Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಷ್ಯನ್ ಕ್ರೀಡಾಕೂಟದಲ್ಲಿ 71 ಪದಕಗಳನ್ನು ಗೆದ್ದ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಮಂತ್ರಿ 


71 ಪದಕಗಳನ್ನು ಗೆದ್ದ ಕ್ರೀಡಾಪಟುಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು. ಇದು ಏಷ್ಯನ್ ಕ್ರೀಡಾಕೂಟದಲ್ಲಿ ಈ ತನಕ ಭಾರತ ಗಳಿಸಿದ ಅತ್ಯುತ್ತಮ ಪದಕಗಳ ಸಂಖ್ಯೆ ಎಂದು ಅವರು ಹೇಳಿದರು.

ಪದಕಗಳ ಈ ಮೊತ್ತವು ಕ್ರೀಡಾಪಟುಗಳ ಅಪ್ರತಿಮ ಸಮರ್ಪಣಾ ಮನೋಭಾವ, ಶ್ರದ್ಧೆ ಮತ್ತು ಕ್ರೀಡಾ ಆಸಕ್ತಿಗಳಿಗೆ ಸಾಕ್ಷಿಯಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.

ಪ್ರಧಾನಮಂತ್ರಿಯವರು ತಮ್ಮ ಎಕ್ಸ್  ಖಾತೆಯಲ್ಲಿ ಈ ರೀತಿ ಹೇಳಿದ್ದಾರೆ:

“ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಹಿಂದೆಂದಿಗಿಂತಲೂ ಪ್ರಕಾಶಮಾನವಾಗಿ ಮಿಂಚಿದೆ!

71 ಪದಕಗಳೊಂದಿಗೆ, ನಾವು ನಮ್ಮ ಅತ್ಯುತ್ತಮ ಪದಕಗಳ ಸಂಖ್ಯೆಯನ್ನು ಸಂಭ್ರಮಿಸುತ್ತಿದ್ದೇವೆ, ಇದು ನಮ್ಮ ಕ್ರೀಡಾಪಟುಗಳ ಅಪ್ರತಿಮ ಸಮರ್ಪಣೆ, ಶ್ರದ್ಧೆ ಮತ್ತು ಕ್ರೀಡಾಸಕ್ತಿಯ ಮನೋಭಾವಕ್ಕೆ ಸಾಕ್ಷಿಯಾಗಿದೆ.

ಪ್ರತಿಯೊಂದು ಪದಕವು ಕಠಿಣ ಪರಿಶ್ರಮ ಮತ್ತು ಉತ್ಸಾಹದಾಯಕ ಸಾಹಸಮಯ ಜೀವನ ಪ್ರಯಾಣವನ್ನು ಎತ್ತಿ ತೋರಿಸುತ್ತದೆ.

ಇಡೀ ರಾಷ್ಟ್ರಕ್ಕೆ ಹೆಮ್ಮೆಯ ಕ್ಷಣ. ನಮ್ಮ ಕ್ರೀಡಾಪಟುಗಳಿಗೆ ಅಭಿನಂದನೆಗಳು.”

 

***