ಚೀನಾದ ಹ್ಯಾಂಗ್ ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್2022ರ ಮಿಶ್ರ 50 ಮೀಟರ್ ರೈಫಲ್ಸ್ ಪ್ರೋನ್ ಎಸ್‌ಎಚ್ -1 ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಕ್ಕಾಗಿ ಸಿದ್ಧಾರ್ಥ ಬಾಬು ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ಹಾಕಿದ್ದಾರೆ;
“ಮಿಕ್ಸ್ಡ್ 50 ಮೀ ರೈಫಲ್ಸ್ ಪ್ರೋನ್ ಎಸ್‌ಎಚ್ -1 ಸ್ಪರ್ಧೆಯಲ್ಲಿ ಬೆರಗುಗೊಳಿಸುವ ಪ್ರದರ್ಶನ ನೀಡಿದ್ದಕ್ಕಾಗಿ ನಮ್ಮ ಪ್ಯಾರಾ ಶೂಟರ್ ಕ್ರೀಡಾಳು ಸಿದ್ಧಾರ್ಥ ಬಾಬು ಅವರಿಗೆ ಅಭಿನಂದನೆಗಳು!
ಈ ಚಿನ್ನದ ಪದಕವು ಅವರ ನಿಖರತೆ, ಗಮನ, ಅಸಾಧಾರಣ ಪ್ರತಿಭೆ ಮತ್ತು ಪಟ್ಟುಬಿಡದ ಮನೋಭಾವಕ್ಕೆ ಸಾಕ್ಷಿಯಾಗಿದೆ. ಭಾರತವು ಉತ್ಸಾಹಭರಿತವಾಗಿದೆ. ”
***
Congratulations to our Para Shooter @sid6666 for the dazzling performance in Mixed 50m Rifles Prone SH-1 event!
— Narendra Modi (@narendramodi) October 26, 2023
This Gold is a testament to his precision, focus, exceptional talent and relentless spirit. India is elated. pic.twitter.com/VgXil7bY08