Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕತಾರ್ ಅಮೀರ್ ಅವರನ್ನು ಭೇಟಿಮಾಡಿದ ಪ್ರಧಾನಮಂತ್ರಿ

ಕತಾರ್ ಅಮೀರ್ ಅವರನ್ನು ಭೇಟಿಮಾಡಿದ ಪ್ರಧಾನಮಂತ್ರಿ


ದೋಹಾದ ಅಮಿರಿ ಅರಮನೆಯಲ್ಲಿ ಕತಾರ್ ನ ಅಮೀರ್ ಘನತೆವೆತ್ತ ಶ್ರೀ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರನ್ನು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೇಟಿ ಮಾಡಿದರು.

ಅಮಿರಿ ಅರಮನೆಗೆ ಆಗಮಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ವಿಧ್ಯುಕ್ತ ಸ್ವಾಗತ ನೀಡಲಾಯಿತು. ತದ ನಂತರ, ಎರಡೂ ಕಡೆಯವರು ಉನ್ನತ ನಿಯೋಗ ಮಟ್ಟದ ಮತ್ತು ನಿರ್ಬಂಧಿತ ವಿಷಯಾಧಾರಿತ ಮಾತುಕತೆಗಳನ್ನು ನಡೆಸಿದರು. ಚರ್ಚೆಗಳು ಆರ್ಥಿಕ ಸಹಕಾರ, ಹೂಡಿಕೆಗಳು, ಇಂಧನ ಪಾಲುದಾರಿಕೆ, ಬಾಹ್ಯಾಕಾಶ ಸಹಯೋಗ, ನಗರ ಮೂಲಸೌಕರ್ಯ, ಸಾಂಸ್ಕೃತಿಕ ಬಂಧಗಳು ಮತ್ತು ಜನರ ನಡುವಿನ ಸಂಬಂಧಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳನ್ನು ಒಳಗೊಂಡಿವೆ. ಉಭಯ ನಾಯಕರು ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.

ಕತಾರ್ ನಲ್ಲಿರುವ 8 ಲಕ್ಷಕ್ಕೂ ಹೆಚ್ಚು ಭಾರತೀಯ ಸಮುದಾಯದ ಬಗ್ಗೆ ಕಾಳಜಿ ವಹಿಸಿದ್ದಕ್ಕಾಗಿ ಪ್ರಧಾನಮಂತ್ರಿಯವರು ಅಮೀರ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಕತಾರ್ ನೊಂದಿಗೆ ದ್ವಿಪಕ್ಷೀಯ ಸಹಕಾರವನ್ನು ಇನ್ನಷ್ಟು ವಿಸ್ತರಿಸುವ , ದೃಢ ಮತ್ತು ಆಳಗೊಳಿಸುವ ಭಾರತದ ಬದ್ಧತೆಯನ್ನು ಪ್ರಧಾನಮಂತ್ರಿಯವರು ತಿಳಿಸಿದರು. ಭಾರತಕ್ಕೆ ಶೀಘ್ರ ಭೇಟಿ ನೀಡುವಂತೆ ಪ್ರಧಾನಮಂತ್ರಿಯವರು ಅಮೀರ್ ಅವರನ್ನು ಆಹ್ವಾನಿಸಿದರು.

ಅಮೀರ್ ಅವರು ಪ್ರಧಾನಮಂತ್ರಿಯವರ ಭಾವನೆಗಳಿಗೆ ಪ್ರತಿಯಾಗಿ ಮತ್ತು ಗಲ್ಫ್ ಪ್ರದೇಶದಲ್ಲಿ ಮೌಲ್ಯಯುತ ಪಾಲುದಾರರಾಗಿ ಭಾರತದ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕತಾರ್ ನ ಅಭಿವೃದ್ಧಿಯಲ್ಲಿ ವೈವಿದ್ಯಮಯ ಭಾರತೀಯ ಸಮುದಾಯದ ಕೊಡುಗೆಗಳು ಮತ್ತು ಕತಾರ್ ನಲ್ಲಿ ನಡೆದ ವಿವಿಧ ಅಂತರರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾರತೀಯರ ಉತ್ಸಾಹದಿಂದ ಭಾಗವಹಿಸುವಿಕೆಯನ್ನು ಅಮೀರ್ ಶ್ಲಾಘಿಸಿದರು.

ಸಭೆಯ ನಂತರ ಅಮಿರಿ ಅರಮನೆಯಲ್ಲಿ ಪ್ರಧಾನಮಂತ್ರಿಯ ಗೌರವಾರ್ಥ ಔತಣಕೂಟದ ಊಟವನ್ನು ಏರ್ಪಡಿಸಲಾಯಿತು.

*****