Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಷ್ಯಾ ಪ್ಯಾರಾ ಗೇಮ್ಸ್-2022ರ ಕ್ಲಬ್ ಥ್ರೋ – ಎಫ್ 51 ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಅಮಿತ್ ಸರೋಹಾ;  ಪ್ರಧಾನ ಮಂತ್ರಿ ಸಂಭ್ರಮ


ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯಾ ಪ್ಯಾರಾ ಗೇಮ್ಸ್-2022ರ ಕ್ಲಬ್ ಥ್ರೋ – ಎಫ್ 51 ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಅಮಿತ್ ಸರೋಹಾ ಅವರನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು;

“ಏಷ್ಯನ್ ಪ್ಯಾರಾ ಗೇಮ್ಸ್‌-2022ರ ಕ್ಲಬ್ ಥ್ರೋ(ಎಫ್51) ಕ್ರೀಡಾಕೂಟದಲ್ಲಿ ಮನ ತಟ್ಟುವ ಕಂಚಿನ ಪದಕ ಗೆದ್ದ ಅಮಿತ್ ಸರೋಹಾ ಅವರಿಗೆ ಅಭಿನಂದನೆಗಳು. ಅವರ ಸಮರ್ಪಣೆ ಮತ್ತು ಅವಿರತ ಶ್ರಮ ರಾಷ್ಟ್ರಕ್ಕೆ ಅಪಾರ ಹೆಮ್ಮೆ ತಂದಿದೆ. ಅವರು ತಮ್ಮ ಅಸಾಧಾರಣ ಕೌಶಲ್ಯ ಮತ್ತು ಚೈತನ್ಯದಿಂದ ಅನೇಕ ಕ್ರೀಡಾಪಟುಗಳನ್ನು ಪ್ರೇರೇಪಿಸುವುದನ್ನು ಮುಂದುವರಿಸಲಿ” ಎಂದು ಶುಭ ಕೋರಿದ್ದಾರೆ.