ಚೀನಾದ ಹ್ಯಾಂಗ್ ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್ 2022ರಲ್ಲಿ ಟೇಬಲ್ ಟೆನಿಸ್ ಪುರುಷರ ಸಿಂಗಲ್ಸ್ – ಕ್ಲಾಸ್ 1 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಸಂದೀಪ್ ಡಾಂಗಿ ಅವರ ಗೆಲುವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂಭ್ರಮದಿಂದ ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿಯವರು X ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ:
“ಟೇಬಲ್ ಟೆನಿಸ್ ಪುರುಷರ ಸಿಂಗಲ್ಸ್ – ಕ್ಲಾಸ್ 1 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಸಂದೀಪ್ ಡಾಂಗಿ ಅವರಿಗೆ ಅಭಿನಂದನೆಗಳು. ಅವರ ಅಸಾಧಾರಣ ಕೌಶಲ್ಯ ಮತ್ತು ಸಮರ್ಪಣಾ ಮನೋಭಾವವು ನಮ್ಮ ರಾಷ್ಟ್ರಕ್ಕೆ ಗೌರವವನ್ನು ತಂದಿದೆ. ಈ ಯಶಸ್ಸಿಗೆ ಭಾರತವು ಸಂತೋಷಪಡುತ್ತದೆ.” ಎಂದವರು ಹೇಳಿದ್ದಾರೆ.
***
Well done Sandeep Dangi for securing the Bronze Medal in Table Tennis Men's Singles - Class 1 event. His exceptional skill and dedication have brought honor to our nation. India rejoices in this success. pic.twitter.com/UDb7iaL3AT
— Narendra Modi (@narendramodi) October 25, 2023