Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಐರೋಪ್ಯ ಒಕ್ಕೂಟ – ಭಾರತ ವ್ಯಾಪಾರ ಮತ್ತು ತಂತ್ರಜ್ಞಾನ ಮಂಡಳಿಯ ಚೌಕಟ್ಟಿನಡಿ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯ ಕಾರ್ಯನಿರ್ವಹಣೆ ಕುರಿತಂತೆ ಭಾರತ ಮತ್ತು ಯೂರೋಪಿಯನ್ ಕಮಿಷನ್ ಜೊತೆ ತಿಳಿವಳಿಕೆ ಒಪ್ಪಂದಕ್ಕೆ ಕೇಂದ್ರ ಸಂಪುಟ ಅನುಮೋದನೆ 


ಭಾರತ ಗಣರಾಜ್ಯ ಮತ್ತು ಯೂರೋಪಿಯನ್ ಕಮಿಷನ್ ನಡುವೆ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯ ಕಾರ್ಯನಿರ್ವಹಣೆ ಕುರಿತಾದ ತಿಳಿವಳಿಕೆ ಒಪ್ಪಂದ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಮೆಚ್ಚುಗೆ ವ್ಯಕ್ತಪಡಿಸಿದ್ದು, ಐರೋಪ್ಯ ಒಕ್ಕೂಟ – ಭಾರತ ವ್ಯಾಪಾರ ಮತ್ತು ತಂತ್ರಜ್ಞಾನ ಮಂಡಳಿ[ಟಿಟಿಸಿ]ಯ ಚೌಕಟ್ಟಿನಡಿ ಪೂರೈಕೆ ಸರಪಳಿಯನ್ನು ಉತ್ತೇಜಿಸಲು ಮತ್ತು ನಾವೀನ್ಯತೆಯಿಂದ ಇದು ಕಾರ್ಯನಿರ್ವಹಿಸಲಿದೆ. 

ವಿವರಣೆಗಳು:

ಕೈಗಾರಿಕೆಗಳು ಮತ್ತು ಡಿಜಿಟಲ್ ತಂತ್ರಜ್ಞಾನ ವಲಯದಲ್ಲಿ ಅತ್ಯಾಧುನಿಕ ಸೆಮಿಕಂಡಕ್ಟರ್ ವಿಭಾಗದಲ್ಲಿ ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವೆ ಸಹಕಾರ ವೃದ್ಧಿಸುವ ಉದ್ದೇಶವನ್ನು ಈ ತಿಳಿವಳಿಕೆ ಪತ್ರ ಹೊಂದಿದೆ. 

ಅನುಷ್ಠಾನದ ಕಾರ್ಯತಂತ್ರ ಮತ್ತು ಗುರಿಗಳು: 

ಈ ತಿಳಿವಳಿಕೆ ಪತ್ರ ಸಹಿ ಮಾಡಿದ ದಿನದಿಂದ ಜಾರಿಗೆ ಬರಲಿದೆ ಮತ್ತು ಈ ವಲಯದಲ್ಲಿ ಉದ್ದೇಶಗಳು ಈಡೇರಿವೆ ಎಂದು ಎರಡೂ ಕಡೆಯವರು ದೃಢೀಕರಿಸುವವರೆಗೆ ಮತ್ತು ಒಂದು ಬದಿಯಲ್ಲಿ ಈ ಪ್ರಕ್ರಿಯೆಯಲ್ಲಿ ಭಾಗವಹಿಸುವುದನ್ನು ನಿಲ್ಲಿಸುವ ತನಕ ಇದು ಮುಂದುವರೆಯಬಹುದು. 

ಪರಿಣಾಮಗಳು;

ಸೆಮಿಕಂಡಕ್ಟರ್ ಪೂರೈಕೆ ಸರಪಳಿ ಪುಟಿದೇಳುವಂತೆ ಮಾಡಲು ಜಿ2ಜಿ ಮತ್ತು ಬಿ2ಬಿ ವಲಯದಲ್ಲಿ ಎರಡೂ ಕಡೆಗಳಲ್ಲಿ ಸಹಕಾರ ಪಡೆಯುವ ಸಲುವಾಗಿ ಪೂರಕ ಸಾಮರ್ಥ್ಯವನ್ನು ಉತ್ತೇಜಿಸುವ ಗುರಿ ಹೊಂದಲಾಗಿದೆ.  

ಹಿನ್ನೆಲೆ: 

ವಿದ್ಯುನ್ಮಾನ ಉತ್ಪಾದನೆಗೆ ಅನುಕೂಲಕರ ವಾತಾವರಣ ನಿರ್ಮಿಸಲು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ – ‘ಮೇಟಿ’[MeitY] ಸಕ್ರಿಯವಾಗಿ ಕಾರ್ಯನಿರ್ವಹಿಸಲಿದೆ. ಭಾರತದಲ್ಲಿ ದೃಢವಾದ ಮತ್ತು ಸಮರ್ಥನೀಯ ಸೆಮಿಕಂಡಕ್ಟರ್ ಮತ್ತು ಪ್ರದರ್ಶನ ಪರಿಸರ ವ್ಯವಸ್ಥೆಯ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ದೇಶದಲ್ಲಿ ಸೆಮಿಕಂಡಕ್ಟರ್ ಮತ್ತು ಡಿಸ್ಪ್ಲೇ ಮ್ಯಾನುಫೆಕ್ಚರಿಂಗ್ ಇಕೋ ಸಿಸ್ಟಮ್ ಅಭಿವೃದ್ಧಿಪಡಿಸುವ ಕಾರ್ಯಕ್ರಮವನ್ನು ಪರಿಚಯಿಸಲಾಯಿತು. ಸೆಮಿಕಂಡಕ್ಟರ್ ಫ್ಯಾಬ್ ಗಳು, ಡಿಸ್ಪ್ಲೇ ಪ್ಯಾಬ್ ಗಳು, ಫ್ಯಾಬ್ಸ್ ಫಾರ್ ಕಾಂಪೌಂಡ್ ಸಮಿಕಂಡಕ್ಟರ್ ಗಳು/ಸಿಲಿಕಾನ್ ಫೋಟೋನಿಕ್ಸ್/ಸೆನ್ಸಾರ್ಸ್/ಡಿಸ್ಕ್ರೀಟ್ ಸೆಮಿಕಂಡಕ್ಟರ್ಸ್ ಮತ್ತು ಸೆಮಿಕಂಡಕ್ಟರ್ ಒಟ್ಟುಗೂಡಿಸುವುದು, ಪರೀಕ್ಷೆ, ಗುರುತು ಮಾಡುವ ಹಾಗೂ ಪ್ಯಾಕೇಜಿಂಗ್ [ಎಟಿಎಂಪಿ]/ಸೆಮಿಕಂಡಕ್ಟರ್ ಗಳನ್ನು ಒಟ್ಟುಗೂಡಿಸುವ ಹೊರ ಗುತ್ತಿಗೆ ಮತ್ತು ಪರೀಕ್ಷೆ [ಒಎಸ್ಎಟಿ] ಸೌಲಭ್ಯಗಳನ್ನು ಇದು ಒಳಗೊಂಡಿದೆ. ದೇಶದಲ್ಲಿ ಸೆಮಿಕಂಡಕ್ಟರ್ ಗಳ ಅಭಿವೃದ್ಧಿ ಮತ್ತು ಡಿಸ್ಪ್ಲೇ ಮ್ಯಾನ್ಯುಪೆಕ್ಟರ್ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಮತ್ತು ಕಾರ್ಯತಂತ್ರಗಳ ಚಾಲನೆಗಾಗಿ ಡಿಜಿಟಲ್ ಇಂಡಿಯಾ ಕಾರ್ಪೋರೇಷನ್ [ಡಿಐಸಿ] ಅಡಿ ಇಂಡಿಯಾ ಸೆಮಿಕಂಡಕ್ಟರ್ ಮಿಷನ್ [ಐಎಸ್ಎಂ] ಅನ್ನು ಸ್ಥಾಪಿಸಲಾಗಿದೆ. 

ದ್ವಿಪಕ್ಷೀಯ ಮತ್ತು ಪ್ರಾದೇಶಿಕ ಚೌಕಟ್ಟಿನಡಿ ವಿದ್ಯುನ್ಮಾನ ಮತ್ತು ಬೆಳವಣಿಗೆಯಾಗುತ್ತಿರುವ ಮಾಹಿತಿ ತಂತ್ರಜ್ಞಾನ ಹಾಗೂ ಗಡಿನಾಡು ಪ್ರದೇಶಗಳಲ್ಲಿ ಅಂತರರಾಷ್ಟ್ರೀಯ ಸಹಕಾರ ಉತ್ತೇಜಿಸುವುದನ್ನು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ – ‘ಮೇಟಿ’[MeitY] ಕಡ್ಡಾಯಗೊಳಿಸಿದೆ. ಈ ಉದ್ದೇಶದೊಂದಿಗೆ ದ್ವಿಪಕ್ಷೀಯ ಸಹಕಾರ ಮತ್ತು ಮಾಹಿತಿ ವಿನಿಮಯವನ್ನು ಉತ್ತೇಜಿಸಲು ಹಾಗೂ ಭಾರತ ವಿಶ್ವಾಸಾರ್ಹ ಪಾಲುದಾರರಾಗಿ ಹೊರ ಹೊಮ್ಮಲು ಅನುವು ಮಾಡಿಕೊಡುವ, ಪೂರೈಕೆ ಸರಪಳಿ ಪುಟಿದೇಳುವಂತೆ ಮಾಡುವುದನ್ನು ಖಚಿತಪಡಿಸಿಕೊಳ್ಳಲು ‘ಮೇಟಿ’[MeitY] ವಿವಿಧ ದೇಶಗಳ ಸಹಭಾಗಿ ಸಂಸ್ಥೆಗಳು/ಏಜನ್ಸಿಗಳೊಂದಿಗೆ ಎಂಒಯುಗಳು/ಎಂಒಸಿಗಳು/ ಒಪ್ಪಂದಗಳನ್ನು ಮಾಡಿಕೊಂಡಿದೆ. ಸೆಮಿಕಂಡಕ್ಟರ್ ಪೂರೈಕೆ ಸರಪಳಿಯನ್ನು ಹೆಚ್ಚಿಸಲು ಮತ್ತು ಸೆಮಿಕಂಡಕ್ಟರ್ ವಲಯದಲ್ಲಿ ಸಹಯೋಗವನ್ನು ಉತ್ತೇಜಿಸಲು, ಪೂರಕ ಸಾಮರ್ಥ್ಯವನ್ನು ವೃದ್ಧಿಸಲು ದ್ವಿಪಕ್ಷೀಯ ಸಹಕಾರ ವರ್ಧನೆ, ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವೆ ಪರಸ್ಪರ ಲಾಭದಾಯಕ ಸೆಮಿಕಂಡಕ್ಟರ್ ಸಂಬಂಧಿತ ವ್ಯಾಪಾರ ಅವಕಾಶಗಳು, ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವಿನ ಪಾಲುದಾರಿಕೆಯ ಕಡೆಗೆ ಮತ್ತೊಂದು ಹೆಜ್ಜೆಯಾಗಿರುವ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. 

***