Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಎರಡು ವರ್ಷ ಅಧಿಕಾರಾವಧಿ ಪೂರೈಸಿದ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರಿಗೆ ಪ್ರಧಾನಿಯವರಿಂದ ಅಭಿನಂದನೆ


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಎರಡು ವರ್ಷ ಅಧಿಕಾರಾವಧಿ ಪೂರ್ಣಗೊಳಿಸಿದ ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರನ್ನು ಅಭಿನಂದಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಪ್ರಧಾನಿಯವರು,

“ಕಳೆದ ಎರಡು ವರ್ಷಗಳಲ್ಲಿ ಶ್ರೀ @ombirlakota ಜೀ ಅವರು ನಮ್ಮ ಸಂಸದೀಯ ಪ್ರಜಾಪ್ರಭುತ್ವವನ್ನು ಶ್ರೀಮಂತಗೊಳಿಸಿದ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಿದ ಹಲವು ಸರಣಿ ಕ್ರಮಗಳಿಗೆ ನಾಂದಿ ಹಾಡಿದ್ದಾರೆ. ಆ ಮೂಲಕ ಅನೇಕ ಐತಿಹಾಸಿಕ ಮತ್ತು ಜನಪರ ಶಾಸನಗಳನ್ನು ಅಂಗೀಕರಿಸಲು ಕಾರಣವಾಗಿದ್ದಾರೆ. ಅವರಿಗೆ ಅಭಿನಂದನೆಗಳು!
ಶ್ರೀ @ombirlakota ಜೀ ಅವರು ಮೊದಲ ಬಾರಿಯ ಸಂಸತ್ ಸದಸ್ಯರು, ಯುವ ಸಂಸತ್ ಸದಸ್ಯರು ಮತ್ತು ಮಹಿಳಾ ಸಂಸದರಿಗೆ ಸದನದ ವೇದಿಕೆಯಲ್ಲಿ ಮಾತನಾಡುವ ಅವಕಾಶವನ್ನು ಒದಗಿಸಲು ವಿಶೇಷ ಒತ್ತು ನೀಡಿದ್ದಾರೆ ಎಂಬುದು ಗಮನಾರ್ಹ ವಿಚಾರ. ವಿವಿಧ ಸಮಿತಿಗಳನ್ನು ಅವರು ಬಲಪಡಿಸಿದ್ದಾರೆ, ನಮ್ಮ ಪ್ರಜಾಪ್ರಭುತ್ವದಲ್ಲಿ ಅವರ ಪಾತ್ರ ಪ್ರಧಾನವಾದುದು.” ಎಂದು ಹೇಳಿದ್ದಾರೆ.

 

****