Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಷ್ಯನ್ ಕ್ರೀಡಾಕೂಟ 2022 ರಲ್ಲಿ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡದಲ್ಲಿ ರಜತ ಪದಕ ಗೆದ್ದ ಸಂಭ್ರಮವನ್ನು ಆಚರಿಸಿದ ಪ್ರಧಾನಮಂತ್ರಿಯವರು 


ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟ 2022 ರಲ್ಲಿ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ರಜತ ಪದಕ ಗೆದ್ದಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸರಬ್ಜೋತ್ ಸಿಂಗ್ ಮತ್ತು ದಿವ್ಯಾ ಟಿಎಸ್ ಅವರನ್ನು ಅಭಿನಂದಿಸಿದ್ದಾರೆ.

ಪ್ರಧಾನಮಂತ್ರಿಯವರು X ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

“ಏಷ್ಯನ್ ಕ್ರೀಡಾಕೂಟ 2022 ರಲ್ಲಿ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ರಜತ ಪದಕ ಗೆದ್ದಿದ್ದಕ್ಕಾಗಿ ಸರಬ್ಜೋತ್ ಸಿಂಗ್ ಮತ್ತು ದಿವ್ಯಾ ಟಿಎಸ್ ಅವರ ಬಗ್ಗೆ ಬಹಳ ಹೆಮ್ಮೆಯೆನಿಸುತ್ತಿದೆ. ಅವರ ಸಾಧನೆಗಾಗಿ ಅವರನ್ನು ನಾನು ಅಭಿನಂದಿಸುತ್ತೇನೆ. ಅವರ ಪ್ರತಿಭೆ, ಸಮರ್ಪಣೆ ಮತ್ತು ಟೀಂ ವರ್ಕ್ ಶ್ಲಾಘನೀಯವಾದದ್ದು ಮತ್ತು ಭಾರತದ ಯುವಕರಿಗೆ ಪ್ರೇರಣಾದಾಯಕವಾಗಿದೆ.” 

***