Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಐ.ಎ.ಎಲ್.ಎ. ಸ್ಥಾನಮಾನವನ್ನು ಸರ್ಕಾರೇತರ ಸಂಘಟನೆಯಿಂದ ಅಂತರ –ಸರ್ಕಾರೀಯ ಸಂಸ್ಥೆಯಾಗಿ ಬದಲಾಯಿಸಲು ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಪಥದರ್ಶಕ ಮತ್ತು ಲೈಟ್ ಹೌಸ್ ಪ್ರಾಧಿಕಾರಕ್ಕೆ ಸಾಗರ ನೆರವು ನೀಡುವ ಅಂತಾರಾಷ್ಟ್ರೀಯ ಸಂಘ (ಐಎಎಲ್ಎ)ಯ ಸ್ಥಾನಮಾನವನ್ನು ಸರ್ಕಾರೇತರ ಸಂಘಟನೆ (ಎನ್.ಜಿ.ಓ.)ದಿಂದ ಅಂತರ ಸರ್ಕಾರೀಯ ಸಂಸ್ಥೆ (ಐಜಿಓ)ಆಗಿ ಪರಿವರ್ತಿಸಲು ತನ್ನ ಅನುಮೋದನೆ ನೀಡಿದೆ.

ಈ ನಿರ್ಧಾರವು “ಹಡಗುಗಳ ಸುರಕ್ಷಿತ, ಆರ್ಥಿಕ ಮತ್ತು ಪರಿಣಾಮಕಾರಿ ಸಂಚಾರಕ್ಕೆ ವೇಗ ನೀಡಲು” ಅನುಕೂಲ ಮಾಡುತ್ತದೆ. ಇದು ಐಎಎಲ್ಎಯನ್ನು ಅಂತಾರಾಷ್ಟ್ರೀಯ ಸಾಗರ ಸಂಘಟನೆಗಳ (ಐಎಂಓ) ಮತ್ತು ಅಂತಾರಾಷ್ಟ್ರೀಯ ಸಾಗರ ಮೇಲ್ಮೈ (ಹೈಡ್ರೋಗ್ರಾಫಿಕ್) ಸಂಘಟನೆ (ಐಎಚ್ಓ) ಮಟ್ಟಕ್ಕೆ ತರುತ್ತದೆ.

ಹಿನ್ನೆಲೆ:

ಸೇಂಟ್ ಜರ್ಮೈನ್ ಎನ್ ಲೇಯ್ (ಫ್ರಾನ್ಸ್)ನಲ್ಲಿ ತನ್ನ ಕೇಂದ್ರ ಕಚೇರಿ ಹೊಂದಿರುವ ಐಎಎಲ್ಎಯನ್ನು 1957ರಲ್ಲಿ ಫ್ರೆಂಚ್ ಕಾನೂನಿನ ಅಡಿಯಲ್ಲಿ ಸ್ಥಾಪಿಸಲಾಗಿತ್ತು. ಮಂಡಳಿಯೇ ಕಾರ್ಯಕಾರಿ ಕಾಯವಾಗಿರುವ 83 ರಾಷ್ಟ್ರೀಯ ಸದಸ್ಯರುಗಳನ್ನು ಹೊಂದಿರುವ ಮಹಾ ಸಭೆಯು ಇದರ ಆಡಳಿತವನ್ನು ನೋಡುತ್ತಿದೆ. ಐಎಎಲ್ಎ ಮಂಡಳಿಯು 24 ರಾಷ್ಟ್ರೀಯ ಸದಸ್ಯರನ್ನು ಹೊಂದಿದೆ ಮತ್ತು ಭಾರತವೂ ಮಂಡಳಿಯ ಸದಸ್ಯರಲ್ಲಿ ಒಂದಾಗಿದ್ದು, ಹಡಗು ಸಚಿವಾಲಯದ ಲೈಟ್ ಹೌಸ್ ಗಳು ಮತ್ತು ದೀಪದ ಹಡಗುಗಳ ಮಹಾ ನಿರ್ದೇಶನಾಲಯ (ಡಿಜಿಎಲ್ಎಲ್) ಮೂಲಕ ಪ್ರತಿನಿಧಿಸುತ್ತದೆ.

ಡಿಜಿಎಲ್ಎಲ್ ಲೈಟ್ ಹೌಸ್ ಕಾಯಿದೆ 1927ರ ಅನ್ವಯ ಅಂಡಮಾನ್ ಮತ್ತು ನಿಕೋಬಾರ್ ಮತ್ತು ಲಕ್ಷದ್ವೀಪದ ದ್ವೀಪ ಸಮೂಹಗಳೂ ಸೇರಿದಂತೆ ಭಾರತದ ಕರಾವಳಿಯುದ್ದದ ಸಾಮಾನ್ಯ ಜಲದಲ್ಲಿ ಪಥದರ್ಶಕಕ್ಕೆ ನೆರವು ನಿರ್ವಹಣೆ ಮತ್ತು ಸ್ಥಾಪನೆಗಳನ್ನು ನಿರ್ವಹಿಸುತ್ತದೆ.

2014ರ ಮೇ ತಿಂಗಳಿನಲ್ಲಿ ಸ್ಪೇನ್ ನ ಲಾ ಕೊರುನಾದಲ್ಲಿ ನಡೆದ ಅದರ Xllನೇ ಅಧಿವೇಶನದಲ್ಲಿ, ಪಥದರ್ಶಕ ಮತ್ತು ಲೈಟ್ ಹೌಸ್ ಪ್ರಾಧಿಕಾರಕ್ಕೆ ನೆರವು ನೀಡುವ ಸಾಗರ ನೆರವಿನ ಅಂತಾರಾಷ್ಟ್ರೀಯ ಸಂಸ್ಥೆ (ಐಎಎಲ್ಎ)ಯ ಮಹಾ ಸಭೆಯು, 21ನೇ ಶತಮಾನದಲ್ಲಿ ಐಎಎಲ್ಎ ಉತ್ತಮವಾಗಿ ಕಾರ್ಯ ನಿರ್ವಹಿಸುವ ಗುರಿಯೊಂದಿಗೆ ಐಎಎಲ್ಎ ಸ್ಥಾನಮಾನವನ್ನು ಎನ್.ಜಿ.ಓ.ನಿಂದ ಐಜಿಓಗೆ ಬದಲಾಯಿಸುವ ಕುರಿತ ದೃಢ ನಂಬಿಕೆಯ ನಿರ್ಣಯ ಅಂಗೀಕರಿಸಿತ್ತು.

******