Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕಪ್ಪುಹಣ, ಭಯೋತ್ಪಾದನೆ ಮತ್ತು ಭ್ರಷ್ಟಾಚಾರದ ವಿರುದ್ಧ ಪ್ರಸ್ತುತ ನಡೆಸುತ್ತಿರುವ ಯಜ್ಞದಲ್ಲಿ ಹೃತ್ಪೂರ್ವಕವಾಗಿ ಭಾಗಿಯಾದ ಜನತೆಗೆ ಪ್ರಧಾನಿ ನಮನ


ಹಣಕಾಸು ವ್ಯವಹಾರಗಳಲ್ಲಿ ನಗದುರಹಿತ ಪಾವತಿ ಮತ್ತು ಇತ್ತೀಚಿನ ತಂತ್ರಜ್ಞಾನ ಅಳವಡಿಸಿಕೊಳ್ಳಲು ಜನತೆ ಮನವಿ

ಭ್ರಷ್ಟಾಚಾರ, ಭಯೋತ್ಪಾದನೆ ಮತ್ತು ಕಪ್ಪುಹಣದ ವಿರುದ್ಧ ಪ್ರಸ್ತುತ ನಡೆಯುತ್ತಿರುವ  ಯಜ್ಞದಲ್ಲಿ ಹೃದಯಪೂರ್ವಕವಾಗಿ ಪಾಲ್ಗೊಂಡಿರುವ ಭಾರತದ ಜನತೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಂದನೆ ಸಲ್ಲಿಸಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಅವರು, ಸರ್ಕಾರ ಕೈಗೊಂಡ ಹೆಚ್ಚಿನ ಮೌಲ್ಯದ ನೋಟುಗಳ ರದ್ದತಿ ನಿರ್ಧಾರದಿಂದ ಆಗುವ ಲಾಭಗಳ ಬಗ್ಗೆ ಪ್ರಸ್ತಾಪಿಸಿರುವ ಪ್ರಧಾನಮಂತ್ರಿಯವರು, ತಮ್ಮ ಹಣಕಾಸು ವ್ಯವಹಾರಗಳಲ್ಲಿ ಹೆಚ್ಚಿನ ನಗದು ರಹಿತ ಪಾವತಿ ಮತ್ತು ಇತ್ತೀಚಿನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

“ಭ್ರಷ್ಟಾಚಾರ, ಭಯೋತ್ಪಾದನೆ ಮತ್ತು ಕಪ್ಪುಹಣದ ವಿರುದ್ಧ ಪ್ರಸ್ತುತ ನಡೆಯುತ್ತಿರುವ  ಯಜ್ಞದಲ್ಲಿ ಹೃದಯಪೂರ್ವಕವಾಗಿ ಪಾಲ್ಗೊಂಡಿರುವ ಭಾರತದ ಜನತೆಗೆ ನಾನು ವಂದಿಸುತ್ತೇನೆ.

ಸರ್ಕಾರದ ಈ ನಿರ್ಧಾರದಿಂದ ನಮ್ಮ ದೇಶದ ಆರ್ಥಿಕತೆಯ ಬೆನ್ನೆಲುಬಾದ ರೈತರಿಗೆ, ವ್ಯಾಪಾರಿಗಳಿಗೆ, ಕಾರ್ಮಿಕರಿಗೆ ಹಲವು ಲಾಭಗಳಾಗಲಿವೆ.  

ನಾನು ಸದಾ ಹೇಳುತ್ತಿರುತ್ತೇನೆ, ಸರ್ಕಾರದ ಈ ಕ್ರಮದಿಂದ ಕೊಂಚ ತೊಂದರೆ ಆಗಿದೆ ಆದರೆ, ಈ ಅಲ್ಪಕಾಲೀನ ವೇದನೆಯಿಂದ ದೀರ್ಘಕಾಲೀನ ಲಾಭವಾಗಲಿದೆ.

ಇನ್ನು ಕಪ್ಪುಹಣ ಮತ್ತು ಭ್ರಷ್ಟಾಚಾರದಿಂದಾಗಿ ಗ್ರಾಮೀಣ ಭಾರತದ ಪ್ರಗತಿ ಮತ್ತು ಉನ್ನತಿಯನ್ನು ತಡೆಯಲು ಸಾಧ್ಯವಿಲ್ಲ. ನಮ್ಮ ಹಳ್ಳಿಗಳು ಅವುಗಳ ಬಾಕಿಯನ್ನು ಪಡೆಯಲಿವೆ.

ಹಣಕಾಸು ವ್ಯವಹಾರಗಳಲ್ಲಿ ಹೆಚ್ಚಿನ ನಗದು ರಹಿತ ಪಾವತಿ ಮತ್ತು ಇತ್ತೀಚಿನ ಸಮಗ್ರ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಐತಿಹಾಸಿಕ ಅವಕಾಶ ನಮಗೆ ಲಭಿಸಿದೆ.  

ನನ್ನ ಯುವ ಮಿತ್ರರೇ, ನೀವು ಭಾರತವನ್ನು ಹೆಚ್ಚು ನಗದು ಹರಿತ ವಹಿವಾಟಿನ  ಮತ್ತು ಭ್ರಷ್ಟಾಚಾರಮುಕ್ತ ಮಾಡಬಲ್ಲ  ಬದಲಾವಣೆಯ ಪ್ರತಿನಿಧಿಗಳಾಗಿದ್ದೀರಿ.

ನಾವೆಲ್ಲರೂ ಒಗ್ಗೂಡಿ #IndiaDefeatsBlackMoney ಖಾತ್ರಿಪಡಿಸೋಣ.  ಇದು ಬಡವರು, ನವ ಮಧ್ಯಮವರ್ಗ, ಮಧ್ಯಮವರ್ಗ ಮತ್ತು ಭವಿಷ್ಯದ ಪೀಳಿಗೆಗೆ ಒಳಿತು ಮಾಡಲಿದೆ”, ಎಂದು ಪ್ರಧಾನಿ ಹೇಳಿದ್ದಾರೆ.

***

AKT/NT/SH