ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, 2024-25ನೇ ಹಣಕಾಸು ವರ್ಷಕ್ಕೆ ‘ವ್ಯಕ್ತಿಯಿಂದ ವ್ಯಾಪಾರಿಗೆ (ಪಿ2ಎಂ) ಕಡಿಮೆ ಮೌಲ್ಯದ ಭೀಮ್-ಯುಪಿಐ ವಹಿವಾಟುಗಳನ್ನು ಉತ್ತೇಜಿಸಲು ಪ್ರೋತ್ಸಾಹಕ ಯೋಜನೆ’ಯನ್ನು ಈ ಕೆಳಗಿನ ರೀತಿಯಲ್ಲಿ ಅನುಮೋದಿಸಿದೆ:
i. ಕಡಿಮೆ ಮೌಲ್ಯದ ಭೀಮ್-ಯುಪಿಐ ವಹಿವಾಟುಗಳನ್ನು (ಪಿ2ಎಂ) ಉತ್ತೇಜಿಸಲು ಪ್ರೋತ್ಸಾಹಕ ಯೋಜನೆಯನ್ನು 01.04.2024 ರಿಂದ 31.03.2025 ರವರೆಗೆ ಅಂದಾಜು 1,500 ಕೋಟಿ ವೆಚ್ಚದಲ್ಲಿ ಜಾರಿಗೆ ತರಲಾಗುವುದು.
ii. ಸಣ್ಣ ವ್ಯಾಪಾರಿಗಳಿಗೆ 2,000 ರೂ. ವರೆಗಿನ ಯುಪಿಐ (ಪಿ2ಎಂ) ವಹಿವಾಟುಗಳು ಮಾತ್ರ ಈ ಯೋಜನೆಯಡಿಯಲ್ಲಿ ಒಳಗೊಳ್ಳುತ್ತವೆ.
2 ಸಾವಿರ ರೂ.ಗಳವರೆಗೆ |
ಶೂನ್ಯ ಎಂಡಿಆರ್ / ಪ್ರೋತ್ಸಾಹ ಧನ (@0.15%) |
ಶೂನ್ಯ ಎಂಡಿಆರ್ / ಪ್ರೋತ್ಸಾಹ ಧನವಿಲ್ಲ |
2 ಸಾವಿರ ರೂ. ಮೇಲ್ಪಟ್ಟು |
ಶೂನ್ಯ ಎಂಡಿಆರ್ / ಪ್ರೋತ್ಸಾಹ ಧನವಿಲ್ಲ |
ಶೂನ್ಯ ಎಂಡಿಆರ್ / ಪ್ರೋತ್ಸಾಹ ಧನವಿಲ್ಲ |
ವರ್ಗ | ಸಣ್ಣ ವ್ಯಾಪಾರಿ | ದೊಡ್ಡ ವ್ಯಾಪಾರಿ |
---|
iii. ಸಣ್ಣ ವ್ಯಾಪಾರಿಗಳ ವರ್ಗಕ್ಕೆ ಸಂಬಂಧಿಸಿದಂತೆ ರೂ.2,000 ವರೆಗಿನ ವಹಿವಾಟುಗಳಿಗೆ ಪ್ರತಿ ವಹಿವಾಟಿನ ಮೌಲ್ಯಕ್ಕೆ 0.15% ದರದಲ್ಲಿ ಪ್ರೋತ್ಸಾಹಧನ ನೀಡಲಾಗುವುದು.
iv. ಯೋಜನೆಯ ಎಲ್ಲಾ ತ್ರೈಮಾಸಿಕಗಳಿಗೆ, ಸಂಬಂಧಿಸಿದ ಬ್ಯಾಂಕುಗಳು ಸ್ವೀಕರಿಸಿದ ಕ್ಲೈಮ್ ಮೊತ್ತದ ಶೇ.80 ರಷ್ಟನ್ನು ಯಾವುದೇ ಷರತ್ತುಗಳಿಲ್ಲದೆ ವಿತರಿಸುತ್ತವೆ.
v. ಪ್ರತಿ ತ್ರೈಮಾಸಿಕಕ್ಕೆ ಸ್ವೀಕರಿಸಿದ ಕ್ಲೈಮ್ ಮೊತ್ತದ ಉಳಿದ ಶೇ.20 ರ ಮರುಪಾವತಿಯು ಈ ಕೆಳಗಿನ ಷರತ್ತುಗಳನ್ನು ಪೂರೈಸುವುದರ ಮೇಲೆ ಅವಲಂಬಿತವಾಗಿರುತ್ತದೆ:
ಎ) ಸ್ವೀಕರಿಸಿದ ಬ್ಯಾಂಕಿನ ತಾಂತ್ರಿಕ ಕುಸಿತ ಶೇ.0.75 ಕ್ಕಿಂತ ಕಡಿಮೆಯಿದ್ದರೆ ಮಾತ್ರ ಅನುಮೋದಿತ ಕ್ಲೈಮ್ ನ ಶೇ.10 ರಷ್ಟನ್ನು ಒದಗಿಸಲಾಗುತ್ತದೆ; ಮತ್ತು
ಬಿ) ಸ್ವೀಕರಿಸಿದ ಬ್ಯಾಂಕಿನ ಸಿಸ್ಟಮ್ ಅಪ್‌ಟೈಮ್ ಶೇ.99.5 ಕ್ಕಿಂತ ಹೆಚ್ಚಿದ್ದರೆ ಮಾತ್ರ ಅನುಮೋದಿತ ಕ್ಲೈಮ್ ನ ಉಳಿದ ಶೇ.10 ರಷ್ಟನ್ನು ಒದಗಿಸಲಾಗುತ್ತದೆ.
ಪ್ರಯೋಜನಗಳು:
i. ಅನುಕೂಲಕರ, ಸುರಕ್ಷಿತ, ತ್ವರಿತನಗದು ಹರಿವು ಮತ್ತು ಡಿಜಿಟಲ್ ಹೆಜ್ಜೆಗುರುತುಗಳ ಮೂಲಕ ಸಾಲಕ್ಕೆ ಉತ್ತಮ ಪ್ರವೇಶ.
ii. ಸಾಮಾನ್ಯ ನಾಗರಿಕರು ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ತಡೆರಹಿತ ಪಾವತಿ ಸೌಲಭ್ಯಗಳಿಂದ ಪ್ರಯೋಜನ ಪಡೆಯುತ್ತಾರೆ.
iii. ಸಣ್ಣ ವ್ಯಾಪಾರಿಗಳು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಯುಪಿಐ ಸೇವೆಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಸಣ್ಣ ವ್ಯಾಪಾರಿಗಳು ಬೆಲೆಯ ಬಗ್ಗೆ ಸೂಕ್ಷ್ಮರಾಗಿರುವುದರಿಂದ, ಪ್ರೋತ್ಸಾಹಕಗಳು ಯುಪಿಐ ಪಾವತಿಯನ್ನು ಸ್ವೀಕರಿಸಲು ಅವರನ್ನು ಪ್ರೋತ್ಸಾಹಿಸುತ್ತವೆ.
iv. ಡಿಜಿಟಲ್ ರೂಪದಲ್ಲಿ ವಹಿವಾಟನ್ನು ಔಪಚಾರಿಕಗೊಳಿಸುವ ಮತ್ತು ಲೆಕ್ಕಹಾಕುವ ಮೂಲಕ ಕಡಿಮೆ-ನಗದು ಆರ್ಥಿಕತೆಯ ಸರ್ಕಾರದ ದೃಷ್ಟಿಕೋನವನ್ನು ಬೆಂಬಲಿಸುತ್ತದೆ.
v. ದಕ್ಷತೆಯ ಲಾಭ- 20 ಪ್ರತಿಶತ ಪ್ರೋತ್ಸಾಹವು ಬ್ಯಾಂಕುಗಳು ಹೆಚ್ಚಿನ ಸಿಸ್ಟಮ್ ಅಪ್‌ಟೈಮ್ ಮತ್ತು ಕಡಿಮೆ ತಾಂತ್ರಿಕ ಕುಸಿತವನ್ನು ನಿರ್ವಹಿಸುವುದರ ಮೇಲೆ ಅವಲಂಬಿತವಾಗಿರುತ್ತದೆ. ಇದು ನಾಗರಿಕರಿಗೆ ಪಾವತಿ ಸೇವೆಗಳ ದಿನವಿಡೀ ಲಭ್ಯತೆಯನ್ನು ಖಚಿತಪಡಿಸುತ್ತದೆ.
vi. ಯುಪಿಐ ವಹಿವಾಟುಗಳ ಬೆಳವಣಿಗೆ ಮತ್ತು ಸರ್ಕಾರಿ ಖಜಾನೆಯ ಮೇಲಿನ ಕನಿಷ್ಠ ಆರ್ಥಿಕ ಹೊರೆ ಎರಡರ ನ್ಯಾಯಯುತ ಸಮತೋಲನ.
ಉದ್ದೇಶ:
ಹಿನ್ನೆಲೆ:
ಡಿಜಿಟಲ್ ಪಾವತಿಗಳ ಉತ್ತೇಜನವು ಸರ್ಕಾರದ ಆರ್ಥಿಕ ಸೇರ್ಪಡೆ ಕಾರ್ಯತಂತ್ರದ ಅವಿಭಾಜ್ಯ ಅಂಗವಾಗಿದೆ ಮತ್ತು ಜನಸಾಮಾನ್ಯರಿಗೆ ವ್ಯಾಪಕ ಶ್ರೇಣಿಯ ಪಾವತಿ ಆಯ್ಕೆಗಳನ್ನು ಒದಗಿಸುತ್ತದೆ. ಡಿಜಿಟಲ್ ಪಾವತಿ ಉದ್ಯಮವು ತನ್ನ ಗ್ರಾಹಕರು/ವ್ಯಾಪಾರಿಗಳಿಗೆ ಸೇವೆಗಳನ್ನು ಒದಗಿಸುವಾಗ ಉಂಟಾದ ವೆಚ್ಚಗಳನ್ನು ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್) ಶುಲ್ಕಗಳ ಮೂಲಕ ಮರುಪಡೆಯಲಾಗುತ್ತದೆ.
ಆರ್ ಬಿ ಐಪ್ರಕಾರ, ಎಲ್ಲಾ ಕಾರ್ಡ್ ನೆಟ್‌ವರ್ಕ್ ಗಳಲ್ಲಿ (ಡೆಬಿಟ್ ಕಾರ್ಡ್‌ಗಳಿಗೆ) ವಹಿವಾಟು ಮೌಲ್ಯದ ಶೇ.0.90 ರವರೆಗೆ ಎಂಡಿಆರ್ ಅನ್ವಯಿಸುತ್ತದೆ. ಎನ್ ಪಿ ಸಿ ಐ ಪ್ರಕಾರ, ಯುಪಿಐ ಪಿ2ಎಂ ವಹಿವಾಟಿಗೆ ವಹಿವಾಟು ಮೌಲ್ಯದ ಶೇ.0.30 ವರೆಗೆ ಎಂಡಿಆರ್ ಅನ್ವಯಿಸುತ್ತದೆ. ಜನವರಿ 2020 ರಿಂದ, ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲು, ಪಾವತಿಗಳು ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆ, 2007 ರಲ್ಲಿನ ಸೆಕ್ಷನ್ 10A ಮತ್ತು ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 269SU ನಲ್ಲಿ ತಿದ್ದುಪಡಿಗಳ ಮೂಲಕ ರುಪೇ ಡೆಬಿಟ್ ಕಾರ್ಡ್ ಗಳು ಮತ್ತು ಭೀಮ್-ಯುಪಿಐ ವಹಿವಾಟುಗಳಿಗೆ ಎಂಡಿಆರ್ ಅನ್ನು ಶೂನ್ಯಕ್ಕೆ ಇಳಿಸಲಾಯಿತು.
ಸೇವೆಗಳ ಪರಿಣಾಮಕಾರಿ ವಿತರಣೆಯಲ್ಲಿ ಪಾವತಿ ಪೂರಕ ವ್ಯವಸ್ಥೆಯಲ್ಲಿ ಭಾಗವಹಿಸುವವರನ್ನು ಬೆಂಬಲಿಸಲು, “ರುಪೇ ಡೆಬಿಟ್ ಕಾರ್ಡ್ ಗಳು ಮತ್ತು ಕಡಿಮೆ ಮೌಲ್ಯದ ಭೀಮ್-ಯುಪಿಐ ವಹಿವಾಟುಗಳನ್ನು (ಪಿ2ಎಂ) ಉತ್ತೇಜಿಸಲು ಪ್ರೋತ್ಸಾಹಕ ಯೋಜನೆ”ಯನ್ನು ಸಚಿವ ಸಂಪುಟದ ಸೂಕ್ತ ಅನುಮೋದನೆಯೊಂದಿಗೆ ಜಾರಿಗೆ ತರಲಾಗಿದೆ. ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಸರ್ಕಾರದಿಂದ ವರ್ಷವಾರು ಪ್ರೋತ್ಸಾಹಕ ಪಾವತಿ (ಕೋಟಿ ರೂ.ಗಳಲ್ಲಿ):
ಹಣಕಾಸು ವರ್ಷ |
ಭಾರತ ಸರ್ಕಾರದ ಪಾವತಿ |
ರುಪೇ ಡೆಬಿಟ್ ಕಾರ್ಡ್ |
ಭೀಮ್–ಯುಪಿಐ |
ಹಣಕಾಸು ವರ್ಷ 2021-22 |
1,389 |
432 |
957 |
ಹಣಕಾಸು ವರ್ಷ 2022-23 |
2,210 |
408 |
1,802 |
ಹಣಕಾಸು ವರ್ಷ 2023-24 |
3,631 |
363 |
3,268 |
ಪ್ರೋತ್ಸಾಹ ಧನವನ್ನು ಸರ್ಕಾರವು ಸ್ವೀಕರಿಸುವ ಬ್ಯಾಂಕಿಗೆ (ವ್ಯಾಪಾರಿಗಳ ಬ್ಯಾಂಕ್) ಪಾವತಿಸುತ್ತದೆ ಮತ್ತು ನಂತರ ಇತರ ಪಾಲುದಾರರೊಂದಿಗೆ ಹಂಚಿಕೊಳ್ಳುತ್ತದೆ: ವಿತರಕ ಬ್ಯಾಂಕ್ (ಗ್ರಾಹಕರ ಬ್ಯಾಂಕ್), ಪಾವತಿ ಸೇವಾ ಪೂರೈಕೆದಾರ ಬ್ಯಾಂಕ್ (ಯುಪಿಐ ಅಪ್ಲಿಕೇಶನ್ / ಎಪಿಐ ಏಕೀಕರಣಗಳಲ್ಲಿ ಗ್ರಾಹಕರ ಆನ್‌ಬೋರ್ಡಿಂಗ್ ಅನ್ನು ಸುಗಮಗೊಳಿಸುತ್ತದೆ) ಮತ್ತು ಅಪ್ಲಿಕೇಶನ್ ಪೂರೈಕೆದಾರರು (ಟಿಪಿಎಪಿ).
*****