Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಓಮನ್ ಸುಲ್ತಾನರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ

ಓಮನ್ ಸುಲ್ತಾನರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ


ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಓಮನ್ ಸುಲ್ತಾನ ಹೈಥಮ್ ಬಿನ್ ತಾರಿಕ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ನಾಯಕರು ಎರಡೂ ದೇಶಗಳ ದ್ವಿಪಕ್ಷೀಯ ಸಂಬಂಧಗಳನ್ನು ಪರಿಶೀಲಿಸಿದರು.

ವಾಣಿಜ್ಯ, ಸಂಸ್ಕೃತಿ, ರಕ್ಷಣೆ, ನಾವೀನ್ಯತೆ ಮತ್ತು ಹೆಚ್ಚಿನವುಗಳಲ್ಲಿ ಸಹಕಾರವನ್ನು ಬಲಪಡಿಸುವ ಮಾರ್ಗಗಳನ್ನು ಉಭಯ ನಾಯಕರು ಚರ್ಚಿಸಿದರು.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳು,

”ಓಮನ್‌ನ ಗೌರವಾನ್ವಿತ ಸುಲ್ತಾನ ಹೈಥಮ್ ಬಿನ್ ತಾರಿಕ್ ಅವರೊಂದಿಗೆ ನಡೆಸಿದ ಮಾತುಕತೆ ಉತ್ತಮವಾಗಿತ್ತು. ದ್ವಿಪಕ್ಷೀಯ ಸಂಬಂಧಗಳ ಸಂಪೂರ್ಣ ಶ್ರೇಣಿಯನ್ನು ಪರಿಶೀಲಿಸಿದ್ದೇವೆ, ಎರಡೂ ದೇಶಗಳ ವಾಣಿಜ್ಯ, ಸಂಸ್ಕೃತಿ, ರಕ್ಷಣೆ, ನಾವೀನ್ಯತೆ ಮತ್ತು ಹೆಚ್ಚಿನವುಗಳಲ್ಲಿ ಸಹಕಾರವನ್ನು ಆಳಗೊಳಿಸುವ ಮಾರ್ಗಗಳನ್ನು ಚರ್ಚಿಸಿದ್ದೇವೆ.” ಎಂದು ಬರೆದುಕೊಂಡಿದ್ದಾರೆ.

***