ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತೀಯ ಮೇನೇಜ್ಮೆಂಟ್ ಸಂಸ್ಥೆ (ಐಐಎಂ) ಮಸೂದೆ 2017ಗೆ ಅನುಮೋದನೆ ನೀಡಿದ್ದು, ಇದರ ಅಡಿಯಲ್ಲಿ ಐಐಎಂಗಳನ್ನು ರಾಷ್ಟ್ರೀಯ ಮಹತ್ವದ ಸಂಸ್ಥೆಗಳು ಎಂದು ಘೋಷಿಸಬಹುದಾಗಿದೆ, ಇದು ಐಐಎಂಗಳಿಗೆ ತಮ್ಮ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲು ಅವಕಾಶ ನೀಡುತ್ತದೆ.
ಮಸೂದೆಯ ಮುಖ್ಯಾಂಶಗಳು ಇಂತಿವೆ:
i. ಐಐಎಂಗಳು ತನ್ನ ವಿದ್ಯಾರ್ಥಿಗಳಿಗೆ ಪದವಿ ನೀಡಬಹುದು.
i. ಸೂಕ್ತ ಹೊಣೆಗಾರಿಕೆಯೊಂದಿಗೆ ಸಂಸ್ಥೆಗೆ ಸಂಪೂರ್ಣ ಸ್ವಾಯತ್ತತೆಯನ್ನು ಈ ಮಸೂದೆ ಕಲ್ಪಿಸುತ್ತದೆ.
ii. ಈ ಸಂಸ್ಥೆಗಳ ಆಡಳಿತವನ್ನು ಮಂಡಳಿ ನಿರ್ವಹಿಸುತ್ತದೆ, ಸಂಸ್ಥೆಯ ಅಧ್ಯಕ್ಷ ಮತ್ತು ನಿರ್ದೇಶಕರನ್ನು ಮಂಡಳಿ ಆಯ್ಕೆ ಮಾಡುತ್ತದೆ.
iii. ಮಂಡಳಿಯಲ್ಲಿ ತಜ್ಞರ ಮತ್ತು ಹಿರಿಯ ವಿದ್ಯಾರ್ಥಿಗಳ ಹೆಚ್ಚಿನ ಪಾಲ್ಗೊಳ್ಳುವಿಗೆ ಈ ಮಸೂದೆಯ ಮಹತ್ವದ ಇತರ ಅಂಶವಾಗಿದೆ.
iv. ಮಂಡಳಿಯಲ್ಲಿ ಪರಿಶಿಷ್ಟ ಜಾತಿ/ಪಂಗಡದ ಸದಸ್ಯರು ಮತ್ತು ಮಹಿಳೆಯರನ್ನು ಸೇರಿಸಲು ಅವಕಾಶ ಮಾಡಲಾಗಿದೆ.
v. ಸ್ವತಂತ್ರ ಸಂಸ್ಥೆಯಿಂದ ಸಂಸ್ಥೆಯ ಕಾರ್ಯನಿರ್ವಹಣೆಯನ್ನು ನಿಯಮಿತವಾಗಿ ಪರಾಮರ್ಶಿಸಲೂ ಮಸೂದೆ ಅವಕಾಶ ನೀಡುತ್ತದೆ ಮತ್ತು ಅದರ ಫಲಿತಾಂಶವನ್ನು ಸಾರ್ವಜನಿಕ ಡೊಮೈನ್ ನಲ್ಲಿ ಹಾಕಲಾಗುತ್ತದೆ.
vi. ಸಂಸ್ಥೆಯ ವಾರ್ಷಿಕ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ ಮತ್ತು ಸಿಎಜಿ ಅದರ ಲೆಕ್ಕಪತ್ರ ಪರಿಶೋಧನೆ ನಡೆಸುತ್ತದೆ.
vii. ಐಐಎಂಗಳಿಗೆ ಸಲಹಾ ಕಾಯವಾಗಿ ಸಮನ್ವಯ ವೇದಿಕೆಗೂ ಅವಕಾಶ ಮಾಡಲಾಗಿದೆ.
ಹಿನ್ನೆಲೆ:
ಇಂಡಿಯನ್ ಇನ್ಸ್ಟಿಟ್ಯೂಟ್ಸ್ ಆಫ್ ಮ್ಯಾನೇಜ್ ಮೆಂಟ್ ದೇಶದ ಪ್ರಮುಖ ಸಂಸ್ಥೆಯಾಗಿದ್ದು, ಜಾಗತಿಕವಾಗಿ ಮನ್ನಣೆ ಪಡೆದ ಪ್ರಕ್ರಿಯೆಯಂತೆ ಮ್ಯಾನೇಜ್ಮೆಂಟ್ ನಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ತರಬೇತಿಯನ್ನು ನೀಡುತ್ತಿದೆ. ಐಐಎಂಗಳನ್ನು ವಿಶ್ವದರ್ಜೆಯ ಮ್ಯಾನೇಜ್ಮೆಂಟ್ ಸಂಸ್ಥೆಗಳು ಮತ್ತು ಜ್ಞಾನ ಕೇಂದ್ರಗಳು ಎಂದು ಗುರುತಿಸಲಾಗಿದೆ ಮತ್ತು ಅವು ದೇಶಕ್ಕೆ ಮನ್ನಣೆಯನ್ನೂ ತಂದಿವೆ. ಸೊಸೈಟಿಗಳ ಕಾಯಿದೆ ಅಡಿಯಲ್ಲಿ ಎಲ್ಲ ಐಐಎಂಗಳೂ ಪ್ರತ್ಯೇಕ ಸ್ವಾಯತ್ತ ಸಂಸ್ಥೆಗಳಾಗಿ ನೋಂದಣಿಯಾಗಿವೆ.
ಸೊಸೈಟಿಗಳಾಗಿರುವ, ಐಐಎಂಗಳಿಗೆ ಪದವಿ ಪ್ರದಾನ ಮಾಡಲು ಅಧಿಕಾರ ಇರುವುದಿಲ್ಲ ಮತ್ತು ಹೀಗಾಗಿ, ಅವು ಸ್ನಾತಕೋತ್ತರ ಡಿಪ್ಲೊಮಾ ಮತ್ತು ಮ್ಯಾನೇಜ್ಮೆಂಟ್ ನಲ್ಲಿ ಫೆಲೋ ಕಾರ್ಯಕ್ರಮ ಮಾತ್ರ ನೀಡುತ್ತಿವೆ. ಆದರೆ ಇದನ್ನು ಅನುಕ್ರಮವಾಗಿ ಎಂಬಿಎ ಮತ್ತು ಪಿಎಚ್ಡಿಗೆ ಸಮಾನವಾಗಿ ಪರಿಗಣಿಸಲಾಗುತ್ತದೆ, ಆದರೆ ಈ ಸಮಾನತೆಯು ಅದರಲ್ಲೂ ಫೆಲೋ ಕಾರ್ಯಕ್ರಮವು ಜಾಗತಿಕವಾಗಿ ಮಾನ್ಯವಾಗುವುದಿಲ್ಲ.
AKT/VB/SH