Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಐಐಟಿ ಮದ್ರಾಸ್‌ನ 56ನೇ ಘಟಿಕೋತ್ಸವದಲ್ಲಿ ಪ್ರಧಾನಿ ಭಾಷಣ


ನಿಮ್ಮ ಕಣ್ಣುಗಳಲ್ಲಿ ಭವಿಷ್ಯದ ಕನಸುಗಳನ್ನು ಕಾಣುತ್ತಿದ್ದೇನೆ ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಹೇಳಿದರು. ಭಾರತದ ವರ್ಚಸ್ಸನ್ನು ಜಾಗತಿಕವಾಗಿ ಬಲಿಷ್ಠಗೊಳಿಸುತ್ತಿದ್ದೀರಿ. ಭಾರತದ ಸೃಜನಶೀಲತೆಯು ಆರ್ಥಿಕತೆ ಮುಖ್ಯವಾಗಿದೆ. ನೀವು ಎಲ್ಲಿ ಕಾರ್ಯನಿರ್ವಹಿಸುತ್ತೀರಿ, ಎಲ್ಲಿ ಇರುತ್ತೀರಿ ಎನ್ನುವುದು ಮುಖ್ಯವಲ್ಲ. ಮನಸ್ಸಿನಲ್ಲಿ ಮಾತ್ರ ತಾಯ್ನಾಡಿನ ಅಗತ್ಯಗಳ ಬಗ್ಗೆ ಗಮನದಲ್ಲಿಡಬೇಕು ಎಂದು ಪ್ರಧಾನಿ ಸಲಹೆ ನೀಡಿದರು.

ಭಾರತೀಯ ತಂತ್ರಜ್ಞಾನ ಸಂಸ್ಥೆ– ಮದ್ರಾಸ್‌ನ (ಐಐಟಿ) 56ನೇ ಘಟಿಕೋತ್ಸವದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಭಾಗವಹಿಸಿದ್ದರು.

ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಅವರು, ‘ನನ್ನ ಮುಂದಿ ಮಿನಿ ಭಾರತ ಮತ್ತು ನವ ಭಾರತ ಸ್ಫೂರ್ತಿ ಇದೆ. ಶಕ್ತಿ ಇದೆ. ಉತ್ಸಾಹ ಮತ್ತು ಸಕಾರಾತ್ಮಕ ಮನೋಭಾವದ ಯುವಕರು ಇಲ್ಲಿದ್ದಾರೆ. ನಿಮ್ಮ ಕಣ್ಣುಗಳಲ್ಲಿ ಭವಿಷ್ಯದ ಕನಸುಗಳನ್ನು ಕಾಣುತ್ತಿದ್ದೇನೆ. ನಿಮ್ಮ ಕಣ್ಣುಗಳಲ್ಲಿ ಭಾರತದ ಭವಿಷ್ಯ ಕಾಣುತ್ತಿದೆ’ ಎಂದು ಹುರಿದುಂಬಿಸಿದರು.

ವಿದ್ಯಾರ್ಥಿಗಳು ಪದವಿ ಪಡೆಯಲು ಕಾರಣರಾದ ಪೋಷಕರು, ಶಿಕ್ಷಕರು ಹಾಗೂ ಬೆಂಬಲ ನೀಡಿದ ಸಿಬ್ಬಂದಿ ವಹಿಸಿದ ಪ್ರಮುಖ ಪಾತ್ರವನ್ನು ಪ್ರಧಾನಿ ಅವರು ಈ ಸಂದರ್ಭದಲ್ಲಿ ಶ್ಲಾಘಿಸಿದರು.

‘ಎಲ್ಲ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ನೆರವಾದ ಸಿಬ್ಬಂದಿ ಕಾರ್ಯವೂ ಮುಖ್ಯವಾಗಿದೆ. ಅವರು ಸಹ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ತೆರೆಮರೆಯ ಹಿಂದೆ ನಿಮಗೆ ಆಹಾರ ತಯಾರಿಸಿದ್ದಾರೆ. ತರಗತಿಗಳನ್ನು ಸ್ವಚ್ಛಗೊಳಿಸಿದ್ದಾರೆ. ಹಾಸ್ಟೇಲ್‌ಗಳನ್ನು ಸ್ವಚ್ಛಗೊಳಿಸಿದ್ದಾರೆ’ ಎಂದು ಹೇಳಿದರು.

ಭಾರತರ ಯುವಕರಲ್ಲಿ ತಮ್ಮ ಸಾಮರ್ಥ್ಯದ ಬಗ್ಗೆ ವಿಶ್ವಾಸವಿದೆ. ಅಮೆರಿಕ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಸಾಮಾನ್ಯವಾಗಿ ಒಂದು ವಿಷಯದ ಮೇಲೆ ಹೆಚ್ಚು ಚರ್ಚೆ ನಡೆಯಿತು. ನವ ಭಾರತದ ಬಗ್ಗೆ ಆಶಾವಾದದ ಬಗ್ಗೆ ಅಲ್ಲಿ ಅಭಿಪ್ರಾಯಗಳು ವ್ಯಕ್ತವಾದವು. ಭಾರತೀಯ ಸಮುದಾಯ ಜಗತ್ತಿನಾದ್ಯಂತ ತನ್ನದೇ ಆದ ಛಾಪು ಮೂಡಿಸಿದೆ. ವಿಶೇಷವಾಗಿ ವಿಜ್ಞಾನ, ತಂತ್ರಜ್ಞಾನ ಮತ್ತು ಇನ್ನೊವೇಷನ್‌ ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಕಾರ್ಯವನ್ನು ಯಾರು ಮಾಡುತ್ತಿದ್ದಾರೆ. ಬಹುತೇಕ ಮಂದಿ ಇವರಲ್ಲಿ ನಿಮ್ಮ ಐಐಟಿ ಹಿರಿಯ ವಿದ್ಯಾರ್ಥಿಗಳಾಗಿದ್ದಾರೆ. ಜಾಗತಿಕವಾಗಿ ನೀವು ‘ಬ್ಯಾಂಡ್‌ ಇಂಡಿಯಾ’ ಅನ್ನು ಬಲಿಷ್ಠಗೊಳಿಸುತ್ತಿದ್ದೀರಿ.

‘ಭಾರತ ಇಂದು ಐದು ಬಿಲಿಯನ್‌ ಡಾಲರ್‌ ಆರ್ಥಿಕತೆ ಹೊಂದುವ ಆಶಾಭಾವದಲ್ಲಿದೆ. ನಿಮ್ಮ ಸೃಜನಶೀಲತೆ ಮತ್ತು ತಂತ್ರಜ್ಞಾನದ ಆಶೋತ್ತರಗಳು ಈ ಕನಸುಗಳಿಗೆ ಶಕ್ತಿ ತುಂಬುತ್ತದೆ. ಈ ಅಂಶಗಳು ಸ್ಪರ್ಧಾತ್ಮಕ ಆರ್ಥಿಕತೆ ಸಾಧಿಸಲು ಭಾರತಕ್ಕೆ ಅಡಿಪಾಯವಾಗಲಿದೆ. ಭಾರತದ ಇನ್ನೊವೇಷನ್‌ ಆರ್ಥಿಕತೆ ಮತ್ತು ಉಪಯುಕ್ತತತೆ ಮಿಶ್ರಣವಾಗಿದೆ ಎಂದು ಹೇಳಿದರು.

ನಮ್ಮ ದೇಶದಲ್ಲಿ ಸಂಶೋಧನೆ ಮತ್ತು ನವೀನ ಪದ್ಧತಿಗಳಿಗೆ ಬಲಿಷ್ಠವಾದ ಆರ್ಥಿಕ ವ್ಯವಸ್ಥೆ ಯನ್ನು ಸೃಷ್ಟಿಸಲು ನಾವು ಶ್ರಮಿಸಿದ್ದೇವೆ. ಹಲವು ಸಂಸ್ಥೆಗಳಲ್ಲಿ ಅಟಲ್‌ ಇನ್‌ಕ್ಯೂಬೇಷನ್‌ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಸ್ಟಾರ್ಟ್‌ಅಪ್‌ಗಳಿಗೆ ಮಾರುಕಟ್ಟೆ ಒದಗಿಸುವುದು ಮುಂದಿನ ಹೆಜ್ಜೆಯಾಗಿದೆ ಎಂದು ಪ್ರಧಾನಿ ಹೇಳಿದರು.

‘ನಿಮ್ಮ ಪರಿಶ್ರಮದಿಂದ ಅಸಾಧ್ಯ ಎನ್ನುವುದು ಸಾಧ್ಯವಾಗಿದೆ. ನಿಮಗೆ ವಿಪುಲ ಅವಕಾಶಗಳು ಕಾಯುತ್ತಿರಬಹುದು. ಎಲ್ಲವೂ ಸುಲಭವಾಗಿರುವುದಿಲ್ಲ. ಕನಸುಗಳನ್ನು ಕಾಣುವುದನ್ನು ನಿಲ್ಲಿಸದಿರಿ. ನಿಮಗೆ ನೀವೇ ಸವಾಲಾಗಿ. ಈ ಮೂಲಕ ನೀವು ಮತ್ತಷ್ಟು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುತ್ತೀರಿ’ ಎಂದು ಪ್ರಧಾನಿ ಹೇಳಿದರು.

‘ನೀವು ಎಲ್ಲಿ ಕೆಲಸ ಮಾಡುತ್ತೀರಿ. ಎಲ್ಲಿ ಇರುತ್ತೀರಿ ಎನ್ನುವುದು ಮುಖ್ಯವಲ್ಲ. ನಿಮ್ಮ ಮನಸ್ಸಿನಲ್ಲಿ ಸದಾ ನಿಮ್ಮ ತಾಯ್ನಾಡಿನ ಅಗತ್ಯತೆಗಳ ಬಗ್ಗೆ ಇರುವುದು ಮುಖ್ಯವಾಗಬೇಕು. ನಿಮ್ಮ ಕೆಲಸದ ಬಗ್ಗೆ, ಸಂಶೋಧನೆ, ಇನ್ನೊವೇಶಷನ್‌ ಬಗ್ಗೆ ಯೋಚಿಸಿ. ಅದು ನಿಮ್ಮ ತಾಯ್ನಾಡಿಗೆ ನೆರವಾಗಬಹುದು. ಇದು ನಿಮ್ಮ ಸಾಮಾಜಿಕ ಜವಾಬ್ದಾರಿಯೂ ಹೌದು’ ಎಂದು ಪ್ರಧಾನಿ ಹೇಳಿದರು.
‘ಇಂದು ಸಮಾಜ ಒಂದೇ ಬಾರಿ ಬಳಸುವ ಪ್ಲಾಸ್ಟಿಕ್‌ನಿಂದ ಮುಕ್ತಿ ಪಡೆಯಬೇಕಾಗಿದೆ. ಪರಿಸರ ಸ್ನೇಹಿ ಬದಲಾವಣೆ ಕ್ರಮಗಳನ್ನು ನಾವು ಅಳವಡಿಸಿಕೊಳ್ಳಬೇಕಾಗಿದೆ. ಆದರೆ, ಅನಾನುಕೂಲವಾಗುವ ವಸ್ತುಗಳಿಂದ ದೂರವಿರಬೇಕು. ಇಂತಹ ಸನ್ನಿವೇಶದಲ್ಲಿ ನಾವು ನಿಮ್ಮಂತಹ ಯುವಕರಿಂದ ಸೃಜನಶೀಲತೆ ಬಯಸುತ್ತೇವೆ. ತಂತ್ರಜ್ಞಾನವು ಡೇಟಾ ವಿಜ್ಞಾನ, ಡಯಾಗ್ನೋಸ್ಟಿಕ್ಸ್‌, ವಿಜ್ಞಾನ ಮತ್ತು ವೈದ್ಯಕೀಯ ಸಮ್ಮಿಲನದಿಂದ ಕೂಡಿದಾಗ ಹೊಸ ವಿಷಯಗಳು ಸೃಷ್ಟಿಯಾಗಬಹುದು’ ಎಂದು ಪ್ರಧಾನಿ ಹೇಳಿದರು.

‘ಎರಡು ರೀತಿಯ ಜನರಿದ್ದಾರೆ. ಬದುಕುವ ಜನ ಮತ್ತು ಬದುಕಿನಿಂದ ದೂರವಾಗುತ್ತಿರುವ ಜನ’ ಎಂದು ಸ್ವಾಮಿ ವಿವೇಕಾನಂದರ ವಾಣಿಯನ್ನು ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಇನ್ನೊಬ್ಬರಿಗಾಗಿ ಬದುಕುವವರು ಸಂತೋಷದ ಮತ್ತು ಸಂಪದ್ಭರಿತವಾದ ಜೀವನವನ್ನು ಕಳೆಯುತ್ತಾರೆ’ ಎಂದು ಪ್ರಧಾನಿ ಹೇಳಿದರು.

ಶಿಕ್ಷಣ ಮತ್ತು ಕಲಿಕೆ ನಿರಂತರ ಪ್ರಕ್ರಿಯೆ. ಸಂಸ್ಥೆಯಿಂದ ಪದವಿ ಪಡೆದ ಬಳಿಕವೂ ಕಲಿಕೆಯನ್ನು ಮುಂದುವರಿಸಬೇಕು ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಕಿವಿಮಾತು ಹೇಳಿದರು.