Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕನಿಷ್ಠ 15 ವರ್ಷಕ್ಕೆ ಕಡಿಮೆ ಇಲ್ಲದೆ ಸೇವೆ ಸಲ್ಲಿಸಿರುವ 1991ರ ಡಿಸೆಂಬರ್ ನಿಂದ 1999ರ ನವೆಂಬರ್ 29ರವರೆಗಿನ ಅವಧಿಯಲ್ಲಿ ಮೃತಪಟ್ಟ ಅಥವಾ ಸೇವೆಯಿಂದ ಅನೂರ್ಜಿತಗೊಂಡ ರಕ್ಷಣಾ ಸಿಬ್ಬಂದಿಗೆ 180 ದಿನಗಳವರೆಗೆ ಸಂಚಯಿತ ರಜೆ ನಗದೀಕರಣಕ್ಕೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕನಿಷ್ಠ 15 ವರ್ಷಗಳಿಗೆ ಕಡಿಮೆ ಇಲ್ಲದೆ ಸೇವೆ ಸಲ್ಲಿಸಿರುವ ಮತ್ತು 30.12.1991ರಿಂದ 29.11.1999ರ ಅವಧಿಯಲ್ಲಿ ಮೃತಪಟ್ಟ ಅಥವಾ ಸೇವೆಯಿಂದ ಅನೂರ್ಜಿತಗೊಂಡ ರಕ್ಷಣಾ ಸಿಬ್ಬಂದಿಯ 180 ದಿನಗಳವರೆಗಿನ ಸಂಚಯಿತ ರಜೆಯನ್ನು ನಗದೀಕರಿಸಿಕೊಳ್ಳಲು ತನ್ನ ಅನುಮೋದನೆ ನೀಡಿದೆ.

ಈ ನಿರ್ಧಾರದಿಂದ ಈ ಅವಧಿಯಲ್ಲಿ ಮೃತಪಟ್ಟ ಅಥವಾ ಸೇವೆಯಿಂದ ಅನೂರ್ಜಿತಗೊಂಡ ರಕ್ಷಣಾ ಸೇವೆಯಲ್ಲಿನ 9777 ಅಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ಕುಟುಂಬಗಳಿಗೆ ಅನುಕೂಲವಾಗಲಿದೆ. ಕಾರ್ಗಿಲ್ ಸಂಘರ್ಷದಲ್ಲಿ (ವಿಜಯ್ ಕಾರ್ಯಾಚರಣೆ) ಮತ್ತು ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ಭಾಗದಲ್ಲಿ ಈ ಅವಧಿಯಲ್ಲಿ ದಂಗೆಗಳು ನಡೆದಿದ್ದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಸಾವುಗಳು ಸಂಭವಿಸಿದ್ದರಿಂದ ಈ ಮೇಲಿನ ಅವಧಿಯು ಮಹತ್ವದ್ದಾಗಿದೆ.

*****

AKT/VBA/SH