Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಬೆಳ್ಳಿ ಗೆದ್ದ ಅನಿತಾ, ನಾರಾಯಣ ಕೊಂಗನಪಲ್ಲಿ ಅವರಿಗೆ ಪ್ರಧಾನ ಮಂತ್ರಿ ಅಭಿನಂದನೆ


ಹಾಂಗ್ ಝೌ ಏಷ್ಯನ್ ಪ್ಯಾರಾ ಗೇಮ್ಸ್ ನ ರೋಯಿಂಗ್ (ಹುಟ್ಟು ಹಾಕಿ ನಡೆಸುವ ದೋಣಿ ಸ್ಪರ್ಧೆ)  ನಲ್ಲಿ ಇಂದು ಬೆಳ್ಳಿ ಪದಕ ಗೆದ್ದ ಅನಿತಾ ಮತ್ತು ನಾರಾಯಣ ಕೊಂಗನಪಲ್ಲಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಅವರ ತಂಡ ಕೆಲಸ ಮತ್ತು ಸಮರ್ಪಣೆಯನ್ನು ಶ್ಲಾಘಿಸಿದ ಪ್ರಧಾನ ಮಂತ್ರಿ, ಅವರ ಸಾಧನೆ ರಾಷ್ಟ್ರಕ್ಕೆ  ಹೆಮ್ಮೆ ತಂದಿದೆ  ಎಂದು ಹೇಳಿದ್ದಾರೆ.

ಪ್ರಧಾನಮಂತ್ರಿಯವರು ಈ ಬಗ್ಗೆ X ನಲ್ಲಿ ಪೋಸ್ಟ್ ಮಾಡಿದ್ದಾರೆ:

“ರೋಯಿಂಗ್ – ಪಿಆರ್ 3 ಮಿಶ್ರ ಡಬಲ್ ಸ್ಕಲ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಅನಿತಾ ಮತ್ತು ನಾರಾಯಣ ಕೊಂಗನಪಲ್ಲಿ ಅವರಿಗೆ ಅಭಿನಂದನೆಗಳು.

ಅವರ ತಂಡದ ಕೆಲಸ ಮತ್ತು ಸಮರ್ಪಣಾ ಭಾವ  ಅದ್ಭುತವಾಗಿ ಹೊಳೆದು ಕಾಣುತ್ತಿದೆ ! ಈ ಸಾಧನೆಯು ರಾಷ್ಟ್ರಕ್ಕೆ ಹೆಮ್ಮೆಯನ್ನು ತಂದಿದೆ” ಎಂದವರು ಹೇಳಿದ್ದಾರೆ.

 

****