Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ಏಷ್ಯನ್ ಗೇಮ್ಸ್ ಪುರುಷರ ಕಬ್ಬಡಿ ತಂಡ ಚಿನ್ನದ ಪದಕ ಗೆದ್ದಿರುವುದು ಶ್ಲಾಘನೀಯ ಎಂದ ಪ್ರಧಾನಮಂತ್ರಿ


ಚೀನಾದ ಹ್ಯಾಂಗ್ಝೌ ನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಪುರುಷರ ಕಬ್ಬಡಿ ತಂಡದ ಸಾಧನೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ X ನಲ್ಲಿ ಪ್ರಧಾನಮಂತ್ರಿ ಸಂದೇಶ ನೀಡಿದ್ದಾರೆ.

“ಒಂದು ಅದ್ಭುತ ಕ್ಷಣ. ಇದು ಸಂಭ್ರಮದ ಸಮಯ! ನಮ್ಮ ಕಬ್ಬಡಿ ಪುರುಷರ ತಂಡ ಅಜೇಯ! ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಕ್ಕಾಗಿ ಅಭಿನಂದನೆಗಳು. ಕ್ರೀಡಾಪಟುಗಳು ಅವಿರತ ಸಂಕಲ್ಪ ಮತ್ತು ತಂಡದ ಸ್ಪೂರ್ತಿ ಭಾರತಕ್ಕೆ ಕೀರ್ತಿ ತಂದಿದೆ” ಎಂದು ಪ್ರಧಾನಮಂತ್ರಿ ಸಂದೇಶ ನೀಡಿದ್ದಾರೆ.

 

***