Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಷ್ಯನ್ ಗೇಮ್ಸ್ 2022 ರಲ್ಲಿ ಚಿನ್ನದ ಪದಕ ಗಳಿಸಿದ ಪುರುಷರ ಸ್ಕ್ವಾಷ್ ತಂಡವನ್ನು  ಪ್ರಧಾನಮಂತ್ರಿಯವರು ಅಭಿನಂದಿಸಿದರು


ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್‌ 2022ರಲ್ಲಿ ಚಿನ್ನದ ಪದಕ ಗೆದ್ದ ಸೌರವ್ ಘೋಸಲ್, ಅಭಯ್ ಸಿಂಗ್, ಹರಿಂದರ್ ಸಂಧು ಮತ್ತು ಮಹೇಶ್ ಮಂಗೋಕರ್ ಅವರ  ಪುರುಷರ ಸ್ಕ್ವಾಷ್ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಹೇಳಿದ್ದಾರೆ;

“ಏಷ್ಯನ್ ಗೇಮ್ಸ್‌ನಲ್ಲಿ ಅದ್ಭುತ ಗೆಲುವು ಸಾಧಿಸಿದ ಮತ್ತು ಪ್ರತಿಷ್ಟಿತ ಚಿನ್ನದ ಪದಕವನ್ನು ಗೆದ್ದು ತಂದ ಪ್ರತಿಭಾವಂತ ಸೌರವ್ ಘೋಸಲ್, ಅಭಯ್ ಸಿಂಗ್, ಹರಿಂದರ್ ಸಂಧು ಮತ್ತು ಮಹೇಶ್ ಮಂಗೋಕರ್ ಅವರ ಪುರುಷರ ಸ್ಕ್ವಾಷ್ ತಂಡಕ್ಕೆ ಅಭಿನಂದನೆಗಳು. 

ಈ ಪ್ರಯತ್ನವು ಹಲವಾರು ಯುವ ಕ್ರೀಡಾಪಟುಗಳಿಗೆ ಕ್ರೀಡೆಯನ್ನು ಮುಂದುವರಿಸಲು ಮತ್ತು ಅದರಲ್ಲಿ ಉತ್ತಮ ಸಾಧನೆ ಮಾಡಲು ಪ್ರೇರೇಪಿಸುತ್ತದೆ. ಭಾರತ ಸಂತಸಗೊಂಡಿದೆ!

***