Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

“ಕರೆನ್ಸಿ ಚೌಕಟ್ಟಿಗೆ” ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು “ಸಾರ್ಕ್ ಸದಸ್ಯ ರಾಷ್ಟ್ರಗಳಿಗೆ ಒಟ್ಟು 2 ಬಿಲಿಯನ್  ಅಮೆರಿಕನ್ ಡಾಲರ್ ಗಾತ್ರದ  ಸೌಲಭ್ಯದೊಳಗೆ  400 ಮಿಲಿಯನ್ ಅಮೆರಿಕನ್ ಡಾಲರ್ ತಾತ್ಕಾಲಿಕ  ಅವಲಂಬನೆಯ ವಿನಿಮಯ ಒದಗಿಸುವ ಮತ್ತು ಭಾರತದ ದೇಶೀಯ ಆವಶ್ಯಕತೆಗಳು ಹಾಗು ಕೋರಿಕೆ ಸಲ್ಲಿಸುವ ಸಾರ್ಕ್ ಸದಸ್ಯ ರಾಷ್ಟ್ರಗಳ ಪರಿಸ್ಥಿತಿಗಳನ್ನು ಪರಿಶೀಲಿಸಿ ಅದರ ಕಾರ್ಯನಿರ್ವಹಣೆ ಮಾದರಿಯಲ್ಲಿ  ವಿನಿಮಯದ ಅವಧಿ, ರೋಲ್ ಓವರ್, ಇತ್ಯಾದಿಗಳ ವಿಷಯಗಳಲ್ಲ್ಲಿ ಕೊಂಚ ಸಡಿಲಿಕೆ  ತರುವ ’ ಕರೆನ್ಸಿ ವಿನಿಮಯ ವ್ಯವಸ್ಥೆಯ ಚೌಕಟ್ಟಿ”ಗೆ ಪೂರ್ವಾನ್ವಯಗೊಂಡಂತೆ ತನ್ನ ಅನುಮೋದನೆ ನೀಡಿತು.

 
ಮುಖ್ಯಾಂಶಗಳು:
 
ಜಾಗತಿಕ ಆರ್ಥಿಕತೆಯಲ್ಲಿಯ ಹೊಯ್ದಾಟ ಮತ್ತು ಹಣಕಾಸು ಅಪಾಯ ಹೆಚ್ಚಳದ ಹಿನ್ನೆಲೆಯಲ್ಲಿ  ಸಾರ್ಕ್ ದೇಶಗಳ ಅಲ್ಪಾವಧಿ ವಿನಿಮಯ ಆವಶ್ಯಕತೆ ಒಪ್ಪಿತ ಪ್ರಮಾಣಕ್ಕಿಂತ ಹೆಚ್ಚಾಗಿರುತ್ತದೆ. ಅನುಮೋದಿಸಲ್ಪಟ್ಟ ಸಾರ್ಕ್ ವಿನಿಮಯ ಚೌಕಟ್ಟಿನೊಳಗೆ  “ತತ್ಕಾಲೀನ ಅವಲಂಬನೆಯ ವಿನಿಮಯ ಅಥವಾ ಪರ್ಯಾಯ ವಿನಿಮಯ “ ವ್ಯವಸ್ಥೆಯೊಂದರ ಅಳವಡಿಕೆ   ಚೌಕಟ್ಟಿಗೆ ಒಂದು ಅವಶ್ಯವಾದ ಸಡಿಲಿಕೆಯನ್ನು , ಸ್ಥಿತಿಸ್ಥಾಪಕತ್ವವನ್ನು ಒದಗಿಸುತ್ತದೆ ಮತ್ತು ಅದು ಸಾರ್ಕ್ ವಿನಿಮಯ ಚೌಕಟ್ಟಿನೊಳಗೆ  ಸದಸ್ಯ ರಾಷ್ಟ್ರಗಳು ಈಗಿರುವ ನಿಗದಿತ ವಿನಿಮಯ ಮೊತ್ತದ ಮಿತಿಯನ್ನು ಮೀರಿದಾಗ ಸಲ್ಲಿಸುವ ಕೋರಿಕೆಗೆ ಸೂಕ್ತವಾಗಿ ಸ್ಪಂದಿಸುವುದಕ್ಕೆ ಭಾರತಕ್ಕೆ ಅನುವು ಮಾಡಿಕೊಡುತ್ತದೆ. 

 

ಹಿನ್ನೆಲೆ:
 
ಸಾರ್ಕ್ ಸದಸ್ಯ ರಾಷ್ಟ್ರಗಳಿಗಾಗಿ ಕರೆನ್ಸಿ ವಿನಿಮಯ ವ್ಯವಸ್ಥೆಗೆ ಚೌಕಟ್ಟನ್ನು , ಅಲ್ಪ ಕಾಲೀನ ವಿದೇಶೀ ವಿನಿಮಯದ ಅಗತ್ಯವನ್ನು ಪೂರೈಸುವ ಹಣಕಾಸು ಒದಗಣೆಯ ಉದ್ದೇಶದಿಂದಾಗಿ ಅಥವಾ ಪಾವತಿ ಬಾಕಿ ಬಿಕ್ಕಟ್ಟಿನ ಸಂದರ್ಭದಲ್ಲಿ ಧೀರ್ಘ ಕಾಲೀನ ವ್ಯವಸ್ಥೆ ಆಗುವವರೆಗೆ ಪರಿಸ್ಥಿತಿ ನಿಭಾಯಿಸುವುದಕ್ಕಾಗಿ ಅಥವಾ ಅಲ್ಪಾವಧಿಯಲ್ಲಿ ಸಮಸ್ಯೆ ತಾನಾಗಿಯೇ ಬಗೆಹರಿಯುವವರೆಗೆ ನಿಧಿ ಒದಗಿಸುವ ಉದ್ದೇಶದಿಂದ 2012 ರ ಮಾರ್ಚ್ 1 ರಂದು ರೂಪಿಸಿದ್ದು , ಇದಕ್ಕೆ ಸಂಪುಟವು ಅಂಗೀಕಾರ ನೀಡಿತು. ಈ ಸವಲತ್ತಿನಡಿಯಲ್ಲಿ ಆರ್.ಬಿ.ಐ.ಯು ವಿವಿಧ ಗಾತ್ರದಲ್ಲಿ ಅಮೆರಿಕನ್ ಡಾಲರು, ಯುರೋ ಅಥವಾ ಐ.ಎನ್.ಆರ್.ಗಳಲ್ಲಿ ವಿನಿಮಯವನ್ನು ಪ್ರತೀ ಸಾರ್ಕ್ ದೇಶಗಳಿಗೆ, ಅವುಗಳ ಎರಡು ತಿಂಗಳ ಆಮದಿನ ಅವಶ್ಯಕತೆಗೆ ಅನುಗುಣವಾಗಿ, ಆದರೆ ಒಟ್ಟು ಮೊತ್ತ 2 ಬಿಲಿಯನ್ ಅಮೆರಿಕನ್ ಡಾಲರು ಮೀರದಂತೆ ಒದಗಿಸುತ್ತದೆ. ಮೇಲಿನ ಸೌಲಭ್ಯದಲ್ಲಿ ಪ್ರತೀ ದೇಶಕ್ಕೆ ವಿನಿಮಯ ಮೊತ್ತವನ್ನು ನಿಷ್ಕರ್ಶೆ ಮಾಡಲಾಗಿದ್ದು, 100 ಮಿಲಿಯನ್ ಅಮೆರಿಕನ್ ಡಾಲರುಗಳಿಂದ ಹಿಡಿದು ಗರಿಷ್ಟ 400 ಮಿಲಿಯನ್ ಅಮೇರಿಕನ್ ಡಾಲರುಗಳವರೆಗೆ ಇರುತ್ತದೆ. ಪ್ರತೀ ವಿನಿಮಯದ ಅವಧಿಯನ್ನು ಮೂರು ತಿಂಗಳು ಎಂದು ನಿಗದಿ ಮಾಡಲಾಗಿದ್ದು, ಗರಿಷ್ಟ ಎರಡು ’ರೋಲ್ ಓವರ್’ ಗಳನ್ನು ಮಾಡಬಹುದಾಗಿದೆ.
 
ಅವಲಂಬನೆಯ ಪರ್ಯಾಯ ವಿನಿಮಯಕ್ಕೆ ಸಂಬಂಧಿಸಿ ಕಾರ್ಯಾಚರಣಾ ವಿವರಗಳಿಗಾಗಿ ಸಾರ್ಕ್ ದೇಶಗಳ ಕೇಂದ್ರೀಯ ಬ್ಯಾಂಕುಗಳ ಜೊತೆ ಆರ್.ಬಿ.ಐ. ವ್ಯವಹರಿಸುತ್ತದೆ.