Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಷ್ಯನ್ ಗೇಮ್ಸ್ ನ ಮಹಿಳಾ ಟೇಬಲ್ ಟೆನ್ನಿಸ್ ಡಬಲ್ಸ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಐಹಿಕಾ ಮುಖರ್ಜಿ ಮತ್ತು ಸುತೀರ್ಥ ಮುಖರ್ಜಿ ಅವರಿಗೆ  ಪ್ರಧಾನ ಮಂತ್ರಿ  ಅಭಿನಂದನೆ


ಏಷ್ಯನ್ ಗೇಮ್ಸ್ ನ ಮಹಿಳಾ ಟೇಬಲ್ ಟೆನಿಸ್ ಡಬಲ್ಸ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಐಹಿಕಾ ಮುಖರ್ಜಿ ಮತ್ತು ಸುತೀರ್ಥ ಮುಖರ್ಜಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಭಿನಂದಿಸಿದ್ದಾರೆ. ಏಶ್ಯನ್ ಗೇಮ್ಸ್ ನಲ್ಲಿ ಮಹಿಳಾ ಡಬಲ್ಸ್ ವಿಭಾಗದಲ್ಲಿ ಭಾರತಕ್ಕೆ ಲಭಿಸಿದ ಮೊದಲ ಪದಕ ಇದಾಗಿದೆ.

ಈ ಬಗ್ಗೆ ಪ್ರಧಾನಮಂತ್ರಿಯವರು X ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

“ಕಂಚಿನ ಪದಕ ಗೆದ್ದ ಐಹಿಕಾ ಮುಖರ್ಜಿ ಮತ್ತು ಸುತೀರ್ಥ ಮುಖರ್ಜಿ ಅವರಿಗೆ ಅಭಿನಂದನೆಗಳು. ಇದು ವಿಶೇಷ ಗೆಲುವು ಏಕೆಂದರೆ ಇದು ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳಾ ಡಬಲ್ಸ್ ಸ್ಪರ್ಧೆಯಲ್ಲಿ ಭಾರತದ ಮೊದಲ ಪದಕವಾಗಿದೆ.

ಅವರ ಸಮರ್ಪಣೆ, ಕೌಶಲ್ಯ ಮತ್ತು ತಂಡ ಕೆಲಸ ಅನುಕರಣೀಯವಾಗಿದೆ ”

 

***