Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಷ್ಯನ್ ಪ್ಯಾರಾ ಗೇಮ್ಸ್ 2022 ರ ಮಹಿಳೆಯರ ಪ್ಯಾರಾ ಪವರ್‌ ಲಿಫ್ಟಿಂಗ್ 61 ಕೆಜಿ ಸ್ಪರ್ಧೆಯಲ್ಲಿ ಜೈನಾಬ್ ಖಾತೂನ್ ಅವರು ಬೆಳ್ಳಿ ಪದಕ ಗೆದ್ದಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದ ಪ್ರಧಾನಮಂತ್ರಿ


ಚೀನಾದ ಹ್ಯಾಂಗ್‌ ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್ 2022 ರ ಮಹಿಳೆಯರ ಪ್ಯಾರಾ ಪವರ್‌ ಲಿಫ್ಟಿಂಗ್ 61 ಕೆಜಿ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಜೈನಾಬ್ ಖಾತೂನ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ಹಂಚಿಕೊಂಡಿದ್ದಾರೆ:

“ಜೈನಾಬ್ ಖಾತೂನ್ ಅವರ ಅದ್ಭುತ ಸಾಧನೆಗಾಗಿ ಅಭಿನಂದನೆಗಳು.  ಇದು ಮಹಿಳಾ ಪ್ಯಾರಾ ಪವರ್‌ ಲಿಫ್ಟಿಂಗ್‌ನಲ್ಲಿ 61 ಕೆಜಿ ತೂಕದ ಸ್ಪರ್ಧೆಯ ಮಹತ್ತರ ಬೆಳ್ಳಿ ಪದಕವಾಗಿದೆ.  ಝೈನಾಬ್ ಅವರ ಅಪ್ರತಿಮ ಸಂಕಲ್ಪ ಮತ್ತು ಬದ್ಧತೆ ಗಮನಾರ್ಹವಾಗಿದೆ. ಅವರ ಮುಂಬರುವ ಪ್ರಯತ್ನಗಳಿಗೆ ಶುಭಾಶಯಗಳು.”

 

*****