ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿರುವ ಕಬಡ್ಡಿ ಮಹಿಳಾ ತಂಡಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಈ ಬಗ್ಗೆ ʼಎಕ್ಸ್ʼ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿರುವ ಅವರು,
“ಏಷ್ಯನ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಇದೊಂದು ಐತಿಹಾಸಿಕ ಕ್ಷಣ. ನಮ್ಮ ಕಬಡ್ಡಿ ಮಹಿಳಾ ತಂಡವು ಚಿನ್ನದ ಪದಕವನ್ನು ತನ್ನ ಮುಡಿಗೇರಿಸಿಕೊಂಡಿದೆ. ಈ ವಿಜಯವು ನಮ್ಮ ಮಹಿಳಾ ಅಥ್ಲೀಟ್‌ಗಳಲ್ಲಿನ ಅದಮ್ಯ ಸ್ಫೂರ್ತಿ, ಪ್ರತಿಭೆಯ ಧ್ಯೋತಕವಾಗಿದೆ. ಈ ಯಶಸ್ಸು ಭಾರತದ ಹೆಮ್ಮೆಯನ್ನು ವೃದ್ಧಿಸಿದೆ. ತಂಡಕ್ಕೆ ನನ್ನ ಅಭಿನಂದನೆಗಳು. ಅವರ ಮುಂದಿನ ಯಶಸ್ಸುಗಳಿಗೂ ನನ್ನ ಶುಭ ಹಾರೈಕೆಗಳು,ʼʼ ಎಂದು ಶುಭ ಕೋರಿದ್ದಾರೆ.
***
It is a historic moment for India at the Asian Games. Our Kabaddi Women's team has clinched the Gold! This victory is a testament to the indomitable spirit of our women athletes. India is proud of this success. Congrats to the team. My best wishes for their future endeavours. pic.twitter.com/amfPaGmiHt
— Narendra Modi (@narendramodi) October 7, 2023