ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟವು ಎಲೆಕ್ಟ್ರಾನಿಕ್ಸ್ ಪೂರೈಕೆ ಸರಪಳಿಯಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು 22,919 ಕೋಟಿ ರೂಪಾಯಿಗಳ ಧನಸಹಾಯದೊಂದಿಗೆ ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ತಯಾರಿಕೆ ಯೋಜನೆಗೆ ಅನುಮೋದನೆ ನೀಡಿದೆ.
ಈ ಯೋಜನೆಯು ಎಲೆಕ್ಟ್ರಾನಿಕ್ಸ್ ಬಿಡಿಭಾಗ ತಯಾರಿಕಾ ಪೂರಕ ವ್ಯವಸ್ಥೆಯಲ್ಲಿ ದೊಡ್ಡ ಹೂಡಿಕೆಗಳನ್ನು (ಜಾಗತಿಕ/ದೇಶೀಯ) ಆಕರ್ಷಿಸುವ ಮೂಲಕ, ಸಾಮರ್ಥ್ಯ ಮತ್ತು ದಕ್ಷತೆಯನ್ನು ಅಭಿವೃದ್ಧಿಪಡಿಸಿ ದೇಶೀಯ ಮೌಲ್ಯವರ್ಧನೆ (ಡಿವಿಎ) ಹೆಚ್ಚಿಸುವ ಮತ್ತು ಭಾರತೀಯ ಕಂಪನಿಗಳನ್ನು ಜಾಗತಿಕ ಮೌಲ್ಯ ಸರಪಳಿಗಳೊಂದಿಗೆ (ಜಿವಿಸಿ) ಸಂಯೋಜಿಸುವ ಮೂಲಕ ದೃಢವಾದ ಬಿಡಿಭಾಗ ಪೂರಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.
ಪ್ರಯೋಜನಗಳು:
ಈ ಯೋಜನೆಯು 59,350 ಕೋಟಿ ರೂ. ಹೂಡಿಕೆಯನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ, ಇದರ ಪರಿಣಾಮವಾಗಿ 4,56,500 ಕೋಟಿ ರೂ. ಮೌಲ್ಯದ ಉತ್ಪಾದನೆಯಾಗುತ್ತದೆ ಮತ್ತು 91,600 ಜನರಿಗೆ ಹೆಚ್ಚುವರಿ ನೇರ ಉದ್ಯೋಗ ಮತ್ತು ಅನೇಕ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ.
ಯೋಜನೆಯ ಪ್ರಮುಖ ಲಕ್ಷಣಗಳು:
ಎ |
ಸಬ್-ಅಸೆಂಬ್ಲಿ (ಉಪ-ಜೋಡಣೆ) |
|
1 |
ಡಿಸ್ಪ್ಲೇ ಮಾಡ್ಯೂಲ್ ಉಪ-ಜೋಡಣೆ |
ವಹಿವಾಟು ಆಧಾರಿತ ಪ್ರೋತ್ಸಾಹಧನ |
2 |
ಕ್ಯಾಮೆರಾ ಮಾಡ್ಯೂಲ್ ಉಪ-ಜೋಡಣೆ |
|
ಬಿ |
ಬೇರ್ ಬಿಡಿಭಾಗಗಳು |
|
3 |
ಎಲೆಕ್ಟ್ರಾನಿಕ್ ಅಪ್ಲಿಕೇಶನ್ ಗಳಿಗಾಗಿ ನಾನ್ ಸರ್ಫೇಸ್ ಮೌಂಟ್ ಸಾಧನಗಳ (ಎಸ್ ಎಂ ಡಿ ಯೇತರ) ಪ್ಯಾಸಿವ್ ಬಿಡಿಭಾಗಗಳು |
ವಹಿವಾಟು ಆಧಾರಿತ ಪ್ರೋತ್ಸಾಹಧನ |
4 |
ಎಲೆಕ್ಟ್ರಾನಿಕ್ ಅಪ್ಲಿಕೇಶನ್ ಗಳಿಗಾಗಿ ಎಲೆಕ್ಟ್ರೋ-ಮೆಕ್ಯಾನಿಕಲ್ಸ್ |
|
5 |
ಬಹು-ಪದರ ಮುದ್ರಿತ ಸರ್ಕ್ಯೂಟ್ ಬೋರ್ಡ್ (ಪಿಸಿಬಿ) |
|
6 |
ಡಿಜಿಟಲ್ ಅಪ್ಲಿಕೇಶನ್ ಗಳಿಗಾಗಿ ಲಿ-ಐಯಾನ್ ಕೋಶಗಳು (ಸಂಗ್ರಹಣೆ ಮತ್ತು ಮೊಬಿಲಿಟಿಯನ್ನು ಹೊರತುಪಡಿಸಿ) |
|
7 |
ಮೊಬೈಲ್, ಐಟಿ ಹಾರ್ಡ್‌ವೇರ್ ಉತ್ಪನ್ನಗಳು ಮತ್ತು ಸಂಬಂಧಿತ ಸಾಧನಗಳಿಗೆ ಎನ್‌ಕ್ಲೋಸರ್ಸ್ |
|
ಸಿ |
ಆಯ್ದ ಬೇರ್ ಬಿಡಿಭಾಗಗಳು |
|
8 |
ಹೈ-ಡೆನ್ಸಿಟಿ ಇಂಟರ್‌ಕನೆಕ್ಟ್ (ಎಚ್ ಡಿ ಐ)/ ಮಾರ್ಪಡಿಸಿದ ಸೆಮಿ-ಅಡಿಟಿವ್ ಪ್ರೊಸೆಸ್ (ಎಂ ಎಸ್ ಎ ಪಿ)/ ಫ್ಲೆಕ್ಸಿಬಲ್ ಪಿಸಿಬಿ |
ಹೈಬ್ರಿಡ್ ಪ್ರೋತ್ಸಾಹಧನ |
9 |
ಎಸ್ ಎಂ ಡಿ ಪ್ಯಾಸಿವ್ ಬಿಡಿಭಾಗಗಳು |
|
ಡಿ |
ಎಲೆಕ್ಟ್ರಾನಿಕ್ಸ್ ತಯಾರಿಕೆಗಾಗಿ ಪೂರೈಕೆ ಸರಪಳಿ ಪೂರಕ ವ್ಯವಸ್ಥೆ ಮತ್ತು ಬಂಡವಾಳ ಉಪಕರಣಗಳು |
|
10 |
ಉಪ-ಜೋಡಣೆ (ಎ) ಮತ್ತು ಬೇರ್ ಬಿಡಿಭಾಗಗಳು (ಬಿ) ಮತ್ತು (ಸಿ) ತಯಾರಿಕೆಯಲ್ಲಿ ಬಳಸುವ ಭಾಗಗಳು/ಬಿಡಿಭಾಗಕಗಳು |
ಕ್ಯಾಪೆಕ್ಸ್ ಪ್ರೋತ್ಸಾಹಧನ |
11 |
ಎಲೆಕ್ಟ್ರಾನಿಕ್ಸ್ ತಯಾರಿಕೆಯಲ್ಲಿ ಬಳಸುವ ಬಂಡವಾಳ ಸರಕುಗಳು, ಅವುಗಳ ಉಪ-ಜೋಡಣೆಗಳು ಮತ್ತು ಬಿಡಿಭಾಗಗಳು |
|
ಕ್ರಮ ಸಂಖ್ಯೆ | ಗುರಿ ವಿಭಾಗಗಳು | ಪ್ರೋತ್ಸಾಹಧನದ ಸ್ವರೂಪ |
---|
ii. ಯೋಜನೆಯ ಅವಧಿ ಆರು (6) ವರ್ಷಗಳು ಮತ್ತು ಹೂಡಿಕೆಯಿಂದ ಉತ್ಪಾದನೆ ಆರಂಭದವರೆಗಿನ ಒಂದು (1) ವರ್ಷದ ಅವಧಿ.
ಹಿನ್ನೆಲೆ:
ಎಲೆಕ್ಟ್ರಾನಿಕ್ಸ್ ಜಾಗತಿಕವಾಗಿ ಅತಿ ಹೆಚ್ಚು ವ್ಯಾಪಾರವಾಗುವ ಮತ್ತು ವೇಗವಾಗಿ ಬೆಳೆಯುತ್ತಿರುವ ಉದ್ಯಮಗಳಲ್ಲಿ ಒಂದಾಗಿದೆ ಮತ್ತು ಜಾಗತಿಕ ಆರ್ಥಿಕತೆಯನ್ನು ರೂಪಿಸುವಲ್ಲಿ ಮತ್ತು ದೇಶದ ಆರ್ಥಿಕ ಮತ್ತು ತಾಂತ್ರಿಕ ಅಭಿವೃದ್ಧಿಯನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ. ಎಲೆಕ್ಟ್ರಾನಿಕ್ಸ್ ಆರ್ಥಿಕತೆಯ ಎಲ್ಲಾ ಕ್ಷೇತ್ರಗಳನ್ನು ವ್ಯಾಪಿಸಿರುವುದರಿಂದ ಇದು ಆರ್ಥಿಕ ಮತ್ತು ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಹೊಂದಿದೆ. ಸರ್ಕಾರದ ವಿವಿಧ ಉಪಕ್ರಮಗಳೊಂದಿಗೆ, ಎಲೆಕ್ಟ್ರಾನಿಕ್ಸ್ ತಯಾರಿಕಾ ವಲಯವು ಕಳೆದ ದಶಕದಲ್ಲಿ ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ. ಎಲೆಕ್ಟ್ರಾನಿಕ್ ಸರಕುಗಳ ದೇಶೀಯ ಉತ್ಪಾದನೆಯು 2014-15ನೇ ಹಣಕಾಸು ವರ್ಷದಲ್ಲಿ ರೂ.1.90 ಲಕ್ಷ ಕೋಟಿಗಳಿಂದ 2023-24ನೇ ಹಣಕಾಸು ವರ್ಷದಲ್ಲಿ ರೂ.9.52 ಲಕ್ಷ ಕೋಟಿಗಳಿಗೆ ಶೇ.17 ಕ್ಕಿಂತ ಹೆಚ್ಚು ಸಿ ಎ ಜಿ ಆರ್ ನಲ್ಲಿ ಹೆಚ್ಚಾಗಿದೆ. ಎಲೆಕ್ಟ್ರಾನಿಕ್ ಸರಕುಗಳ ರಫ್ತು ಕೂಡ 2014-15ನೇ ಹಣಕಾಸು ವರ್ಷದಲ್ಲಿ ರೂ.0.38 ಲಕ್ಷ ಕೋಟಿಗಳಿಂದ 2023-24ನೇ ಹಣಕಾಸು ವರ್ಷದಲ್ಲಿ ರೂ.2.41 ಲಕ್ಷ ಕೋಟಿಗಳಿಗೆ ಶೇ. 20 ಕ್ಕಿಂತ ಹೆಚ್ಚು ಸಿ ಎ ಜಿ ಆರ್ ನಲ್ಲಿ ಹೆಚ್ಚಾಗಿದೆ.
*****
A strong impetus to self-reliance and making India a hub for electronics component manufacturing!
— Narendra Modi (@narendramodi) March 28, 2025
The Cabinet approval for Electronics Component Manufacturing Scheme will attract investments and boost job creation. It will encourage innovation as well.https://t.co/Kx2stb4NPD