Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಷ್ಯನ್ ಕ್ರೀಡಾಕೂಟ ಮಹಿಳೆಯರ 5,000 ಮೀಟರ್ ಓಟದಲ್ಲಿ ಚಿನ್ನ ಗೆದ್ದ ಅಥ್ಲೀಟ್ ಪಾರುಲ್ ಚೌಧರಿ ಅವರಿಗೆ ಪ್ರಧಾನಿ ಅಭಿನಂದನೆ


ಏಷ್ಯನ್ ಕ್ರೀಡಾಕೂಟದ ಮಹಿಳೆಯರ 5,000 ಮೀಟರ್ ಓಟ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಪಾರುಲ್ ಚೌಧರಿ ಅವರನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದರು.

ಚೌಧರಿ ಅವರ ಅದ್ಭುತ ಪ್ರದರ್ಶನವನ್ನು ಪ್ರಧಾನಿ ಶ್ಲಾಘಿಸಿದರು, ಇದು ನಿಜವಾಗಿಯೂ ವಿಸ್ಮಯಕಾರಿ ಎಂದು ಬಣ್ಣಿಸಿದ ಅವರು, ಮತ್ತು ಭವಿಷ್ಯದಲ್ಲಿ ಅವರಿಗೆ ಎಲ್ಲಾ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ:

“ಮಹಿಳೆಯರ 5,000 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದಕ್ಕಾಗಿ ಪಾರುಲ್ ಚೌಧರಿ ಬಗ್ಗೆ ಹೆಮ್ಮೆಯಿದೆ. ಅವರದು ನಿಜಕ್ಕೂ ವಿಸ್ಮಯ ಹುಟ್ಟಿಸುವ ಪ್ರದರ್ಶನ. ಅವರು ಮತ್ತಷ್ಟು ಎತ್ತರಕ್ಕೆ ಏರುತ್ತಿರಲಿ ಮತ್ತು ಯಶಸ್ಸಿನತ್ತ ಮುನ್ನುಗ್ಗಲಿ” ಎಂದು ಶುಭ ಕೋರಿದರು.

 

***