Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಒಂದು ವರ್ಷ ಪೂರೈಸಿದ ಭಾರತದ ರಾಷ್ಟ್ರಪತಿ ಅವರಿಗೆ ಪ್ರಧಾನ ಮಂತ್ರಿ ಅಭಿನಂದನೆ


ಅಧಿಕಾರದಲ್ಲಿ ಒಂದು ವರ್ಷ ಪೂರೈಸಿದ ಭಾರತದ ರಾಷ್ಟ್ರಪತಿ ಶ್ರೀ ರಾಮ ನಾಥ್ ಕೋವಿಂದ್ ಅವರನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

“ರಾಷ್ಟ್ರಪತಿ ರಾಮನಾಥ್ ಕೋವಿಂದ ಜೀ ಅವರಿಗೆ ಅಧಿಕಾರದಲ್ಲಿ ಒಂದು ವರ್ಷ ಪೂರೈಸಿದ್ದಕ್ಕಾಗಿ ಅಭಿನಂದನೆಗಳು. ತಮ್ಮ ಜ್ಞಾನ ಮತ್ತು ನಮ್ರತೆಯಿಂದ ಪ್ರತೀ ಭಾರತೀಯರಿಗೆ ಅವರು ಪ್ರೀತಿ ಪಾತ್ರರಾಗಿದ್ದಾರೆ. ಪ್ರಮುಖ ನೀತಿ ವಿಷಯಗಳಲ್ಲಿ ಅವರು ಅತ್ಯುತ್ತಮ ತಿಳುವಳಿಕೆ ಹೊಂದಿದ್ದಾರೆ. ರಾಷ್ಟ್ರಪತಿ ಜೀ ಅವರು ಯುವಕರನ್ನು, ರೈತರನ್ನು ಮತ್ತು ಬಡವರನ್ನು ಸಶಕ್ತೀಕರಣಗೊಳಿಸುವ ಬಗ್ಗೆ ಅತ್ಯಂತ ಕಾಳಜಿ ಹೊಂದಿದ್ದಾರೆ “ ಎಂದು ಪ್ರಧಾನ ಮಂತ್ರಿ ಅವರು ಹೇಳಿದ್ದಾರೆ.