌರವ ಸಲ್ಲಿಸುವ ಸಲುವಾಗಿ ಆಗಸ್ಟ್ 14 ಅನ್ನು ʻವಿಭಜನೆಯ ಭಯಾನಕತೆಯ ಸ್ಮರಣೆ ದಿನʼವನ್ನಾಗಿ ಆಚರಿಸುವ ಭಾರತದ ನಿರ್ಧಾರದ ಬಗ್ಗೆ ನಾವು ಚರ್ಚಿಸಿದೆವು. ಅವರು ಮಾನವನ ಚೈತನ್ಯ ಮತ್ತು ಸ್ಥೈರ್ಯವನ್ನು ಪ್ರತಿಬಿಂಬಿಸುತ್ತವೆ.”
*****
Today I had a memorable interaction with Smt. Uma Suchdeva Ji. She is 90 years old and is blessed with great vigour and a spirit of optimism. Her husband, Colonel (Retd) HK Suchdeva was a widely respected veteran. Uma Ji is the aunt of General @Vedmalik1 Ji. pic.twitter.com/DMM3dyfgZO
— Narendra Modi (@narendramodi) October 7, 2022
Uma Ji gave me copies of 3 books penned by her late husband. Two of them are associated with the Gita and the third one titled 'Blood and Tears' is a moving account of Col (Retd) HK Suchdeva's experiences during the traumatic period of Partition and its impact on his life. pic.twitter.com/W79BEXFLpi
— Narendra Modi (@narendramodi) October 7, 2022
We discussed India’s decision to mark 14th August as Partition Horrors Remembrance Day as a tribute to those who suffered due to Partition, built their lives from scratch and contributed to national progress. They epitomise human resilience and fortitude.
— Narendra Modi (@narendramodi) October 7, 2022