Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

‘ಐಟಿಬಿಪಿ’ಯ ಸಂಸ್ಥಾಪನಾ ದಿನದಂದು ‘ಐಟಿಬಿಪಿ’ಯ ಅದಮ್ಯ ಚೇತನ ಮತ್ತು ಶೌರ್ಯವನ್ನು ಗೌರವಿಸಿ ವಂದಿಸಿದ ಪ್ರಧಾನಮಂತ್ರಿ


‘ಐಟಿಬಿಪಿ’ಯ ಸಂಸ್ಥಾಪನಾ ದಿನದಂದು ‘ಐಟಿಬಿಪಿ’ಯ ಸಿಬ್ಬಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ.

 ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿಯ ಸಂದೇಶ ತಿಳಿಸಿದ್ದಾರೆ:

“ಐಟಿಬಿಪಿ ಸಂಸ್ಥಾಪನಾ ದಿನದ ಶುಭ ಸಂದರ್ಭದಲ್ಲಿ, ನಮ್ಮ ಐಟಿಬಿಪಿ ಸಿಬ್ಬಂದಿಯ ಅದಮ್ಯ ಮನೋಭಾವ ಮತ್ತು ಶೌರ್ಯಕ್ಕೆ ನಾನು ವಂದಿಸಿ, ಗೌರವಿಸುತ್ತೇನೆ. 

ಅವರು ನಮ್ಮ ರಾಷ್ಟ್ರವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಯಾವುದೇ ಸಮಯದಲ್ಲಿ, ಹಾಗೂ ವಿಶೇಷವಾಗಿ  ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಅವರ ಶ್ಲಾಘನೀಯ ಮಾನವೀಯ ಪ್ರಯತ್ನಗಳು, ಅವರ ಅಚಲ ಬದ್ಧತೆಗೆ ಸಾಕ್ಷಿಯಾಗಿದೆ.  

ರಾಷ್ಟ್ರಕ್ಕೆ, ಅವರು ಅದೇ ಸಮರ್ಪಣೆ ಮತ್ತು ಉತ್ಸಾಹದಿಂದ ಸೇವೆ ಸಲ್ಲಿಸುವುದನ್ನು ಮುಂದುವರಿಸಲಿ.”

 ***