ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ನೀಡಿರುವ ಅನುಮೋದನೆಗಳು:
(i) ಒಣ ಪ್ರದೇಶದಲ್ಲಿ ಕೃಷಿ ಸಂಶೋಧನೆ ಕುರಿತ ಅಂತಾರಾಷ್ಟ್ರೀಯ ಕೇಂದ್ರ (ಐಸಿಎಆರ್.ಡಿಎ) ದಿಂದ ಎರಡೇ ಹಂತದಲ್ಲಿ ಪಶ್ಚಿಮ ಬಂಗಾಳ (ಬೇಳೆಕಾಳುಗಳಿಗಾಗಿ) ಮತ್ತು ರಾಜಾಸ್ಥಾನದಲ್ಲಿ (ನೈಸರ್ಗಿಕ ಸಂಪನ್ಮೂಲ ನಿರ್ವಹಣೆಗಾಗಿ) ಉಪಗ್ರಹ ತಾಣಗಳನ್ನು ಒಳಗೊಂಡಂತೆ ಮಧ್ಯಪ್ರದೇಶದ ಸೆಹೋರೆಯ ಅಮಲಾಹಾದಲ್ಲಿ ದ್ವಿದಳ ಧಾನ್ಯ ಆಹಾರ ಸಂಶೋಧನೆ ವೇದಿಕೆ (ಎಫ್.ಎಲ್.ಆರ್.ಪಿ.) ಸ್ಥಾಪನೆಗಾಗಿ;
(ii) 30 ವರ್ಷಗಳ ಅವಧಿಗೆ ಪ್ರತಿ ಎಕರೆಗೆ ಪ್ರತಿ ವರ್ಷಕ್ಕೆ 1 ರೂಪಾಯಿ ಬಾಡಿಗೆಯಂತೆ (70.99 ಹೆಕ್ಟೇರ್, 175.42 ಎಕರೆ) ಜಮೀನನ್ನು ಸೆಹೋರ್, ಅಮಲಾಹ ಫಾರಂನಲ್ಲಿ ಒದಗಿಸಿರುವ ಸಂಬಂಧ ಮಧ್ಯಪ್ರದೇಶ ರಾಜ್ಯ ಸರ್ಕಾರದೊಂದಿಗೆ ಭೋಗ್ಯ ಕರಾರಿಗೆ ಅಂಕಿತ ಹಾಕಲು ಮತ್ತು ಅದನ್ನು ಐ.ಸಿ.ಎ.ಆರ್.ಡಿ.ಎ.ಗೆ ಮಧ್ಯಪ್ರದೇಶದಲ್ಲಿ ಎಫ್.ಎಲ್.ಆರ್.ಪಿ. ಸ್ಥಾಪನೆಗಾಗಿ ಗುತ್ತಿಗೆ ನೀಡಲು;
(iii) ಐ.ಸಿ.ಎ.ಆರ್.ಡಿ.ಎ.ಯ ದ್ವಿದಳ ಆಹಾರ ಸಂಶೋಧನಾ ವೇದಿಕೆಗೆ ಅಂತಾರಾಷ್ಟ್ರೀಯ ಸ್ಥಾನ ನೀಡುವ ಸಂಪುಟದ ‘ತಾತ್ವಿಕ’ಅನುಮೋದನೆಯುವಿಶ್ವಸಂಸ್ಥೆಯ (ಸವಲತ್ತುಗಳ ಮತ್ತು ವಿನಾಯಿತಿಗಳ) ಕಾಯಿದೆ,1947ರ ಕಲಂ 3ರ ಪರಿಗಣನೆಗನುಸಾರವಾಗಿರುತ್ತದೆ.
(iv) ವೇದಿಕೆಯ ಸ್ಥಾಪನೆಗೆ ಸಂಬಂಧಿಸಿದ ಎಲ್ಲ ವಿಚಾರಗಳಲ್ಲಿ ಭಾರತ ಸರ್ಕಾರದ ಪರವಾಗಿ ಕೃಷಿ ಸಂಶೋಧನೆ ಇಲಾಖೆ (ಡಿ.ಎ.ಆರ್.ಇ.)ಗೆ ಅಧಿಕಾರ ನೀಡಲು.
(v) ಅಗತ್ಯ ಬಿದ್ದರೆ ಎಫ್.ಎಲ್.ಆರ್.ಪಿ. ಸ್ಥಾಪನೆಗೆ ಸಂಬಂಧಿಸಿದಂತೆ ಐ.ಸಿ.ಎ.ಆರ್. ಮತ್ತು ಐ.ಸಿ.ಎ.ಆರ್.ಡಿ.ಎ. ನಡುವೆ ಆಗಿರುವ ಪೂರಕ ಒಪ್ಪಂದದಲ್ಲಿ ತಾಂತ್ರಿಕ ಸುಧಾರಣೆಗಳನ್ನು ಕೈಗೊಳ್ಳಲು ಕೃಷಿ ಸಚಿವಾಲಯಕ್ಕೆ ಅಧಿಕಾರ ನೀಡುವುದು.
ಭಾರತದಲ್ಲಿ ಎಫ್.ಎಲ್.ಆರ್.ಪಿ. ಸ್ಥಾಪನೆಯು ಹೆಚ್ಚುತ್ತಿರುವ ಆಹಾರ ಭದ್ರತೆ ಸವಾಲುಗಳನ್ನು ಎದುರಿಸಲು ಉತ್ತಮ ಅಂತಾರಾಷ್ಟ್ರೀಯ ವಿಜ್ಞಾನ ಪಡೆಯಲು ಸಹಕಾರಿಯಾಗುತ್ತದೆ. ಎಫ್.ಎಲ್.ಆರ್.ಪಿ.ಯಿಂದ ದೇಶದಲ್ಲಿ ಸಾಧಿಸಿದ ಸಂಶೋಧನೆಯ ಫಲಶ್ರುತಿಯನ್ನು ಸಮರ್ಥವಾಗಿ ಮತ್ತು ವೇಗವಾಗಿ ಅಳವಡಿಸಿಕೊಳ್ಳಲೂ ಇದು ಭಾರತಕ್ಕೆ ಅನುವಾಗುತ್ತದೆ.ಪ್ರಮುಖ ಅಂತಾರಾಷ್ಟ್ರೀಯ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ, ವಿಶ್ವದಲ್ಲಿ ಭಾರತವನ್ನು ಕೃಷಿ ಸಂಶೋಧನೆಯ ದೊಡ್ಡ ಕೇಂದ್ರವಾಗಿ ಮಾಡುತ್ತದೆ, ಜೊತೆಗೆ ದೇಶದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೂಡಿಕೆಯನ್ನು ಆಕರ್ಷಿಸುತ್ತದೆ.
ಇದು ಅಂತಾರಾಷ್ಟ್ರೀಯ ಸಂಸ್ಥೆಯ ಸಂಶೋಧನಾ ವ್ಯವಸ್ಥೆಯಾಗಿದೆ. ಐ.ಸಿ.ಎ.ಆರ್.ಡಿ.ಎ.ಗೆ ಒಣ ಪ್ರದೇಶದ ದ್ವಿದಳ ಧಾನ್ಯ ಆಹಾರದ ವಿಧಗಳೂ ಸೇರಿದಂತೆ ಹವಾಮಾನ ತಾಳಿಕೊಳ್ಳುವ ತಂತ್ರಜ್ಞಾನ, ನಾವಿನ್ಯತೆಯಲ್ಲಿ ಉತ್ತಮ ಪರಿಶ್ರಮವಿದೆ. ಐ.ಸಿ.ಎ.ಆರ್.ಡಿ.ಎ. ಭೂಮಿಯಿಂದ ಹೆಚ್ಚಿನ ಇಳುವರಿ ಮತ್ತು ಜಾನುವಾರುಗಳ ಹೆಚ್ಚಳಕ್ಕೆ ಬಹು ಶಿಸ್ತಿನ ವಿಜ್ಞಾನಿಗಳ ತಂಡದ ಮೂಲಕ ಸಂಶೋಧನೆ ಕೈಗೊಳ್ಳುತ್ತದೆ. ಈ ವೇದಿಕೆಯು ಬಡತನ ತಗ್ಗಿಸಲು, ಆಹಾರ ಭದ್ರತೆಯ ಸುಧಾರಣೆ ಮಾಡಲು, ಪೌಷ್ಟಿಕತೆ ಹೆಚ್ಚಿಸಲು ಮತ್ತು ಆರೋಗ್ಯ ರಕ್ಷಿಸಲು ಗಣನೀಯ ಕೊಡುಗೆ ನೀಡುತ್ತದೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ನೆಲೆಯನ್ನೂ ಕಾಪಾಡುತ್ತದೆ.
ಇದರ ಸಂಶೋಧನೆಯ ಫಲಶ್ರುತಿಯಿಂದ ದೊಡ್ಡ, ಸಣ್ಣ ಅಥವಾ ಅಂಚಿನಲ್ಲಿರುವ ರೈತರು ಸೇರಿದಂತೆ ಎಲ್ಲ ವಲಯದ ರೈತರಿಗೂ ಲಾಭವಾಗಲಿದೆ. ಹಾಗೂ ಈ ಯೋಜನೆ ಸಮಾನ ಮತ್ತು ಎಲ್ಲವನ್ನೂ ಒಳಗೊಂಡಿದ್ದಾಗಿದ್ದು, ಇಲ್ಲಿ ಅಭಿವೃದ್ಧಿಪಡಿಸಲಾಗುವ ತಂತ್ರಜ್ಞಾನ ಎಲ್ಲ ರೈತರ ಬಳಕೆಗೂ ದೊರಕಲಿದೆ.
*****