Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಚೆಸ್ ನಲ್ಲಿ ಚಿನ್ನ ಗೆದ್ದ ದರ್ಪಣ್ ಇನಾನಿ, ಸೌಂದರ್ಯ ಪ್ರಧಾನ್, ಅಶ್ವಿನ್ ಗೆ ಪ್ರಧಾನಿ ಅಭಿನಂದನೆ


ಹಾಂಗ್ ಝೌ ಏಷ್ಯನ್ ಪ್ಯಾರಾ ಗೇಮ್ಸ್ ನ ಪುರುಷರ ಚೆಸ್ ನಲ್ಲಿ ಇಂದು ಚಿನ್ನದ ಪದಕ ಗೆದ್ದ ದರ್ಪಣ್ ಇನಾನಿ, ಸೌಂದರ್ಯ ಪ್ರಧಾನ್ ಮತ್ತು ಅಶ್ವಿನ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ

ಅವರ ಕೌಶಲ್ಯ ಮತ್ತು ಸಮರ್ಪಣೆಯ ಬಗ್ಗೆ ಹೆಮ್ಮೆ ಇದೆ ಮತ್ತು ಭವಿಷ್ಯಕ್ಕಾಗಿ ಅವರಿಗೆ ಶುಭ ಹಾರೈಸುತ್ತೇನೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿಯವರು ಈ ಬಗ್ಗೆ X ನಲ್ಲಿ ಪೋಸ್ಟ್ ಮಾಡಿದ್ದಾರೆ:

“ಪುರುಷರ ಚೆಸ್ ಬಿ 1 ವಿಭಾಗದಲ್ಲಿ (ತಂಡ) ಚಿನ್ನದ ಪದಕ ಗೆದ್ದ ದರ್ಪಣ್ ಇನಾನಿ, ಸೌಂದರ್ಯ ಪ್ರಧಾನ್ ಮತ್ತು ಅಶ್ವಿನ್ ಅವರಿಗೆ ಅಭಿನಂದನೆಗಳು.

ಅವರ ಕೌಶಲ್ಯ ಮತ್ತು ಸಮರ್ಪಣೆಯ ಬಗ್ಗೆ ಹೆಮ್ಮೆ ಇದೆ. ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು ” ಎಂದಿದ್ದಾರೆ.

 

****