ಬಿಲ್ ಗೇಟ್ಸ್ ಅವರು ಏಕತಾ ಪ್ರತಿಮೆಗೆ ಭೇಟಿ ನೀಡಿ ಹಂಚಿಕೊಂಡ ಅನುಭವದ ಕುರಿತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರತಿಕ್ರಿಯಿಸಿದ್ದಾರೆ. ಮುಂಬರುವ ದಿನಗಳಲ್ಲಿ ಜಗತ್ತಿನಾದ್ಯಂತ ಜನರು ಇಲ್ಲಿಗೆ ಭೇಟಿ ನೀಡುವಂತೆ ಶ್ರೀ ಮೋದಿ ಅವರು ಆಹ್ವಾನ ನೀಡಿದ್ದಾರೆ.
ಏಕತಾ ಪ್ರತಿಮೆಗೆ ಭೇಟಿ ನೀಡಿದ ತರುವಾಯ ತಮ್ಮ ಅಭಿಪ್ರಾಯವನ್ನು “ಎಕ್ಸ್” ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಬಿಲ್ ಗೇಟ್ಸ್ ಅವರು “ಏಕತಾ ಪ್ರತಿಮೆಯು ಎಂಜಿನಿಯರಿಂಗ್ ಕ್ಷೇತ್ರದ ಅದ್ಭುತವಾಗಿದ್ದು, ಸರ್ದಾರ್ ಪಟೇಲ್ ಅವರಿಗೆ ಶ್ರೇಷ್ಠ ಗೌರವ ಸಲ್ಲಿಸಿದಂತಾಗಿದೆ. ಜತೆಗೆ ಇಲ್ಲಿನ ಸ್ಥಳೀಯ ಬುಡಕಟ್ಟು ಸಮುದಾಯಗಳಿಗೆ, ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಆರ್ಥಿಕ ಅವಕಾಶವನ್ನು ಸೃಷ್ಟಿಸುತ್ತಿರುವುದನ್ನು ಕಂಡು ಸಂತೋಷವಾಗಿದೆ,ʼʼ ಎಂದು ಹೇಳಿಕೊಂಡಿದ್ದಾರೆ.
ಶ್ರೀ ಬಿಲ್ ಗೇಟ್ಸ್ ಅವರ “ಎಕ್ಸ್” ಪೋಸ್ಟ್ಗೆ ಪ್ರತಿಕ್ರಿಯಿಸಿ ಶ್ರೀ ಮೋದಿ ಅವರು ಸಂದೇಶ ಹಂಚಿಕೊಂಡಿದ್ದು, “
“ಇದನ್ನು ನೋಡಿ ಬಹಳ ಸಂತೋಷವಾಯಿತು! ‘ಏಕತೆಯ ಪ್ರತಿಮೆ’ ವೀಕ್ಷಿಸಿ ನೀವು ಖುಷಿಪಟ್ಟ ಅನುಭವವನ್ನು ಕೇಳಿ ನಮಗೂ ಸಂತಸವಾದೆ. ಮುಂಬರುವ ದಿನಗಳಲ್ಲಿ ಪ್ರಪಂಚದಾದ್ಯಂತದ ಜನರು ಏಕತಾ ಪ್ರತಿಮೆಗೆ ಭೇಟಿ ನೀಡುವಂತೆ ನಾನು ಆಗ್ರಹಪೂರ್ವಕ ಮನವಿ ಮಾಡುತ್ತೇನೆ. @ಬಿಲ್ ಗೇಟ್ಸ್” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
*****
Happy to see this! Glad that you enjoyed your experience at the ‘Statue of Unity.’ I also urge people from all over the world to visit it in the coming times. @BillGates https://t.co/71oImk05RG
— Narendra Modi (@narendramodi) March 2, 2024