Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಐಟಿ ಹಾರ್ಡ್‌ವೇರ್‌ಗಾಗಿ ʼಉತ್ಪಾದನೆ ಆಧಾರಿತ ಪ್ರೋತ್ಸಾಹಧನ ಯೋಜನೆ- 2.0ʼಗೆ ಸಚಿವ ಸಂಪುಟದ ಅನುಮೋದನೆ


ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 17,000 ಕೋಟಿ ರೂ.ಗಳ ಬಜೆಟ್ ವೆಚ್ಚದೊಂದಿಗೆ ಐಟಿ ಹಾರ್ಡ್‌ವೇರ್‌ಗಾಗಿ ʻಉತ್ಪಾದನೆ ಆಧಾರಿತ ಪ್ರೋತ್ಸಾಹಧನ ಯೋಜನೆ-2.0ʼಗೆ ಅನುಮೋದನೆ ನೀಡಿದೆ.

ಸಂದರ್ಭ:

  • ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆಯು ಕಳೆದ 8 ವರ್ಷಗಳಲ್ಲಿ 17% ಸಮಗ್ರ ವಾರ್ಷಿ ಬೆಳವಣಿಗೆ ದರದೊಂದಿಗೆ (ಸಿಎಜಿಆರ್) ಸ್ಥಿರವಾದ ಬೆಳವಣಿಗೆಯನ್ನು ಕಂಡಿದೆ. ಈ ವರ್ಷ ಇದು ಉತ್ಪಾದನೆಯಲ್ಲಿ ಪ್ರಮುಖ ಮಾನದಂಡ – 105 ಶತಕೋಟಿ ಅಮೆರಿಕನ್‌ ಡಾಲರ್‌ (ಸುಮಾರು 9 ಲಕ್ಷ ಕೋಟಿ ರೂ.)
  • ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಫೋನ್ ತಯಾರಕ ರಾಷ್ಟ್ರವಾಗಿದೆ. ಮೊಬೈಲ್ ಫೋನ್‌ಗಳ ರಫ್ತು ವರ್ಷ 11 ಶತಕೋಟಿ ಅಮೆರಿಕನ್‌ ಡಾಲರ್‌ಗಳ (ಸುಮಾರು 90 ಸಾವಿರ ಕೋಟಿ ರೂ.) ಪ್ರಮುಖ ಮೈಲುಗಲ್ಲನ್ನು ದಾಟಿದೆ.
  • ಜಾಗತಿಕ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪರಿಸರ ವ್ಯವಸ್ಥೆಯು ಭಾರತಕ್ಕೆ ಆಗಮಿಸುತ್ತಿದ್ದು, ಭಾರತವು ಪ್ರಮುಖ ಎಲೆಕ್ಟ್ರಾನಿಕ್ಸ್ ಉತ್ಪಾದನಾ ದೇಶವಾಗಿ ಹೊರಹೊಮ್ಮುತ್ತಿದೆ.
  • ಮೊಬೈಲ್ ಫೋನ್‌ಗಳಿಗಾಗಿ ಉತ್ಪಾದನೆ ಆಧಾರಿತ ಪ್ರೋತ್ಸಾಹಧನ ಯೋಜನೆಯ(ಪಿಎಲ್‌ಐ) ಯಶಸ್ಸನ್ನು ಆಧರಿಸಿ, ಐಟಿ ಹಾರ್ಡ್‌ವೇರ್‌ಗಾಗಿ ʻಪಿಎಲ್‌ಐ ಯೋಜನೆ 2.0ʼಗೆ ಕೇಂದ್ರ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ.

ಪ್ರಮುಖ ಲಕ್ಷಣಗಳು:

  • ಐಟಿ ಹಾರ್ಡ್‌ವೇರ್‌ಗಾಗಿ ʻಪಿಎಲ್‌ಐ ಯೋಜನೆ-2.0ʼ,  ಲ್ಯಾಪ್ ಟಾಪ್‌ಗಳು, ಟ್ಯಾಬ್ಲೆಟ್‌ಗಳು, ಆಲ್-ಇನ್-ಒನ್ ಪಿಸಿಗಳು, ಸರ್ವರ್‌ಗಳು ಮತ್ತು ಅಲ್ಟ್ರಾ ಸ್ಮಾಲ್ ಫಾರ್ಮ್ ಫ್ಯಾಕ್ಟರ್ ಸಾಧನಗಳನ್ನು ಒಳಗೊಂಡಿದೆ
  • ಯೋಜನೆಯ ಆಯವ್ಯಯ ವೆಚ್ಚ 17,000 ಕೋಟಿ ರೂ.ಗಳು.
  • ಯೋಜನೆಯ ಅವಧಿ 6 ವರ್ಷಗಳು.
  • ನಿರೀಕ್ಷಿತ ಉತ್ಪಾದನೆ ಹೆಚ್ಚಳ 3.35 ಲಕ್ಷ ಕೋಟಿ ರೂ.
  • ನಿರೀಕ್ಷಿತ ಹೂಡಿಕೆ ಹೆಚ್ಚಳ 2,430 ಕೋಟಿ ರೂ.
  • ನಿರೀಕ್ಷಿತ ನೇರ ಉದ್ಯೋಗ ಹೆಚ್ಚಳ 75,000

ಪ್ರಾಮುಖ್ಯತೆ:

    • ಭಾರತವು ಎಲ್ಲಾ ಜಾಗತಿಕ ಪ್ರಮುಖ ಕಂಪನಿಗಳಿಗೆ ವಿಶ್ವಾಸಾರ್ಹ ಪೂರೈಕೆ ಸರಪಳಿ ಪಾಲುದಾರರಾಗಿ ಹೊರಹೊಮ್ಮುತ್ತಿದೆ. ದೊಡ್ಡ ಐಟಿ ಹಾರ್ಡ್‌ವೇರ್ ಕಂಪನಿಗಳು ಭಾರತದಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ತೀವ್ರ ಆಸಕ್ತಿ ತೋರಿಸಿವೆ. ದೇಶದಲ್ಲಿ ಉತ್ತಮ ಬೇಡಿಕೆಯನ್ನು ಹೊಂದಿರುವ ಬಲವಾದ ಐಟಿ ಸೇವಾ ಉದ್ಯಮದಿಂದ ಇದಕ್ಕೆ ಮತ್ತಷ್ಟು ಬೆಂಬಲ ದೊರೆತಿದೆ.

ಬಹುತೇಕ ಪ್ರಮುಖ ಕಂಪನಿಗಳು ಭಾರತದಲ್ಲಿರುವ ಘಟಕಗಳಿಂದ ಉತ್ಪಾದನೆಯಾದ ಉತ್ಪನ್ನವನು ಭಾರತದೊಳಗಿನ ದೇಶೀಯ ಮಾರುಕಟ್ಟೆಗಳಿಗೆ ಪೂರೈಸಲು ಮತ್ತು ಭಾರತವನ್ನು ರಫ್ತು ಕೇಂದ್ರವನ್ನಾಗಿ ಮಾಡಲು ಬಯಸುತ್ತವೆ.

****