Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಒಡಿಶಾದ ಚಾಂದಿಖೋಲ್ ಮತ್ತು ಕರ್ನಾಟಕದ ಪಡೂರಿನಲ್ಲಿ ಹೆಚ್ಚುವರಿಯಾಗಿ 6.5 ಮಿಲಿಯನ್ ಮೆಟ್ರಿಕ್ ಟನ್ ಸಾಮರ್ಥ್ಯದ ಆಯಕಟ್ಟಿನ ಪೆಟ್ರೋಲಿಯಂ ಸಂಗ್ರಹಣಾಗಾರ ಸ್ಥಾಪನೆಗೆ ಕೇಂದ್ರ ಸಂಪುಟ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಒಡಿಶಾದ ಚಾಂದಿಖೋಲ್ ಮತ್ತು ಕರ್ನಾಟಕದ ಪಡೂರಿನಲ್ಲಿ ಹೆಚ್ಚುವರಿಯಾಗಿ 6.5 ಮಿಲಿಯನ್ ಮೆಟ್ರಿಕ್ ಟನ್ ಸಾಮರ್ಥ್ಯದ ಆಯಕಟ್ಟಿನ ಪೆಟ್ರೋಲಿಯಂ ಸಂಗ್ರಹಣಾಗಾರ(ಸ್ಟ್ರಾಟಜಿಕ್ ಪೆಟ್ರೋಲಿಯಂ ರಿಸರ್ವ್-ಎಸ್ ಪಿ ಆರ್) ಸ್ಥಾಪಿಸಲು ಅನುಮೋದನೆ ನೀಡಲಾಯಿತು. ಈ ಎರಡು ಸಂಗ್ರಹಣಾಗಾರಗಳಿಗೆ ಒಂದೇ ಒಂದು ನಿಗದಿತ ಸರಪಳಿ ವ್ಯವಸ್ಥೆ ನಿರ್ಮಿಸಲಾಗುವುದು. ಈ ಚಾಂದಿಖೋಲ್ ಮತ್ತು ಪಡೂರ್ ಎಸ್ ಪಿ ಆರ್ ಘಟಕಗಳು ನೆಲದಾಳದಲ್ಲಿರಲಿದ್ದು, ಗುಹೆ ಮಾದರಿಯಲ್ಲಿರವೆ. ಅವುಗಳು ಕ್ರಮವಾಗಿ 4 ಮಿಲಿಯನ್ ಮೆಟ್ರಿಕ್ ಟನ್ ಮತ್ತು 2.5 ಮಿಲಿಯನ್ ಮೆಟ್ರಿಕ್ ಟನ್ ಸಾಮರ್ಥ್ಯ ಹೊಂದಲಿವೆ. ಕೇಂದ್ರ ಸರ್ಕಾರ 2017-18ನೇ ಸಾಲಿನ ಬಜೆಟ್ ನಲ್ಲಿ ಈ ಎರಡು ಹೆಚ್ಚುವರಿ ಎಸ್ ಪಿ ಆರ್ ಗಳನ್ನು ಸ್ಥಾಪಿಸುವುದಾಗಿ ಪ್ರಕಟಿಸಿತ್ತು.

ಭಾರತ ಸರ್ಕಾರದ ಬಜೆಟ್ ಬೆಂಬಲ ಹೊರೆಯನ್ನು ಇಳಿಸಲು ಈ ಯೋಜನೆಯನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ(ಪಿಪಿಪಿ) ಮಾದರಿಯಲ್ಲಿ ಕೈಗೆತ್ತಿಕೊಳ್ಳಲು ತಾತ್ವಿಕ ಅನುಮೋದನೆ ನೀಡಲಾಗಿದೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ಹಣಕಾಸು ಸಚಿವಾಲಯದೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮತ್ತು ಮಾರುಕಟ್ಟೆ ಅಗತ್ಯತೆಗಳನ್ನು ತಿಳಿಯಲು ರೋಡ್ ಷೋಗಳನ್ನು ನಡೆಸಿದ ನಂತರ ಮತ್ತು ಸಂಭಾವ್ಯ ಹೂಡಿಕೆದಾರರನ್ನು ಗುರುತಿಸಿದ ನಂತರ ಇದಕ್ಕೆ ಷರತ್ತು ಮತ್ತು ನಿಯಮಾವಳಿಗಳು ರೂಪಿಸಲಿದೆ.

ಐ ಎಸ್ ಪಿ ಆರ್ ಎಲ್ ಗಳನ್ನು ಈಗಾಗಲೇ ವಿಶಾಖಪಟ್ಟಣಂನಲ್ಲಿ(1.33ಎಂಎಂಟಿ), ಮಂಗಳೂರಿನಲ್ಲಿ(1.5ಎಂಎಂಟಿ) ಮತ್ತು ಪಡೂರಿನಲ್ಲಿ(2.55ಎಂಎಂಟಿ) ಸೇರಿದಂತೆ ಒಟ್ಟು 5.33 ಎಂಎಂಟಿ ಕಚ್ಚಾತೈಲ ಸಂಗ್ರಹಿಸುವ ಭೂಗರ್ಭದಲ್ಲಿನ ಗುಹೆ ಮಾದರಿಯ ಸಂಗ್ರಹಣಾಗಾರಗಳನ್ನು ನಿರ್ಮಿಸಿದೆ. 2016-17ನೇ ಸಾಲಿನ ತೈಲ ಬಳಕೆ ಅಂಕಿ-ಅಂಶಗಳ ಪ್ರಕಾರ ಮೊದಲನೆ ಹಂತದ ಎಸ್ ಪಿ ಆರ್ ಕಾರ್ಯಕ್ರಮದಡಿ ಸ್ಥಾಪಿಸಿರುವ ಒಟ್ಟು 5.33 ಎಂಎಂಟಿ ಸಾಮರ್ಥ್ಯದ ಮೂರು ಘಟಕಗಳಿಂದ ಭಾರತಕ್ಕೆ ಕನಿಷ್ಠ ಹತ್ತು ದಿನ ಕಚ್ಚಾತೈಲದ ಅಗತ್ಯತೆಯನ್ನು ಪೂರೈಸಬಹುದಾಗಿದೆ. ಇದೀಗ ಸಚಿವ ಸಂಪುಟ ಹೆಚ್ಚುವರಿಯಾಗಿ 6.55 ಎಂಎಂಟಿ ಆಯಕಟ್ಟಿನ ಪೆಟ್ರೋಲಿಯಂ ಸಂಗ್ರಹಣಾಗಾರ ಸ್ಥಾಪಿಸಲು ನಿರ್ಧರಿಸಿರುವುದರಿಂದ ಹೆಚ್ಚುವರಿಯಾಗಿ ಸುಮಾರು 12 ದೇಶಕ್ಕೆ ಅಗತ್ಯವಿರುವ ಕಚ್ಚಾತೈಲ ಪೂರೈಸಬಹುದಾಗಿದೆ ಮತ್ತು ಇದರಿಂದ ಭಾರತದ ಇಂಧನ ಸುರಕ್ಷತೆ, ನಿರೀಕ್ಷಿತ ಬೇಡಿಕೆ ಪೂರೈಸಿದಂತಾಗಿದೆ.

ಚಾಂದಿಖೋಲ್ ಮತ್ತು ಪಡೂರಿನಲ್ಲಿ ಈ ಎಸ್ ಪಿ ಆರ್ ಗಳ ನಿರ್ಮಾಣದಿಂದ ಒಡಿಶಾ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ಸಾಧ್ಯತೆ ಇದೆ.