Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಒಂದು ವರ್ಷ ಪೂರೈಸಿದ ಭಾರತದ ರಾಷ್ಟ್ರಪತಿಗಳಿಗೆ ಪ್ರಧಾನ ಮಂತ್ರಿ ಅಭಿನಂದನೆ


ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಗಳಾಗಿ ಅಧಿಕಾರದಲ್ಲಿ ಮೊದಲ ವರ್ಷ ಪೂರೈಸಿದ್ದಕ್ಕೆ ಅಭಿನಂದನೆ ಹೇಳಿದ್ದಾರೆ. 

ಭಾರತದ ರಾಷ್ಟ್ರಪತಿಗಳ ಟ್ವಿಟ್ಟರ್ ಖಾತೆ ಮೂಲಕ ಟ್ವೀಟ್ ನ್ನು ಹಂಚಿಕೊಂಡ ಪ್ರಧಾನಿ ಅವರು ಟ್ವೀಟ್ ಮಾಡಿ:

“ರಾಷ್ಟ್ರಪತಿಗಳು ಅಧಿಕಾರದಲ್ಲಿ ಮೊದಲ ವರ್ಷ ಪೂರೈಸಿದ್ದಕ್ಕೆ ಅಭಿನಂದನೆಗಳು! ಸಾರ್ವಜನಿಕ ಸೇವೆಗೆ ಅವರ ದಣಿವರಿಯದ ಸಮರ್ಪಣೆ ಮತ್ತು ಪ್ರಗತಿಯ ನಿರಂತರ ಅನ್ವೇಷಣೆಯು ಅತ್ಯಂತ ಪ್ರೇರಕವಾಗಿದೆ. ರಾಷ್ಟ್ರಪತಿಗಳ ವಿವಿಧ ಸಾಧನೆಗಳು ಅವರ ನಾಯಕತ್ವದ ಸ್ಪಷ್ಟವಾದ ಪ್ರಭಾವವನ್ನು ಪ್ರತಿಬಿಂಬಿಸುತ್ತವೆ ಎಂದು ಬರೆದುಕೊಂಡಿದ್ದಾರೆ.

***