Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಮಹಿಳೆಯರ 400 ಮೀ-ಟಿ20 ಸ್ಪರ್ಧೆಯಲ್ಲಿ ಚಿನ್ನ ಗೆದ್ದ ದೀಪ್ತಿ ಜೀವಂಜಿ ಅವರಿಗೆ ಪ್ರಧಾನಿ ಮೋದಿ ಅಭಿನಂದನೆ 


ಇಂದು ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಮಹಿಳೆಯರ 400 ಮೀ-ಟಿ20 ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಕ್ವಾರ್ಟರ್ ಮೈಲರ್ ದೀಪ್ತಿ ಜೀವಂಜಿ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. 

ದೀಪ್ತಿ ಅವರ ಕಾರ್ಯಕ್ಷಮತೆಯನ್ನು ಪ್ರಜ್ವಲಕಾರಿಯಾದದ್ದು ಎಂದು ಬಣ್ಣಿಸಿರುವ ಪ್ರಧಾನ ಮಂತ್ರಿಗಳು, ಮೈದಾನದಲ್ಲಿ ಜೀವಂಜಿ  ಅವರ ಉತ್ಸಾಹಕ್ಕೆ ಸಾಟಿಯಿರಲಿಲ್ಲ ಎಂದು ಹೇಳಿದ್ದಾರೆ. 
ಟ್ವೀಟ್ ಮೂಲಕ ಪ್ರಶಂಸಿಸಿರುವ ಪ್ರಧಾನ ಮಂತ್ರಿಗಳು,

”ದೀಪ್ತಿ ಜೀವಂಜಿಯವರ ಅದ್ಭುತ ಪ್ರಜ್ವಲಕಾರಿ ಪ್ರದರ್ಶನ! ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಮಹಿಳೆಯರ 400 ಮೀ-ಟಿ 20 ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ದೀಪ್ತಿಗೆ ಅಭಿನಂದನೆಗಳು. ಮೈದಾನದಲ್ಲಿ ಅವರ ಆಟದ ಸ್ಫೂರ್ತಿಗೆ ಸರಿಸಾಟಿಯಿಲ್ಲ, ಪ್ರೇಕ್ಷಕರನ್ನು ವಿಸ್ಮಯಗೊಳಿಸಿತು. ನಮ್ಮೆಲ್ಲರನ್ನು ಹೆಮ್ಮೆಪಡುವಂತೆ ಮಾಡಿದ ದೀಪ್ತಿಗೆ ಅಭಿನಂದನೆಗಳು” ಎಂದು ಬರೆದಿದ್ದಾರೆ.