Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಔಷಧ ಮತ್ತು ಪ್ರಸಾಧನಗಳ (ತಿದ್ದುಪಡಿ) ವಿಧೇಯಕ 2013ರ ವಾಪಸಾತಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, 29.08.2013ರಂದು ರಾಜ್ಯಸಭೆಯಲ್ಲಿ ಮಂಡಿಸಲಾಗಿದ್ದ ಔಷಧ ಮತ್ತು ಪ್ರಸಾಧನಗಳ (ತಿದ್ದುಪಡಿ) ವಿಧೇಯಕ 2013ರನ್ನು ಹಿಂಪಡೆಯಲು ನಿರ್ಧರಿಸಿದೆ. ಈ ಮಸೂದೆಯ ಪರಾಮರ್ಶೆ ನಡೆಸಿದ್ದ ಸಂಸತ್ತಿನ ಸ್ಥಾಯಿ ಸಮಿತಿ ವಿಧೇಯಕದ ನಿಬಂಧನೆಗಳನ್ನು ಬದಲಾವಣೆ ಮಾಡಲು ಹಲವು ಶಿಫಾರಸುಗಳನ್ನು ಮಾಡಿತ್ತು.

ವಿಶ್ವದ ಅತಿ ದೊಡ್ಡ ಔಷಧಿ ತಯಾರಕರ ಪೈಕಿ ಭಾರತ ಒಂದಾಗಿದೆ. ಇಂಥ ಉತ್ಪನ್ನಗಳ ವಾರ್ಷಿಕ ಉತ್ಪಾದನೆ 2 ಲಕ್ಷ ಕೋಟಿ ರೂಪಾಯಿಗೂ ಅಧಿಕವಾಗಿದೆ. ಆ ಪೈಕಿ ಶೇಕಡ 55ರಷ್ಟು ಉತ್ಪನ್ನ ಅಭಿವೃದ್ಧಿ ಹೊಂದಿದ ರಾಷ್ಟ್ರಗಳೂ ಸೇರಿದಂತೆ ವಿಶ್ವದ 200ಕ್ಕೂ ಹೆಚ್ಚು ರಾಷ್ಟ್ರಗಳಿಗೆ ರಫ್ತಾಗುತ್ತದೆ. ದೊಡ್ಡ ಸಂಖ್ಯೆಯ ರಾಷ್ಟ್ರಗಳಲ್ಲಿ ಅದೂ ಗಣನೀಯವಾಗಿ ಕಡಿಮೆ ದರದಲ್ಲಿ ಸಾರ್ವಜನಿಕ ಆರೋಗ್ಯ ನಿರ್ವಹಣೆಯಲ್ಲಿ ಭಾರತೀಯ ಔಷಧ ವಲಯ ಮಹತ್ವದ ಪಾತ್ರ ವಹಿಸಿದೆ.

ಔಷಧಿಗಳು, ವೈದ್ಯಕೀಯ ಸಾಧನಗಳು, ಇನ್-ವಿಟ್ರೋ ವೈದ್ಯಕೀಯ ಸಲಕರಣೆ, ಸ್ಟೆಮ್ ಸೆಲ್ಸ್, ಪುನರುತ್ಪಾದಕ ಔಷಧಿಗಳು, ವೈದ್ಯಕೀಯ ಪ್ರಯೋಗ/ತನಿಖೆ ಇತ್ಯಾದಿಗಳು ಸೇರಿದಂತೆ ವೈದ್ಯಕೀಯ ಉತ್ಪನ್ನಗಳ ಗುಣಮಟ್ಟ, ಸುರಕ್ಷತೆ ಮತ್ತು ಸಾಮರ್ಥ್ಯದ ಖಾತ್ರಿಗಾಗಿ ಚೌಕಟ್ಟಿನ ನಿಯಮಗಳನ್ನು ಔಷಧ ಮತ್ತು ಪ್ರಸಾಧನ ಕಾಯಿದೆ 1940 ಒದಗಿಸುತ್ತದೆ.

ಸಾರ್ವಜನಿಕ ಆರೋಗ್ಯವನ್ನು ಕಾಪಾಡುವಲ್ಲಿ ಈ ವಲಯದ ಪಾತ್ರವನ್ನು ಗಮನದಲ್ಲಿಟ್ಟುಕೊಂಡು ಸಚಿವ ಸಂಪುಟ, ಪ್ರಸಕ್ತ ಇರುವ ಕಾಯಿದೆಯಡಿ ಅದರಲ್ಲೂ ಹೊಸ ಕ್ಷೇತ್ರಗಳಾದ ಜೈವಿಕ, ಸ್ಟೆಮ್ ಸೆಲ್ಸ್ ಮತ್ತು ಪುನರುತ್ಪಾದಕ ಔಷಧಗಳು, ವೈದ್ಯಕೀಯ ಸಾಧನಗಳು ಮತ್ತು ವೈದ್ಯಕೀಯ ಪ್ರಯೋಗ/ತನಿಖೆ ಇತ್ಯಾದಿಯನ್ನು ಸಮರ್ಥವಾಗಿ ನಿಯಂತ್ರಿಸುವುದು ಸಾಧ್ಯವಿಲ್ಲದಿದ್ದರೂ ಇನ್ನೂ ಹೆಚ್ಚಿನ ತಿದ್ದುಪಡಿಗಳನ್ನು ಪ್ರಸಕ್ತ ಕಾಯಿದೆಗೆ ತರುವುದು ಸೂಕ್ತವಲ್ಲ ಎಂದು ನಿರ್ಧರಿಸಿದೆ.

ಹೋಲಿಕೆಯ ಬೆಲೆಯ ಲಾಭವನ್ನು ಹತೋಟಿಯಲ್ಲಿಡಲು, ಜನಸಂಖ್ಯೆಯ ಲಾಭ ಮತ್ತು ಮಾಹಿತಿ ತಂತ್ರಜ್ಞಾನದ ಅನುಕೂಲವನ್ನೂ ಪಡೆದು ಭಾರತೀಯ ವೈದ್ಯಕೀಯ ಉತ್ಪನ್ನಗಳ ವಲಯ ಹತ್ತಿರದ ಭವಿಷ್ಯದಲ್ಲಿ ಶೀಘ್ರತರವಾದ ಬೆಳವಣಿಗೆಯನ್ನು ನಿರೀಕ್ಷಿಸಿದೆ ಜೊತೆಗೆ ದೇಶೀಯ ಬೇಡಿಕೆಯನ್ನೂ ಪೂರೈಸುತ್ತಿದೆ ಮತ್ತು ಈ ಉತ್ಪನ್ನಗಳನ್ನು ಉತ್ಪಾದಿಸುವ ಅಂತಾರಾಷ್ಟ್ರೀಯ ತಾಣವಾಗುವ ಹಾಗೂ ಬಂಡವಾಳ ಆಕರ್ಷಿಸುವ ವಲಯದ ಸಾಮರ್ಥ್ಯವನ್ನು ಹೊಂದಿದೆ.

ಮೇಕ್ ಇನ್ ಇಂಡಿಯಾ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು, ಎರಡು ಪದರದ ಉದ್ದೇಶದೊಂದಿಗೆ ಪ್ರಸಕ್ತ ಕಾಯಿದೆಯನ್ನು ಸಮಗ್ರವಾಗಿ ಪರಾಮರ್ಶಿಸುವ ನಿರ್ಧಾರ ಮಾಡಲಾಗಿದೆ. ದೇಶದಲ್ಲಿ ಸುಲಭವಾಗಿ ವ್ಯಾಪಾರ ಮಾಡುವಂತೆ ಮಾಡುವುದು ಹಾಗೂ ಗಣನೀಯವಾಗಿ ಗುಣಮಟ್ಟ ಮತ್ತು ನಮ್ಮ ಉತ್ಪನ್ನಗಳ ಸಾಮರ್ಥ್ಯವನ್ನು ಹೆಚ್ಚಿಸುವುದು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಈ ನಿಟ್ಟಿನಲ್ಲಿ ಎರಡು ಹಂತಗಳ ಪ್ರಯತ್ನ ಕೈಗೊಂಡಿದೆ ಅದು ಯಾವುದೆಂದರೆ. (1) ವೈದ್ಯಕೀಯ ಸಾಧನಗಳ ನಿಯಂತ್ರಣಕ್ಕೆ ಹಾಲಿ ಇರುವ ಕಾಯಿದೆಯಡಿ ಪ್ರತ್ಯೇಕ ನಿಯಮ ರೂಪಿಸುವುದು ಮತ್ತು (2) ವೈದ್ಯಕೀಯ ಸಾಧನ ಮತ್ತು ಔಷಧ ಹಾಗೂ ಪ್ರಸಾಧನ ನಿಯಂತ್ರಣಕ್ಕೆ ಪ್ರತ್ಯೇಕ ಕಾಯಿದೆ ತರುವುದು. ಈ ಮಧ್ಯೆ, ಎಲ್ಲ ಬಾಧ್ಯಸ್ಥರೊಂದಿಗೆ ವ್ಯಾಪಕ ಚರ್ಚೆಯ ಬಳಿಕ ವೈದ್ಯಕೀಯ ಸಾಧನಗಳ ನಿಯಂತ್ರಣಕ್ಕೆ ಕರಡು ಕಾನೂನು ರೂಪಿಸಲಾಗಿದೆ ಮತ್ತು ಈ ಕರಡನ್ನು ಶೀಘ್ರವೇ ಅಧಿಸೂಚನೆಗೊಳಿಸಲಾಗುತ್ತದೆ, ಹೊಸ ಶಾಸನ ರೂಪಿಸುವ ಕಾರ್ಯವೂ ಆರಂಭಗೊಂಡಿದೆ.

***

AKT/VBA/SH/SK