Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಮಹಿಳಾ ಬಿಲ್ಲುಗಾರರ ಸಾಧನೆಯನ್ನು ಕೊಂಡಾಡಿದ ಪ್ರಧಾನಮಂತ್ರಿ


ಈ ಸಾಧನೆಗಾಗಿ ಅಂಕಿತಾ ಭಕತ್, ಸಿಮ್ರಂಜೀತ್ ಮತ್ತು ಭಜನ್ ಕೌರ್ ಅವರಿಗೆ ಪ್ರಧಾನಿ ಅಭಿನಂದನೆ

ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳಾ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಅಂಕಿತಾ ಭಕತ್, ಸಿಮ್ರಂಜೀತ್ ಮತ್ತು ಭಜನ್ ಕೌರ್ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ X ನಲ್ಲಿ ಪ್ರಧಾನಮಂತ್ರಿ ಸಂದೇಶ ನೀಡಿದ್ದಾರೆ.

“ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕವನ್ನು ಗೆದ್ದ ನಮ್ಮ ಮಹಿಳಾ ಬಿಲ್ಲುಗಾರರ ವಿಜಯೋತ್ಸವದ ಸಾಧನೆಗೆ ಇಡೀ ಭಾರತ ಹೆಮ್ಮೆ ವ್ಯಕ್ತಪಡಿಸುತ್ತಿದೆ. ಅಂಕಿತಾ ಭಕತ್, ಸಿಮ್ರಂಜೀತ್ ಮತ್ತು ಭಜನ್ ಕೌರ್ ಅವರಿಗೆ ಅಭಿನಂದನೆಗಳು. ಅವರ ನಿಖರತೆ, ತಂಡದ ಕೆಲಸ ಮತ್ತು ಸಮರ್ಪಣೆ ಗಮನಾರ್ಹವಾಗಿದೆ” ಎಂದು ಪ್ರಧಾನಮಂತ್ರಿ ಸಂದೇಶ ನೀಡಿದ್ದಾರೆ.

***