Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏ.ಐ.ಐ.ಬಿ.ಯ ಮೂರನೇ ವಾರ್ಷಿಕ ಸಭೆಯ ಉದ್ಘಾಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣ

ಏ.ಐ.ಐ.ಬಿ.ಯ ಮೂರನೇ ವಾರ್ಷಿಕ ಸಭೆಯ ಉದ್ಘಾಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣ

ಏ.ಐ.ಐ.ಬಿ.ಯ ಮೂರನೇ ವಾರ್ಷಿಕ ಸಭೆಯ ಉದ್ಘಾಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣ

ಏ.ಐ.ಐ.ಬಿ.ಯ ಮೂರನೇ ವಾರ್ಷಿಕ ಸಭೆಯ ಉದ್ಘಾಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣ


ಏಷ್ಯಾ ಮೂಲಸೌಕರ್ಯ ಹೂಡಿಕೆ ಬ್ಯಾಂಕ್‍ನ ಅಧ್ಯಕ್ಷರೇ, ವೇದಿಕೆ ಮೇಲಿರುವ ಇತರ ಗಣ್ಯರೇ, ಭಾರತ ಮತ್ತು ಹೊರ ದೇಶಗಳಿಂದ ಆಗಮಿಸಿರುವ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ,

ಏಷ್ಯಾ ಮೂಲಸೌಕರ್ಯ ಹೂಡಿಕೆ ಬ್ಯಾಂಕ್‍ನ ಮೂರನೇ ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳಲು ಮುಂಬೈಗೆ ಬಂದಿರುವುದು ನನಗೆ ಹರ್ಷ ತಂದಿದೆ. ಬ್ಯಾಂಕ್ ಹಾಗೂ ಅದರ ಸದಸ್ಯರೊಂದಿಗೆ ನಮ್ಮ ಸಂಬಂಧವನ್ನು ಇನ್ನಷ್ಟು ಗಾಢವಾಗಿಸಿಕೊಳ್ಳಲು ಅವಕಾಶ ಸಿಕ್ಕಿರುವುದು ಸಂತಸದ ವಿಷಯ.

ಏಐಐಬಿ ಹಣಕಾಸು ವಹಿವಾಟನ್ನು ಜನವರಿ 2016ರಲ್ಲಿ ಆರಂಭಿಸಿತು. ಮೂರು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ತನ್ನ ತೆಕ್ಕೆಯಲ್ಲಿ 87 ಸದಸ್ಯರನ್ನು ಹೊಂದಿದೆ ಮತ್ತು 100 ಶತಕೋಟಿ ಅಮೆರಿಕನ್ ಡಾಲರ್ ಬಂಡವಾಳವನ್ನು ಹೊಂದಿದೆ. ಏಷ್ಯಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಲು ಸನ್ನದ್ಧವಾಗಿದೆ.

ಸ್ನೇಹಿತರೇ, ದೇಶದ ನಾಗರಿಕರಿಗೆ ಉತ್ತಮ ನಾಳೆಗಳನ್ನು ನೀಡಲು ಏಷ್ಯಾದ ದೇಶಗಳು ನಡೆಸಿದ ಸಂಘಟಿತ ಪ್ರಯತ್ನದ ಫಲವೇ ಏಷ್ಯಾ ಮೂಲಸೌಕರ್ಯ ಹೂಡಿಕೆ ಬ್ಯಾಂಕ್. ಅಭಿವೃದ್ಧಿ ಹೊಂದುತ್ತಿರುವ ದೇಶಗಳಾದ ನಾವು ಎದುರಿಸುತ್ತಿರುವ ಸವಾಲುಗಳು ಒಂದೇ ರೀತಿಯವು. ಅದರಲ್ಲಿ ಒಂದು-ಮೂಲಸೌಲಭ್ಯ ಒದಗಿಸಲು ಬೇಕಾದ ಸಂಪನ್ಮೂಲಗಳ ಒಗ್ಗೂಡಿಸುವಿಕೆ. ಈ ವರ್ಷದ ಸಮ್ಮೇಳನದ ವಿಷಯ,”ಮೂಲಸೌಕರ್ಯಕ್ಕೆ ಹಣಕಾಸಿನ ಸಂಗ್ರಹಣೆ: ಅನ್ವೇಷಣೆ ಮತ್ತು ಸಹಯೋಗ’ ಎಂದು ಇರುವುದು ನನಗೆ ಸಂತಸ ತಂದಿದೆ. ಸುಸ್ಥಿರ ಮೂಲಸೌಲಭ್ಯದಲ್ಲಿ ಏಐಐಬಿಯ ಹೂಡಿಕೆಯು ಕೋಟ್ಯಂತರ ಜನರ ಬದುಕಿನ ಮೇಲೆ ಪರಿಣಾಮ ಬೀರುತ್ತದೆ.

ಶಿಕ್ಷಣ, ಆರೋಗ್ಯ ರಕ್ಷಣೆ, ಆರ್ಥಿಕ ಸೇವೆಗಳು ಹಾಗೂ ಔಪಚಾರಿಕ ಉದ್ಯೋಗಾವಕಾಶ ಲಭ್ಯತೆಯಲ್ಲಿ ಏಷ್ಯಾ ವಿಶಾಲ ವ್ಯಾಪ್ತಿಯ ತಾರತಮ್ಯವನ್ನು ಎದುರಿಸುತ್ತಿದೆ. ಏಐಐಬಿಯಂಥ ಪ್ರಾಂತೀಯ ಬಹುಮುಖಿ ಸಂಸ್ಥೆಗಳು ಸಂಪನ್ಮೂಲವನ್ನು ಸಂಗ್ರಹಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಬಲ್ಲವು. ಇಂಧನ ಮತ್ತು ಶಕ್ತಿ, ಸಾಗಣೆ, ಟೆಲಿಕಾಂ, ಗ್ರಾಮೀಣ ಮೂಲಸೌಕರ್ಯ, ಕೃಷಿ ಅಭಿವೃದ್ಧಿ, ಜಲ ಪೂರೈಕೆ ಹಾಗೂ ನೈರ್ಮಲ್ಯ, ಪರಿಸರ ಸಂರಕ್ಷಣೆ, ನಗರಾಬಿ üವೃದ್ಧಿ ಮತ್ತು ಸರಕು ಸಾಗಣೆ ಇನ್ನಿತರ ಕ್ಷೇತ್ರಗಳಿಗೆ ದೀರ್ಘಕಾಲೀನ ಆಕ ನೆರವು ಅಗತ್ಯವಿದೆ. ಇಂಥ ಅನುದಾನದ ಮೇಲಿನ ಬಡ್ಡಿ ಹೆಚ್ಚು ಇರಬಾರದು ಹಾಗೂ ಸುಸ್ಥಿರವಾಗಿರಬೇಕು.

ಇಷ್ಟು ಕಡಿಮೆ ಅವಧಿಯಲ್ಲೇ ಏಐಐಬಿ 12ಕ್ಕೂ ಹೆಚ್ಚು ದೇಶಗಳಲ್ಲಿನ 25 ಯೋಜನೆಗಳಿಗೆ ಅಂಗೀಕಾರ ನೀಡಿದ್ದು, ನೀಡಿದ ಒಟ್ಟು ಹಣಕಾಸು ನೆರವು ಪ್ರಮಾಣ 4 ಶತಕೋಟಿ ಅಮೆರಿಕನ್ ಡಾಲರ್‍ಗಿಂದ ಹೆಚ್ಚು ಇದೆ. ಇದೊಂ ದು ಉತ್ತಮ ಆರಂಭ. ಏಐಐಬಿ ನೂರು ಶತಕೋಟಿ ಡಾಲರ್ ಬಂಡವಾಳ ಹೊಂದಿದ್ದರೂ, ಸದಸ್ಯ ರಾಷ್ಟ್ರಗಳಿಗೆ ಮೂಲಸೌಲಭ್ಯ ನಿರ್ಮಾಣಕ್ಕೆ ಹೆಚ್ಚು ಬಂಡವಾಳ ಬೇಕಾಗಿರುವುದರಿಂದ, ತನ್ನ ಸಾಲ ನೀಡಿಕೆ ಸಾಮಥ್ರ್ಯವನ್ನು 4 ಶತಕೋಟಿ ಡಾಲರ್‍ನಿಂದ 2020ರ ಹೊತ್ತಿಗೆ 40 ಶತಕೋಟಿ ಡಾಲರ್ ಹಾಗೂ 2025ರೊಳಗೆ 100 ಶತಕೋಟಿ ಡಾಲರ್‍ಗೆ ಹೆಚ್ಚಿಸಿಕೊಳ್ಳಬೇಕೆಂದು ಈ ಸಂದರ್ಭದಲ್ಲಿ ನಾನು ಕೋರುತ್ತೇನೆ. ಇದಕ್ಕಾಗಿ ಸಾಲ ನೀಡಿಕೆ ಪ್ರಕ್ರಿಯೆಯನ್ನು ಸರಳಗೊಳಿಸಬೇಕು ಹಾಗೂ ಸಾಲವನ್ನು ಶೀಘ್ರವಾಗಿ ಮಂಜೂರು ಮಾಡಬೇಕು.

ಭಾರತ ಹಾಗೂ ಏಐಐಬಿ ಎರಡೂ ಕೂಡ, ಆರ್ಥಿಕ ಬೆಳವಣಿಗೆಯು ಎಲ್ಲರನ್ನೂ ಒಳಗೊಂಡಿರಬೇಕು ಹಾಗೂ ಸುಸ್ಥಿರವಾಗಿರಬೇಕು ಎಂಬ ಬದ್ಧತೆ ಹೊಂದಿವೆ ಎಂದು ನಾನು ನಂಬಿದ್ದೇನೆ. ಭಾರತದಲ್ಲಿ ನವೀನ ಎನ್ನಬಹುದಾದ ಸಾರ್ವಜನಿಕ ಖಾಸಗಿ ಸಹಭಾಗಿತ್ವ, ಮೂಲಸೌಕರ್ಯ ಸಾಲದ ಬಾಂಡ್‍ಗಳು ಮತ್ತು ಮೂಲಸೌಕರ್ಯ ಹೂಡಿಕೆ ದತ್ತಿಗಳ ಮೂಲಕ ಮೂಲಸೌಕರ್ಯ ನಿರ್ಮಾಣ ಕ್ಷೇತ್ರಕ್ಕೆ ನಾವು ನೆರವು ನೀಡುತ್ತಿದ್ದೇವೆ. ಭಾರತವು ಮೂಲಸೌಕರ್ಯದಲ್ಲಿ ಹೂಡಿಕೆಗೆ ಬ್ರೌನ್‍ಫೀಲ್ಡ್ ಆಸ್ತಿಗಳನ್ನು ಪ್ರತ್ಯೇಕ ಆಸ್ತಿ ವರ್ಗವಾಗಿ ಅಭಿವೃದ್ಧಿ ಪಡಿಸಲು ಪ್ರಯತ್ನಿಸುತ್ತಿದೆ. ಇಂಥ ಆಸ್ತಿಗಳು ಈಗಾಗಲೇ ಭೂಸ್ವಾಧೀನ, ಪರಿಸರ ಹಾಗೂ ಅರಣ್ಯ ಇಲಾಖೆಯಿಂದ ಅನುಮತಿ ಪಡೆದಿರುವುದರಿಂದ, ಹೆಚ್ಚು ಸಮಸ್ಯೆಗೆ ಸಿಲುಕುವ ಸಾಧ್ಯತೆ ಇರುವುದಿಲ್ಲ. ಆದ್ದರಿಂದ ಅಂಥ ಆಸ್ತಿಗಳಿಗೆ ಪಿಂಚಣಿ, ವಿಮೆ ಹಾಗೂ ಸ್ವಾಯತ್ತ ಐಶ್ವರ್ಯ ನಿಧಿಗಳ ಮೂಲಕ ಹೂಡಿಕೆ ಮಾಡಬಹುದಾಗಿದೆ.

ಇನ್ನೊಂದು ಪ್ರಮುಖ ಉಪಕ್ರಮವೆಂದರೆ, ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ. ಮೂಲಸೌಕರ್ಯ ಕ್ಷೇತ್ರಕ್ಕೆ ದೇಶಿ ಹಾಗೂ ಅಂತಾರಾಷ್ಟ್ರೀಯ ಮೂಲಗಳಿಂದ ಬಂಡವಾಳ ಹರಿಯುವಂತೆ ಮಾಡುವುದು ಇದರ ಉದ್ದೇಶ.

ಮಹನೀಯರೇ ಮತ್ತು ಮಹಿಳೆಯರೇ,

ಭಾರತವು ಜಗತ್ತಿನ ಅತ್ಯಂತ ಬಂಡವಾಳಸ್ನೇಹಿ ಆರ್ಥಿಕತೆ. ಹೂಡಿಕೆದಾರರು ಬೆಳವಣಿಗೆ ಹಾಗೂ ಭಾರಿ(ಮ್ಯಾಕ್ರೋ) ಆರ್ಥಿಕತೆಯ ಸ್ಥಿರತೆಯನ್ನು ಬಯಸುತ್ತಾರೆ. ರಾಜಕೀಯ ಸ್ಥಿರತೆ ಹಾಗೂ ತಮ್ಮ ಹೂಡಿಕೆಯ ರಕ್ಷಣೆಗೆ ಬೆಂಬಲ ನೀಡುವ ನಿಯಂತ್ರಣ ಚೌಕಟ್ಟನ್ನು ಅಪೇಕ್ಷಿಸುತ್ತಾರೆ. ಹೂಡಿಕೆದಾರರು ಅಧಿಕ ಮೌಲ್ಯವರ್ಧನೆ ಹಾಗೂ ಭಾರಿ ಪ್ರಮಾಣದಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳಲು ದೇಶಿ ಮಾರುಕಟ್ಟೆಯ ಗಾತ್ರ, ಕುಶಲ ಕಾರ್ಮಿಕರ ಲಭ್ಯತೆ ಮತ್ತು ಉತ್ತಮ ಭೌತಿಕ ಮೂಲಸೌಕರ್ಯದ ಅಗತ್ಯವಿರುತ್ತದೆ. ಈ ಎಲ್ಲ ಮಾನದಂಡಗಳಲ್ಲೂ ಭಾರತವು ಉತ್ತಮ ಸ್ಥಾನದಲ್ಲಿದೆ ಹಾಗೂ ಉತ್ತಮ ಸಾಧನೆ ಮಾಡಿದೆ. ನಮ್ಮ ಕೆಲವು ಸಾಧನೆಗಳು ಹಾಗೂ ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ.

ಜಾಗತಿಕ ಆರ್ಥಿಕ ಕ್ಷಿತಿಜದಲ್ಲಿ ಭಾರತವು ಪ್ರಖರ ಬಿಂದುವಾಗಿದ್ದು, ಅದು ಜಾಗತಿಕ ಆರ್ಥಿಕತೆಯ ಬೆಳವಣಿಗೆಗೂ ಕಾರಣವಾಗಿದೆ. ದೇಶವು 2.8 ಶತ ಕೋಟಿ ಅಮೆರಿಕನ್ ಡಾಲರ್ ಮೌಲ್ಯದ, ಜಗತ್ತಿನ ಏಳನೇ ದೊಡ್ಡ ಆರ್ಥಿಕತೆ ಯಾಗಿದೆ. ಖರೀದಿ ಸಾಮಥ್ರ್ಯವನ್ನು ಪರಿಗಣಿಸಿದರೆ, ಮೂರನೇ ಸ್ಥಾನ ಹೊಂದಿದೆ. 2017ರ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ನಮ್ಮ ಬೆಳವಣಿಗೆ ಶೇ 7.7 ಇತ್ತು. 2018ರಲ್ಲಿ, ಬೆಳವಣಿಗೆ ಶೇ 7.4 ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ.

ನಮ್ಮ ಮ್ಯಾಕ್ರೋ ಆರ್ಥಿಕ ಬುನಾದಿಯು ಉತ್ಪನ್ನ-ಪದಾರ್ಥಗಳ ಬೆಲೆಯಲ್ಲಿ ಸ್ಥಿರತೆ, ಉದ್ಯಮ ಕ್ಷೇತ್ರಗಳ ಪ್ರಾಬಲ್ಯ ಹಾಗೂ ಹಣಕಾಸು ಪರಿಸ್ಥಿತಿ ನಿಯಂತ್ರಣದಲ್ಲಿ ಇರುವುದರಿಂದ ಸುಭದ್ರವಾಗಿದೆ. ತೈಲ ಬೆಲೆ ಹೆಚ್ಚಳದ ನಡುವೆ ಯೂ, ಹಣದುಬ್ಬರವು ನಿಗದಿಪಡಿಸಿದ ಮಿತಿಯಲ್ಲೇ ಇದೆ. ಸರ್ಕಾರವು ಆರ್ಥಿಕ ಕ್ರೋಡೀಕರಣಕ್ಕೆ ಬದ್ಧವಾಗಿದೆ. ಜಿಡಿಪಿಗೆ ಹೋಲಿಸಿದರೆ, ಸರ್ಕಾರದ ಸಾಲದ ಶೇಕಡಾವಾರು ಪ್ರಮಾಣ ನಿರಂತರವಾಗಿ ಕುಸಿಯುತ್ತಿದೆ. ದೀರ್ಘ ಕಾಲದ ಬಳಿಕ ಭಾರತದ ಸೂಚ್ಯಂಕಗಳು ಉನ್ನತೀಕರಣಗೊಂಡಿವೆ.

ಹೊರದೇಶಗಳ ಜೊತೆಗಿನ ವಹಿವಾಟು ಸದೃಢವಾಗಿದೆ. ಕಾಯ್ದಿಟ್ಟ ವಿದೇಶಿ ವಿದೇಶಿ ವಿನಿಮಯದ ಮೊತ್ತ 400 ಶತಕೋಟಿ ಅಮೆರಿಕನ್ ಡಾಲರ್‍ಗೂ ಅಧಿಕವಿದ್ದು, ಇದರಿಂದ ಹೆಚ್ಚು ದೃಢತೆ ಸಾಧ್ಯವಾಗಿದೆ. ಭಾರತದ ಆರ್ಥಿಕತೆಯಲ್ಲಿ ಜಗತ್ತಿನ ವಿಶ್ವಾಸ ಹೆಚ್ಚುತ್ತಿದೆ. ವಿದೇಶಿ ಬಂಡವಾಳ ಹೆಚ್ಚುತ್ತಲೇ ಇದ್ದು, ಕಳೆದ 4 ವರ್ಷದಲ್ಲಿ 222 ಶತಕೋಟಿ ಅಮೆರಿಕನ್ ಡಾಲರ್‍ನಷ್ಟು ಹಣ ಹೂಡಿಕೆಯಾಗಿದೆ. ಅಂಕ್ಟಾಡ್‍ನ ಜಾಗತಿಕ ಹೂಡಿಕೆ ವರದಿ ಪ್ರಕಾರ, ಜಗತ್ತಿನಲ್ಲಿ ಹೆಚ್ಚು ಬಂಡವಾಳ ಹರಿಯುತ್ತಿರುವ ದೇಶ ಭಾರತ.

ಮಹನೀಯರೇ ಮತ್ತು ಮಹಿಳೆಯರೇ,

ವಿದೇಶ ಹೂಡಿಕೆದಾರರ ದೃಷ್ಟಿಯಲ್ಲಿ ಭಾರತವು ಕಡಿಮೆ ಆತಂಕ ಎದುರಿಸುತ್ತಿರುವ ರಾಜಕೀಯ ಆರ್ಥಿಕತೆಯಾಗಿದೆ. ಹೂಡಿಕೆಯನ್ನು ಉತ್ತೇಜಿಸಲು ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ. ವ್ಯವಹಾರವನ್ನು ಸುಲಭ ಗೊಳಿಸಲು ನಾವು ನಿಯಮಗಳನ್ನು ಸರಳಗೊಳಿಸಿದ್ದೇವೆ ಹಾಗೂ ದಿಟ್ಟ ಸುಧಾರಣೆ ಕ್ರಮಗಳನ್ನು ಕೈಗೊಂಡಿದ್ದೇವೆ. ಹೂಡಿಕೆದಾರರಿಗೆ ಸಕ್ಷಮ, ಪಾರದರ್ಶಕ, ನಂಬಿಕಾರ್ಹ ಹಾಗೂ ಮುನ್ಸೂಚನೆ ನೀಡುವ ವಾತಾವರಣವನ್ನು ಸೃಷ್ಟಿಸಿದ್ದೇವೆ. ವಿದೇಶಿ ಬಂಡವಾಳ ಹೂಡಿಕೆ ನೀತಿಗಳನ್ನು ಸುಧಾರಿಸಿದ್ದೇವೆ. ಇಂದು ಬಹುತೇಕ ಕ್ಷೇತ್ರಗಳಲ್ಲಿ ತನ್ನಿಂತಾನೇ ಅನುಮತಿ ಲಭ್ಯವಾಗುವ ಸ್ಥಿತಿ ಇದೆ.

ದೇಶ ಕೈಗೊಂಡ ಅತ್ಯಂತ ಗಮನಾರ್ಹ ಸುಧಾರಣೆಗಳಲ್ಲಿ ಜಿಎಸ್‍ಟಿ ಒಂದು. ಒಂದು ದೇಶ, ಒಂದು ತೆರಿಗೆ ನೀತಿಯಡಿ ಅದು ಕಾರ್ಯ ನಿರ್ವಹಿಸುತ್ತದೆ. ತೆರಿಗೆ ಹೆಚ್ಚಳವನ್ನು ಕಡಿಮೆಗೊಳಿಸುತ್ತದೆ, ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ ಮತ್ತು ಕಾರ್ಯದಕ್ಷತೆಯನ್ನು ಅಧಿಕಗೊಳಿಸುತ್ತದೆ. ಇದರಿಂದ ಉದ್ಯಮಿಗಳಿಗೆ ವಹಿವಾಟು ಸುಲಭವಾಗಲಿದೆ.

ಜಿಎಸ್‍ಟಿ ಮಾತ್ರವಲ್ಲದೆ ಇನ್ನಿತರ ಹಲವು ಬದಲಾವಣೆಗಳನ್ನು ಜಾಗತಿಕ ಉದ್ಯಮಿಗಳು ಗಮನಿಸಿದ್ದಾರೆ. ವಿಶ್ವ ಬ್ಯಾಂಕ್‍ನ 2018ರ ಸುಗಮ ವಹಿವಾಟು ವರದಿಯಲ್ಲಿ ಭಾರತದ ಸ್ಥಾನ ಸುಧಾರಿಸಿದ್ದು, ಕಳೆದ ಮೂರು ವರ್ಷದಲ್ಲಿ 42 ಸ್ಥಾನದಿಂದ ಮೇಲೇರಿದ್ದು, ಮೊದಲ ನೂರು ದೇಶಗಳಲ್ಲಿ ಸ್ಥಾನ ಪಡೆದುಕೊಂಡಿದೆ.

ಭಾರತೀಯ ಮಾರುಕಟ್ಟೆಯ ಗಾತ್ರ ಮತ್ತು ಬೆಳವಣಿಗೆಯು ಇನ್ನಷ್ಟು ಪ್ರಗತಿಯ ಸಾಮಥ್ರ್ಯ ಹೊಂದಿದೆ. ಕಳೆದ ಹತ್ತು ವರ್ಷದಲ್ಲಿ ತಲಾದಾಯ ದುಪ್ಪಟ್ಟಾಗಿದೆ. ನಮ್ಮಲ್ಲಿ 300 ದಶಲಕ್ಷ ಮಧ್ಯಮ ವರ್ಗದ ಗ್ರಾಹಕರಿದ್ದಾರೆ. ಮುಂದಿನ ಹತ್ತು ವರ್ಷದಲ್ಲಿ ಈ ಸಂಖ್ಯೆ ದುಪ್ಪಟ್ಟಾಗುವ ನಿರೀಕ್ಷೆ ಇದೆ. ಭಾರತದ ಅಗತ್ಯಗಳ ಗಾತ್ರ ಮತ್ತು ಪ್ರಮಾಣವು ಹೂಡಿಕೆದಾರರಿಗೆ ಹೆಚ್ಚು ಅನುಕೂಲಕರವಾಗಿದೆ. ಉದಾಹರಣೆಗೆ, ನಗರ ಪ್ರದೇಶದಲ್ಲಿ ಹತ್ತು ದಶಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಹಲವು ದೇಶಗಳ ಒಟ್ಟು ಅಗತ್ಯಕ್ಕೆ ಹೋಲಿಸಿದರೆ, ಇದು ಹೆಚ್ಚು. ಆದ್ದರಿಂದ, ಭಾರತದಲ್ಲಿ ಗೃಹ ನಿರ್ಮಾಣದಲ್ಲಿ ನೂತನ ತಂತ್ರಜ್ಞಾನವನ್ನು ಬಳಸಲು ಯತ್ನಿಸಿದಲ್ಲಿ, ಹೆಚ್ಚು ಲಾಭದಾಯಕ ಆಗಲಿದೆ.

ಗಾತ್ರವನ್ನು ಗಣಿಸಿದರೆ, ಮರುಬಳಕೆ ಇಂಧನ ಕ್ಷೇತ್ರ ಇನ್ನೊಂದು ಉದಾಹರಣೆ. 2022ರೊಳಗೆ ಪುನರ್‍ಬಳಕೆ ಇಂಧನ ಮೂಲಗಳಿಂದ 175 ಗಿಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಇರಿಸಿಕೊಂಡಿದ್ದೇವೆ. ಇದರಲ್ಲಿ ಸೌರ ವಿದ್ಯುತ್ ಪಾಲು 100 ಗಿಗಾವ್ಯಾಟ್. ಮತ್ತು, ಈ ಗುರಿಗಳನ್ನು ದಾಟುವ ಮಾರ್ಗದಲ್ಲಿ ಇದ್ದೇವೆ. 2017ರಲ್ಲಿ ಸಾಂಪ್ರದಾಯಿಕ ಇಂಧನ ಮೂಲಗಳಿಗೆ ಹೋಲಿಸಿದರೆ, ಮರುಬಳಕೆ ಇಂಧನ ಕ್ಷೇತ್ರದಲ್ಲಿ ಹೆಚ್ಚು ಹೂಡಿಕೆ ಮಾಡಿದ್ದೇವೆ. ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಮೂಲಕ ಸೌರ ವಿದ್ಯುತ್‍ನ್ನು ಮುನ್ನೆಲೆಗೆ ತರಲು ಪ್ರಯತ್ನಗಳನ್ನು ಮಾಡಿದ್ದೇವೆ. ಈ ವರ್ಷ ಒಕ್ಕೂಟದ ಉದ್ಘಾಟನೆ ಕಾರ್ಯಕ್ರಮವು ಹೊಸ ದಿಲ್ಲಿಯಲ್ಲಿ ನಡೆಯಿತು. 2030 ರೊಳಗೆ ಒಂದು ಟ್ರಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಿ, 1000 ಗಿಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವುದು ಈ ಒಕ್ಕೂಟದ ಗುರಿಯಾಗಿದೆ.

ಇ-ಚಾಲನೆ ಕ್ಷೇತ್ರದಲ್ಲಿ ಭಾರತ ಕೆಲಸ ಮಾಡುತ್ತಿದೆ. ನಮಗೆ ಎದುರಾಗಿರುವ ಸವಾಲು, ಶೇಖರಣೆ ತಂತ್ರಜ್ಞಾನದ್ದು. ಈ ವರ್ಷ ಇ-ಮೊಬಿಲಿಟಿಗೆ ಸಂಬಂಧಿಸಿದ ಜಾಗತಿಕ ಸಮಾವೇಶವೊಂದನ್ನು ಹಮ್ಮಿಕೊಳ್ಳುತ್ತಿದ್ದೇವೆ. ಸಮಾವೇಶವು ಈ ಕ್ಷೇತ್ರದಲ್ಲಿ ಮುನ್ನಡೆಯಲು ನೆರವಾಗಲಿದೆ ಎನ್ನುವ ಭರವಸೆ ಇದೆ.

ಸ್ನೇಹಿತರೇ,

ದೇಶದಲ್ಲಿ ಎಲ್ಲ ಹಂತದಲ್ಲೂ ಸಂಪರ್ಕ ಜಾಲವನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ರಾಷ್ಟ್ರೀಯ ಕಾರಿಡಾರ್‍ಗಳು ಹಾಗೂ ಹೆದ್ದಾರಿಗಳ ನಿರ್ಮಾಣದ ಮೂಲಕ ರಸ್ತೆ ಸಂಪರ್ಕವನ್ನು ಸುಧಾರಿಸುವುದು ಭಾರತಮಾಲಾ ಯೋಜನೆಯ ಗುರಿ. ಸಾಗರಮಾಲಾ ಯೋಜನೆ ಮೂಲಕ ಬಂದರುಗಳಿಗೆ ಸಂಪರ್ಕ ಹೆಚ್ಚಳ, ಬಂದರುಗಳ ಆಧುನಿಕೀಕರಣ ಮತ್ತು ಬಂದರುಗಳಿಗೆ ಸಂಬಂಧಿಸಿದ ಉದ್ಯಮಗಳನ್ನು ಉತ್ತೇಜಿಸಲಾಗುತ್ತಿದೆ. ನಮ್ಮ ರೈಲ್ವೆ ಸಂಪರ್ಕ ಜಾಲದಲ್ಲಿ ದಟ್ಟಣೆಯನ್ನು ನಿವಾರಿಸಲು ಸರಕು ಸಾಗಣೆಗೆ ಪ್ರತ್ಯೇಕ ಕಾರಿಡಾರ್‍ಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಜಲ ಮಾರ್ಗ ವಿಕಾಸ ಯೋಜನೆಯಿಂದ ಒಳನಾಡಿನ ಜಲಮಾರ್ಗಗಳ ಮೂಲಕ ದೇಶಿ ವ್ಯಾಪಾರವನ್ನು ಉತ್ತೇಜಿಸಲು ರಾಷ್ಟ್ರೀಯ ಜಲಮಾರ್ಗಗಳ ಸಾಮಥ್ರ್ಯವನ್ನು ಹೆಚ್ಚಿಸಲಾಗುತ್ತಿದೆ. ಉಡಾನ್ ಯೋಜನೆಯ ಮೂಲಕ ಪ್ರಾಂತೀಯ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಿ, ವಾಯುಮಾರ್ಗಗಳ ಸಂಪರ್ಕವನ್ನು ಸುಧಾರಿಸಲು ಪ್ರಯತ್ನಿಸಲಾಗು ತ್ತಿದೆ. ಸರಕು ಸಾಗಣೆ ಹಾಗೂ ಸಂಚಾರಕ್ಕೆ ದೇಶದ ಕರಾವಳಿಯನ್ನು ಬಳಸಿಕೊಳ್ಳಲು ಹೆಚ್ಚು ಗಮನ ನೀಡಬೇಕಿದ್ದು, ಆ ಕ್ಷೇತ್ರದ ಸಾಮಥ್ರ್ಯವನ್ನು ನಿರ್ಲಕ್ಷಿಸಿದ್ದೇವೆ ಎನ್ನುವುದು ನನ್ನ ಅಭಿಪ್ರಾಯ.

ಸಾಂಪ್ರದಾಯಿಕ ಮೂಲಸೌಲಭ್ಯಕ್ಕೆ ಸಂಬಂಧಿಸಿದಂತೆ ಮಾತನ್ನಾಡುತ್ತಿರುವಾಗಲೇ, ಕೆಲವು ಆಧುನಿಕ ಕಾಲದ ಮೂಲಸೌಲಭ್ಯ ಕುರಿತು ನಾನು ಉಲ್ಲೇಖಿಸಬೇಕಾಗುತ್ತದೆ. ಭಾರತ್‍ನೆಟ್ ಕೊನೆಯ ಹಂತದ ಅಂತರ್ಜಾಲ ಸಂಪರ್ಕವನ್ನು ಕಲ್ಪಿಸುವ ಗುರಿಯನ್ನು ಹೊಂದಿದೆ. ಭಾರತದಲ್ಲಿ 460 ದಶಲಕ್ಷ ಅಂತರ್ಜಾಲ ಬಳಕೆದಾರರು ಹಾಗೂ 1.2 ಶತಕೋಟಿ ಮೊಬೈಲ್ ಫೋನ್ ಬಳಕೆದಾರರಿದ್ದಾರೆ. ನಾವು ಡಿಜಿಟಲ್ ಪಾವತಿಯನ್ನು ಉತ್ತೇಜಿಸುತ್ತಿದ್ದೇವೆ. ನಮ್ಮ ಸಂಯುಕ್ತ ಪಾವತಿ ಇಂಟರ್‍ಫೇಸ್ ಅಥವಾ ಯುಪಿಐ, ಭೀಮ್ ಆ್ಯಪ್ ಮತ್ತು ರುಪೇ ಕಾರ್ಡ್ ಜತೆಗೂಡಿ, ಡಿಜಿಟಲ್ ಆರ್ಥಿಕತೆಯ ಸಾಮಥ್ರ್ಯವನ್ನು ತೋರಿಸಿಕೊಟ್ಟಿದೆ. ಉಮಂಗ್ ಆ್ಯಪ್ ಮೂಲಕ ನಾಗರಿಕರಿಗೆ ಮೊಬೈಲ್‍ನಲ್ಲಿ ನೂರಕ್ಕೂ ಹೆಚ್ಚು ಸೇವೆಗಳು ಲಭ್ಯವಾಗುವಂತೆ ಮಾಡಲಾಗಿದೆ. ಡಿಜಿಟಲ್ ಇಂಡಿಯಾ ಆಂದೋಲನವು ಗ್ರಾಮೀಣ-ನಗರದ ನಡುವಿನ ಡಿಜಿಟಲ್ ಕಂದಕವನ್ನು ನಿವಾರಿಸುವ ಗುರಿಯನ್ನು ಹೊಂದಿದೆ.

ಕೃಷಿ ಭಾರತದ ಆರ್ಥಿಕತೆಯ ಜೀವನಾಡಿ. ನಾವು ಗೋದಾಮುಗಳು, ಶೀತಲೀಕರಣ ಘಟಕಗಳು, ಆಹಾರ ಸಂಸ್ಕರಣೆ, ಬೆಳೆ ವಿಮೆ ಹಾಗೂ ಇನ್ನಿತರ ಸಂಬಂಧಿಸಿದ ಚಟುವಟಿಕೆಗಳಲ್ಲಿ ಹೂಡಿಕೆಯನ್ನು ಉತ್ತೇಜಿಸುತ್ತಿದ್ದೇವೆ. ನೀರಿನ ಸಮರ್ಥ ಬಳಕೆ ಮೂಲಕ, ಕಡಿಮೆ ನೀರಿನಲ್ಲಿ ಹೆಚ್ಚು ಉತ್ಪಾದನೆ ಮಾಡಲು ಸೂಕ್ಷ್ಮ ನೀರಾವರಿಯನ್ನು ಪ್ರೋತ್ಸಾಹಿಸುತ್ತಿದ್ದೇವೆ. ಏಐಐಬಿ ಈ ಕ್ಷೇತ್ರದಲ್ಲಿ ಹೂಡಿಕೆಯ ಸಾಧ್ಯತೆಗಳನ್ನು ಪರಿಶೀಲಿಸಬೇಕೆಂದು ಹಾಗೂ ನಮ್ಮೊಡನೆ ಕೈ ಜೋಡಿಸಬೇಕೆಂದು ಕೋರುತ್ತೇನೆ.

2020ರೊಳಗೆ ದೇಶದ ಎಲ್ಲ ಬಡವರು ಹಾಗೂ ವಸತಿರಹಿತರಿಗೆ ಶೌಚಾಲಯ, ನೀರು ಹಾಗೂ ವಿದ್ಯುತ್ ಸಂಪರ್ಕವಿರುವ ಮನೆಗಳನ್ನು ಒದಗಿಸಬೇಕೆಂಬುದು ನಮ್ಮ ಗುರಿ. ತ್ಯಾಜ್ಯದ ಪರಿಣಾಮಕಾರಿ ನಿರ್ವಹಣೆಗೆ ನಾನಾ ಕಾರ್ಯ ತಂತ್ರಗಳನ್ನು ನಾವು ಪರಿಶೀಲಿಸುತ್ತಿದ್ದೇವೆ.

ಇತ್ತೀಚೆಗೆ ರಾಷ್ಟ್ರೀಯ ಆರೋಗ್ಯ ರಕ್ಷಣೆ ಆಂದೋಲನವಾದ ಆಯುಷ್ಮಾನ್ ಭಾರತ್‍ನ್ನು ಚಾಲನೆಗೊಳಿಸಿದ್ದೇವೆ. 100 ದಶಲಕ್ಷಕ್ಕೂ ಹೆಚ್ಚು ಬಡ ಹಾಗೂ ದುರ್ಬಲ ಕುಟುಂಬಗಳಿಗೆ ವಾರ್ಷಿಕ 7,000 ಡಾಲರ್ ಮೊತ್ತದ ಸೌಲಭ್ಯಗಳನ್ನು ಈ ಮೂಲಕ ನೀಡಲಾಗುತ್ತಿದೆ. ಇದರಿಂದ ಆರೋಗ್ಯ ರಕ್ಷಣೆ ವ್ಯವಸ್ಥೆ ವಿಸ್ತರಣೆಯಾಗಲಿದ್ದು, ಭಾರಿ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಆಗಲಿದೆ. ಉತ್ತಮ ಗುಣಮಟ್ಟದ ಔಷಧಗಳು, ಬಳಕೆ ವಸ್ತುಗಳು ಹಾಗೂ ಇನ್ನಿತರ ವೈದ್ಯಕೀಯ ತಂತ್ರಜ್ಞಾನದ ಉಪಕರಣಗಳ ಉತ್ಪಾದನೆಯನ್ನು ಇದು ಉತ್ತೇಜಿಸಲಿದೆ. ಕರೆ ಕೇಂದ್ರಗಳು, ಸಂಶೋಧನೆ ಮತ್ತು ಮೌಲ್ಯಮಾಪನ ಹಾಗೂ ಐಇಸಿ ಚಟುವಟಿಕೆಗಳು ಸೇರಿದಂತೆ ಇನ್ನಿತರ ಉದ್ಯೋಗಗಳು ಸೃಷ್ಟಿಯಾಗ ಲಿವೆ. ಇಡೀ ಆರೋಗ್ಯ ರಕ್ಷಣೆ ಉದ್ಯಮವು ಗರಿಗಟ್ಟಿಕೊಳ್ಳಲಿದೆ.

ಇಷ್ಟಲ್ಲದೆ, ಸರ್ಕಾರವು ಆರೋಗ್ಯ ರಕ್ಷಣೆಯನ್ನು ಖಾತ್ರಿಗೊಳಿಸಿರುವುದರಿಂದ ಕುಟುಂಬಗಳಿಗೆ ಹಣ ಉಳಿಯಲಿದ್ದು, ಈ ಮೊತ್ತವನ್ನು ಇತರ ಅಗತ್ಯಗಳ ಪೂರೈಕೆಗೆ ಹಾಗೂ ಹೂಡಿಕೆಗೆ ಬಳಸಬಹುದು. ಬಡ ಕುಟುಂಬಗಳಲ್ಲಿ ಖರ್ಚು ಮಾಡಲು ಹಣ ಇರುವುದರಿಂದ, ಬೇಡಿಕೆ ಹೆಚ್ಚಳವಾಗಲಿದೆ. ಇಲ್ಲಿ ಹೂಡಿಕೆದಾರರಿಗೆ ಉತ್ತಮ ಅವಕಾಶವಿದೆ ಎನ್ನುವುದ ನನ್ನ ಅಭಿಪ್ರಾಯ.

ಸ್ನೇಹಿತರೇ,

ಭಾರತದ ಆರ್ಥಿಕ ಪುನರುತ್ಥಾನದ ಕಥನವು ಏಷ್ಯಾದ ಇತರ ದೇಶಗಳ ಆರ್ಥಿಕ ಪ್ರಗತಿಯ ಪುನರುಜ್ಜೀವನದಲ್ಲೂ ಪ್ರತಿಫಲಿಸುತ್ತಿದೆ. ಈಗ ಈ ಖಂಡವು ಜಾಗತಿಕ ಆರ್ಥಿಕ ಚಟುವಟಿಕೆಗಳ ಕೇಂದ್ರವಾಗಿ ಪರಿಣಮಿಸಿದೆ. ಜಗತ್ತಿನ ಆರ್ಥಿಕ ಬೆಳವಣಿಗೆಯ ಪ್ರಮುಖ ಚಾಲನಾ ಎಂಜಿನ್ ಆಗಿದೆ. ವಾಸ್ತವವೆಂದರೆ, ನಾವೆಲ್ಲರೂ “ಏಷಿಯನ್ ದಶಕ’ ಎಂದು ಕೆಲವರು ಕರೆಯುವ ಕಾಲದಲ್ಲಿ ಬದುಕುತ್ತಿದ್ದೇವೆ.

“ನೂತನ ಭಾರತ’ ತಲೆ ಎತ್ತುತ್ತಿದೆ. ಈ ಭಾರತವು ಎಲ್ಲರಿಗೂ ಆರ್ಥಿಕ ಅವಕಾಶಗಳು, ಜ್ಞಾನ ಆರ್ಥಿಕತೆ, ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ ಮತ್ತು ಭವಿಷ್ಯದ, ಪುಟಿದೇಳುವ ಹಾಗೂ ಡಿಜಿಟಲ್ ಮೂಲಸೌಲಭ್ಯವನ್ನು ಎಲ್ಲರಿಗೂ ಒದಗಿಸಿಕೊಡುವ ಆಧಾರ ಸ್ತಂಭಗಳ ಮೇಲೆ ನಿಂತಿದೆ. ಅಭಿವೃದ್ಧಿಯಲ್ಲಿ ನಮ್ಮ ಜತೆ ಕೈ ಜೋಡಿಸಿರುವ ಏಐಐಬಿ ಸೇರಿದಂತೆ ಎಲ್ಲ ಪಾಲುದಾರರು ಮುಂದೆಯೂ ನಮ್ಮೊಡನೆ ಇರುತ್ತಾರೆ ಎಂಬ ನಂಬಿಕೆ ನನಗೆ ಇದೆ.

ಈ ಒಕ್ಕೂಟದ ದೇಶಗಳ ನಡುವಿನ ಪರಸ್ಪರ ಕಾರ್ಯ ಚಟುವಟಿಕೆಗಳು ಫಲಪ್ರದವಾಗಲಿದೆ ಮತ್ತು ಎಲ್ಲರಿಗೂ ಸಮೃದ್ಧಿಯನ್ನು ತರುತ್ತದೆ ಎಂದು ಆಶಿಸುತ್ತೇನೆ.

ಧನ್ಯವಾದಗಳು.