Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

 ಐಟಿಪಿಒ ಅಂತರಾಷ್ಟ್ರೀಯ ಪ್ರದರ್ಶನ ಮತ್ತು ಸಮಾವೇಶ ಕೇಂದ್ರದ ಶ್ರಮಿಕ ವರ್ಗದವರನ್ನು ಪ್ರಧಾನಮಂತ್ರಿಯವರು ಗೌರವಿಸಿದರು

 ಐಟಿಪಿಒ ಅಂತರಾಷ್ಟ್ರೀಯ ಪ್ರದರ್ಶನ ಮತ್ತು ಸಮಾವೇಶ ಕೇಂದ್ರದ ಶ್ರಮಿಕ ವರ್ಗದವರನ್ನು ಪ್ರಧಾನಮಂತ್ರಿಯವರು ಗೌರವಿಸಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೊಸ ಐಟಿಪಿಒ ಅಂತರಾಷ್ಟ್ರೀಯ ಪ್ರದರ್ಶನ ಮತ್ತು ಸಮಾವೇಶ ಕೇಂದ್ರದಲ್ಲಿ ಪೂಜೆ ನೆರವೇರಿಸಿದರು ಮತ್ತು ಕೇಂದ್ರದ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಕೆಲಸಗಾರರನ್ನು  ಸನ್ಮಾನಿಸಿದರು.

ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ ಹೀಗೆ ಟ್ವೀಟ್ ಮಾಡಿದ್ದಾರೆ:

“ದೆಹಲಿಯು ಆಧುನಿಕ   ಅಂತರಾಷ್ಟ್ರೀಯ ಪ್ರದರ್ಶನ ಮತ್ತು ಸಮಾವೇಶ ಕೇಂದ್ರವನ್ನು ಪಡೆಯುತ್ತದೆ, ಇದು ಭಾರತದಲ್ಲಿ ಸಮಾವೇಶಗಳ  ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ, ಹೀಗಾಗಿ ಪ್ರಪಂಚದಾದ್ಯಂತದ ಜನರನ್ನು ತರುತ್ತದೆ. ಕೇಂದ್ರದ ಆರ್ಥಿಕ ಮತ್ತು ಪ್ರವಾಸೋದ್ಯಮ ಸಂಬಂಧಿತ ಪ್ರಯೋಜನಗಳು ಸಹ ಹೆಚ್ಚಾಗುತ್ತದೆ.”

“ದೆಹಲಿಯಲ್ಲಿ ಭವ್ಯವಾದ ಅಂತರಾಷ್ಟ್ರೀಯ ಪ್ರದರ್ಶನ ಮತ್ತು ಸಮಾವೇಶ ಕೇಂದ್ರವನ್ನು ಕಟ್ಟಲು   ಶ್ರಮಿಸಿದ ಶ್ರಮಿಕರನ್ನು ಗೌರವಿಸುತ್ತಿರುವುದು.”