ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಜಾವೆಲಿನ್ ಥ್ರೋ F46 ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಸುಂದರ್ ಸಿಂಗ್ ಗುರ್ಜರ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು.
ಗುರ್ಜರ್ ಅವರ ಪ್ರದರ್ಶನವು ಅದ್ಭುತವಾಗಿದೆ. ಭವಿಷ್ಯದ ಪ್ರಯತ್ನಗಳಿಗೆ ಶುಭ ಹಾರೈಸಿದರು.
ಸಾಮಾಜಿಕ ಜಾಲತಾಣ X ನಲ್ಲಿ ಪ್ರಧಾನ ಮಂತ್ರಿ ಸಂದೇಶ ನೀಡಿದ್ದಾರೆ.
“ಜಾವೆಲಿನ್ ಥ್ರೋ F46 ಈವೆಂಟ್ನಲ್ಲಿ ಗಮನಾರ್ಹವಾದ ಚಿನ್ನದ ಪದಕಕ್ಕಾಗಿ ಸುಂದರ್ ಸಿಂಗ್ ಗುರ್ಜಾರ್ ಅವರಿಗೆ ಅಭಿನಂದನೆಗಳು. ಇದು ಅದ್ಭುತ ಸಾಧನೆಯಾಗಿದೆ. ಅವರ ಮುಂದಿನ ಪ್ರಯತ್ನಗಳಿಗೆ ನನ್ನ ಶುಭಾಶಯಗಳು” ಎಂದು ಪ್ರಧಾನಮಂತ್ರಿಗಳು ಸಂದೇಶ ನೀಡಿದ್ದಾರೆ.
***
Congratulations to @SundarSGurjar on the remarkable Gold Medal in the Javelin Throw F46 event. This is an incredible accomplishment. My best wishes for his endeavours ahead. pic.twitter.com/FXTZu4kcbg
— Narendra Modi (@narendramodi) October 25, 2023