Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಒಡಿಶಾ ನೂತನ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡ ಪ್ರಧಾನಮಂತ್ರಿ

ಒಡಿಶಾ ನೂತನ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಒಡಿಶಾದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ ಮೋಹನ್‌ ಚರಣ್‌ ಮಾಝಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ ಕನಕವರ್ಧನ್‌ ಸಿಂಗ್‌ ದೇವ್‌ ಮತ್ತು ಶ್ರೀಮತಿ ಪಾರ್ವತಿ ಪರಿದಾ ಅವರಿಗೆ ಅವರು ಶುಭ ಕೋರಿದರು.

ಈ ಸಂಬಂಧ ಪ್ರಧಾನಮಂತ್ರಿ ಅವರು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ:

‘‘ಒಡಿಶಾದಲ್ಲಿಇದೊಂದು ಐತಿಹಾಸಿಕ ದಿನ! ಒಡಿಶಾದ ನನ್ನ ಸಹೋದರ ಸಹೋದರಿಯರ ಆಶೀರ್ವಾದದಿಂದ ಬಿಜೆಪಿ ರಾಜ್ಯದಲ್ಲಿ ತನ್ನ ಮೊದಲ ಸರ್ಕಾರವನ್ನು ರಚಿಸುತ್ತಿದೆ.

ಭುವನೇಶ್ವರದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿನಾನು ಭಾಗವಹಿಸಿದ್ದೆ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ ಮೋಹನ್‌ ಚರಣ್‌ ಮಾಝಿ ಮತ್ತು ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ ಕನಕವರ್ಧನ್‌ ಸಿಂಗ್‌ ದೇವ್‌ ಮತ್ತು ಶ್ರೀಮತಿ ಪಾರ್ವತಿ ಪರಿದಾ ಅವರಿಗೆ ಅಭಿನಂದನೆಗಳು. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಇತರರಿಗೂ ಅಭಿನಂದನೆಗಳು.

ಮಹಾಪ್ರಭು ಜಗನ್ನಾಥನ ಆಶೀರ್ವಾದದೊಂದಿಗೆ, ಈ ತಂಡವು ಒಡಿಶಾದಲ್ಲಿ ದಾಖಲೆಯ ಅಭಿವೃದ್ಧಿಯನ್ನು ತರುತ್ತದೆ ಮತ್ತು ಅಸಂಖ್ಯಾತ ಜನರ ಜೀವನವನ್ನು ಸುಧಾರಿಸುತ್ತದೆ ಎಂದು ನನಗೆ ವಿಶ್ವಾಸವಿದೆ,’’ ಎಂದರು.

 

*****