Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಎರಡು ವರ್ಷಗಳ ಅವಧಿಯಲ್ಲಿ 10,900 ಕೋಟಿ ರೂಪಾಯಿ ವೆಚ್ಚದ  ವಿನೂತನ ವಾಹನ ವರ್ಧನೆ (ಪಿಎಂ ಇ-ಡ್ರೈವ್) ಯೋಜನೆಯಲ್ಲಿ ಪ್ರಧಾನ ಮಂತ್ರಿ ಎಲೆಕ್ಟ್ರಿಕ್ ಡ್ರೈವ್ ಕ್ರಾಂತಿ ಕಾರ್ಯಕ್ರಮವನ್ನು ಕೇಂದ್ರ ಸಂಪುಟ ಅನುಮೋದಿಸಿದೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು, ದೇಶದಲ್ಲಿ ವಿದ್ಯುಚ್ಚಾಲಿತ ವಾಹನಗಳ ಉತ್ತೇಜನಕ್ಕಾಗಿ ‘ಇನ್ನೋವೇಟಿವ್ ವೆಹಿಕಲ್ ಎನ್ಹಾನ್ಸ್ಮೆಂಟ್ (ಪಿಎಂ ಇ-ಡ್ರೈವ್) ಯೋಜನೆಯಲ್ಲಿ ʼಪ್ರಧಾನಮಂತ್ರಿ ಎಲೆಕ್ಟ್ರಿಕ್ ಡ್ರೈವ್ ಕ್ರಾಂತಿ’ ಎಂಬ ಯೋಜನೆಯ ಅನುಷ್ಠಾನಕ್ಕಾಗಿ ಭಾರೀ ಕೈಗಾರಿಕೆಗಳ ಸಚಿವಾಲಯದ (ಎಂ ಹೆಚ್ ಐ) ಪ್ರಸ್ತಾವನೆಯನ್ನು ಅನುಮೋದಿಸಿದೆ. 

ಈ ಯೋಜನೆಯು ಎರಡು ವರ್ಷಗಳ ಅವಧಿಯಲ್ಲಿ 10,900 ಕೋಟಿ ರೂ. ವೆಚ್ಚವನ್ನು ಹೊಂದಿರುತ್ತದೆ.

ಯೋಜನೆಯ ಪ್ರಮುಖ ಅಂಶಗಳು ಕೆಳಕಂಡಂತಿವೆ:

ಇ-ದ್ವಿಚಕ್ರ ವಾಹನಗಳು, ಇ-ತ್ರಿಚಕ್ರ ವಾಹನಗಳು, ಇ-ಆಂಬುಲೆನ್ಸ್ ಗಳು ಇ-ಟ್ರಕ್ ಗಳು ಮತ್ತು ಇತರ ಉದಯೋನ್ಮುಖ ಇವಿಗಳನ್ನು ಪ್ರೋತ್ಸಾಹಿಸಲು 3,679 ಕೋಟಿ ರೂ.ಮೌಲ್ಯದ ಸಬ್ಸಿಡಿ/ಬೇಡಿಕೆ ಪ್ರೋತ್ಸಾಹಗಳನ್ನು ಒದಗಿಸಲಾಗಿದೆ. ಈ ಯೋಜನೆಯು 24.79 ಲಕ್ಷ ಇ-ದ್ವಿಚಕ್ರ ವಾಹನಗಳು, 3.16 ಲಕ್ಷ ಇ-ತ್ರಿಚಕ್ರ ವಾಹನಗಳು ಮತ್ತು 14,028 ಇ-ಬಸ್ ಗಳನ್ನು ಬೆಂಬಲಿಸುತ್ತದೆ.

ಭಾರೀ ಕೈಗಾರಿಕೆಗಳ ಸಚಿವಾಲಯವು ಯೋಜನೆಯಡಿಯಲ್ಲಿ ಬೇಡಿಕೆಯ ಪ್ರೋತ್ಸಾಹವನ್ನು ಪಡೆಯಲು ಇವಿ ಖರೀದಿದಾರರಿಗೆ ಇ-ವೋಚರ್ ಗಳನ್ನು ಪರಿಚಯಿಸುತ್ತಿದೆ. ಇವಿ ಖರೀದಿಸುವ ಸಮಯದಲ್ಲಿ, ಯೋಜನೆಯ ಪೋರ್ಟಲ್ ಖರೀದಿದಾರರಿಗೆ ಆಧಾರ್ ದೃಢೀಕರಿಸಿದ ಇ-ವೋಚರ್ ಅನ್ನು ರಚಿಸುತ್ತದೆ. ಇ-ವೋಚರ್ ಅನ್ನು ಡೌನ್ಲೋಡ್ ಮಾಡಲು ಲಿಂಕ್ ಅನ್ನು ಖರೀದಿದಾರರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.

ಈ ಇ-ವೋಚರ್ ಗೆ ಖರೀದಿದಾರರು ಸಹಿ ಮಾಡುತ್ತಾರೆ ಮತ್ತು ಯೋಜನೆಯಡಿಯಲ್ಲಿ ಬೇಡಿಕೆಯ ಪ್ರೋತ್ಸಾಹವನ್ನು ಪಡೆಯಲು ಡೀಲರ್ ಗೆ ಸಲ್ಲಿಸುತ್ತಾರೆ. ಅದರ ನಂತರ, ಇ-ವೋಚರ್ ಗೆ ಡೀಲರ್ ಸಹಿ ಮಾಡುತ್ತಾರೆ ಮತ್ತು ಪಿಎಂ ಇ-ಡ್ರೈವ್ ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡುತ್ತಾರೆ. ಸಹಿ ಮಾಡಿದ ಇ-ವೋಚರ್ ಅನ್ನು ಎಸ್ ಎಂ ಎಸ್ ಮೂಲಕ ಖರೀದಿದಾರ ಮತ್ತು ಡೀಲರ್ ಗೆ ಕಳುಹಿಸಲಾಗುತ್ತದೆ. ಯೋಜನೆಯಡಿಯಲ್ಲಿ ಬೇಡಿಕೆಯ ಪ್ರೋತ್ಸಾಹದ ಮರುಪಾವತಿಯನ್ನು ಪಡೆಯಲು ಒಇಎಂಗೆ ಸಹಿ ಮಾಡಿದ ಇ-ವೋಚರ್ ಅತ್ಯಗತ್ಯವಾಗಿರುತ್ತದೆ.

ಈ ಯೋಜನೆಯು ಇ-ಆಂಬ್ಯುಲೆನ್ಸ್ ಗಳ ನಿಯೋಜನೆಗಾಗಿ 500 ಕೋಟಿ ರೂ.ಗಳನ್ನು ನಿಗದಿಪಡಿಸುತ್ತದೆ. ರೋಗಿಗಳ ಆರಾಮದಾಯಕ ಸಾರಿಗೆಗಾಗಿ ಇ-ಆಂಬ್ಯುಲೆನ್ಸ್ ಬಳಕೆಯನ್ನು ಉತ್ತೇಜಿಸಲು ಇದು ಭಾರತ ಸರ್ಕಾರದ ಹೊಸ ಉಪಕ್ರಮವಾಗಿದೆ. ಇ-ಆಂಬ್ಯುಲೆನ್ಸ್ ಗಳ ಕಾರ್ಯಕ್ಷಮತೆ ಮತ್ತು ಸುರಕ್ಷತಾ ಮಾನದಂಡಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ರಸ್ತೆ ಮತ್ತು ಹೆದ್ದಾರಿ ಸಚಿವಾಲಯ ಮತ್ತು ಇತರ ಸಂಬಂಧಿತ ಪಾಲುದಾರರೊಂದಿಗೆ ಸಮಾಲೋಚಿಸಿ ರೂಪಿಸಲಾಗುವುದು.

ರಾಜ್ಯ ಸಾರಿಗೆ ಸಂಸ್ಥೆಗಳು/ಸಾರ್ವಜನಿಕ ಸಾರಿಗೆ ಸಂಸ್ಥೆಗಳಿಂದ 14,028 ಇ-ಬಸ್ ಗಳನ್ನು ಖರೀದಿಸಲು 4,391 ಕೋಟಿ ರೂ.ಗಳನ್ನು ಒದಗಿಸಲಾಗಿದೆ. 40 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ, ಅಹಮದಾಬಾದ್, ಸೂರತ್, ಬೆಂಗಳೂರು, ಪುಣೆ ಮತ್ತು ಹೈದರಾಬಾದ್ ನಗರಗಳಲ್ಲಿ ಬೇಡಿಕೆ ಒಟ್ಟುಗೂಡಿಸುವ ಕೆಲಸವನ್ನು ಸಿ ಇ ಎಸ್ ಎಲ್ ನಿಂದ ಮಾಡಲಾಗುವುದು. ರಾಜ್ಯಗಳೊಂದಿಗೆ ಸಮಾಲೋಚಿಸಿ ಅಂತರ-ನಗರ ಮತ್ತು ಅಂತರ-ರಾಜ್ಯ ಇ-ಬಸ್ ಗಳನ್ನು ಸಹ ಬೆಂಬಲಿಸಲಾಗುತ್ತದೆ.

ನಗರಗಳು/ರಾಜ್ಯಗಳಿಗೆ ಬಸ್ಸುಗಳನ್ನು ಹಂಚುವಾಗ, ರಸ್ತೆ ಮತ್ತು ಹೆದ್ದಾರಿ ಸಚಿವಾಲಯದ ವಾಹನ ಗುಜರಿ ಯೋಜನೆಯ ಮಾರ್ಗಸೂಚಿಗಳನ್ನು ಅನುಸರಿಸಿ ಅಧಿಕೃತ ಗುಜರಿ ಕೇಂದ್ರಗಳ ಮೂಲಕ ಹಳೆಯ ರಾಜ್ಯ ಸಾರಿಗೆ ಸಂಸ್ಥೆಗಳ ಬಸ್ಗಳನ್ನು ಸ್ಕ್ರ್ಯಾಪ್ ಮಾಡಿದ ನಂತರ ಖರೀದಿಸಲಾಗುವ ನಗರ/ರಾಜ್ಯಗಳ ಬಸ್ಗಳಿಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ.

ಟ್ರಕ್ ಗಳು ವಾಯು ಮಾಲಿನ್ಯಕ್ಕೆ ಪ್ರಮುಖ ಕಾರಣವಾಗುತ್ತವೆ. ಈ ಯೋಜನೆಯು ದೇಶದಲ್ಲಿ ಇ-ಟ್ರಕ್ ಗಳ ನಿಯೋಜನೆಯನ್ನು ಉತ್ತೇಜಿಸುತ್ತದೆ. ಇ-ಟ್ರಕ್ ಗಳನ್ನು ಪ್ರೋತ್ಸಾಹಿಸಲು 500 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ. ರಸ್ತೆ ಮತ್ತು ಹೆದ್ದಾರಿ ಸಚಿವಾಲಯ ಅನುಮೋದಿತ ವಾಹನ ಗುಜರಿ ಕೇಂದ್ರಗಳಿಂದ ಸ್ಕ್ರ್ಯಾಪಿಂಗ್ ಪ್ರಮಾಣಪತ್ರವನ್ನು ಹೊಂದಿರುವವರಿಗೆ ಪ್ರೋತ್ಸಾಹಕಗಳನ್ನು ನೀಡಲಾಗುತ್ತದೆ.

ಈ ಯೋಜನೆಯು ವಿದ್ಯುಚ್ಚಾಲಿತ ವಾಹನಗಳ ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳ (ಇವಿಪಿಸಿಎಸ್) ಸ್ಥಾಪನೆಯನ್ನು ದೊಡ್ಡ ರೀತಿಯಲ್ಲಿ ಉತ್ತೇಜಿಸುವ ಮೂಲಕ ಇವಿ ಖರೀದಿದಾರರ ಆತಂಕವನ್ನು ಪರಿಹರಿಸುತ್ತದೆ. ಈ ಇವಿಪಿಸಿಎಸ್ ಅನ್ನು ಹೆಚ್ಚಿನ ಇವಿಗಳಿರುವ ಆಯ್ಕೆಮಾಡಿದ ನಗರಗಳಲ್ಲಿ ಮತ್ತು ಆಯ್ಕೆಮಾಡಿದ ಹೆದ್ದಾರಿಗಳಲ್ಲಿ ಸ್ಥಾಪಿಸಬೇಕು. ಯೋಜನೆಯು ಇ-ನಾಲ್ಕು ಚಕ್ರದ ವಾಹನಗಳಿಗಾಗಿ 22,100 ವೇಗದ ಚಾರ್ಜರ್ ಗಳನ್ನು, ಇ-ಬಸ್ ಗಳಿಗೆ 1800 ವೇಗದ ಚಾರ್ಜರ್ ಗಳನ್ನು ಮತ್ತು ಇ ದ್ವಿಚಕ್ರತ್ರಿಚಕ್ರ ವಾಹನಗಳಿಗಾಗಿ 48,400 ವೇಗದ ಚಾರ್ಜರ್ ಕೇಂದ್ರಗಳನ್ನು ಸ್ಥಾಪಿಸಲು ಪ್ರಸ್ತಾಪಿಸುತ್ತದೆ. ಇವಿಪಿಸಿಎಸ್  ವೆಚ್ಚ 2,000 ಕೋಟಿ ರೂ. ಆಗಿರುತ್ತದೆ.

ದೇಶದಲ್ಲಿ ಬೆಳೆಯುತ್ತಿರುವ ವಿದ್ಯುಚ್ಚಾಲಿತ ವಾಹನಗಳ ಪಪೂರಕ ವ್ಯವಸ್ಥೆಯ ದೃಷ್ಟಿಯಿಂದ, ಹಸಿರು ಚಲನಶೀಲತೆಯನ್ನು ಉತ್ತೇಜಿಸಲು ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳನ್ನು ಎದುರಿಸಲು ಭಾರೀ ಕೈಗಾರಿಕೆ ಸಚಿವಾಲಯದ ಪರೀಕ್ಷಾ ಏಜೆನ್ಸಿಗಳನ್ನು ಆಧುನೀಕರಿಸಲಾಗುತ್ತದೆ. ಭಾರೀ ಕೈಗಾರಿಕೆ ಸಚಿವಾಲಯದ ಆಶ್ರಯದಲ್ಲಿ 780 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಪರೀಕ್ಷಾ ಏಜೆನ್ಸಿಗಳ ಉನ್ನತೀಕರಣವನ್ನು ಅನುಮೋದಿಸಲಾಗಿದೆ.

ಯೋಜನೆಯು ಸಾರ್ವಜನಿಕ ಸಾರಿಗೆಯನ್ನು ಬೆಂಬಲಿಸುವ ಮೂಲಕ ಸಾಮೂಹಿಕ ಚಲನಶೀಲತೆಯನ್ನು ಉತ್ತೇಜಿಸುತ್ತದೆ. ಪಿಎಂ ಇ-ಡ್ರೈವ್ ಯೋಜನೆಯ ಪ್ರಾಥಮಿಕ ಉದ್ದೇಶವು ವಿದ್ಯುಚ್ಚಾಲಿತ ವಾಹನಗಳ ಖರೀದಿಗೆ ಮುಂಗಡ ಪ್ರೋತ್ಸಾಹವನ್ನು ಒದಗಿಸುವ ಮೂಲಕ ಮತ್ತು ವಿದ್ಯುಚ್ಚಾಲಿತ ವಾಹನಗಳಿಗೆ ಅಗತ್ಯ ಚಾರ್ಜಿಂಗ್ ಮೂಲಸೌಕರ್ಯಗಳನ್ನು ಸ್ಥಾಪಿಸಲು ಅನುಕೂಲ ಮಾಡಿಕೊಡುವ ಮೂಲಕ ಅವುಗಳ ಅಳವಡಿಕೆಯನ್ನು ತ್ವರಿತಗೊಳಿಸುವುದಾಗಿದೆ. ಪಿಎಂ ಇ-ಡ್ರೈವ್ ಯೋಜನೆಯು ಸಾರಿಗೆಯ ಪರಿಸರ ಪರಿಣಾಮವನ್ನು ಕಡಿಮೆ ಮಾಡಲು ಮತ್ತು ಗಾಳಿಯ ಗುಣಮಟ್ಟವನ್ನು ಸುಧಾರಿಸಲು ವಿದ್ಯುಚ್ಚಾಲಿತ ವಾಹನಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಈ ಯೋಜನೆಯು ದಕ್ಷ, ಸ್ಪರ್ಧಾತ್ಮಕ ಮತ್ತು ಚೇತರಿಕೆಯ ಇವಿ ಉತ್ಪಾದನಾ ಉದ್ಯಮವನ್ನು ಉತ್ತೇಜಿಸುತ್ತದೆ ಮತ್ತು ಆ ಮೂಲಕ ಆತ್ಮನಿರ್ಭರ ಭಾರತವನ್ನು ಉತ್ತೇಜಿಸುತ್ತದೆ. ದೇಶೀಯ ಉತ್ಪಾದನೆ ಮತ್ತು ಇವಿ ಪೂರೈಕೆ ಸರಪಳಿಯ ಬಲವರ್ಧನೆಯನ್ನು ಉತ್ತೇಜಿಸುವ ಹಂತ ಹಂತದ ಉತ್ಪಾದನಾ ಕಾರ್ಯಕ್ರಮವನ್ನು (ಪಿಎಂಪಿ) ಸಂಯೋಜಿಸುವ ಮೂಲಕ ಇದನ್ನು ಸಾಧಿಸಲಾಗುತ್ತದೆ.

ಭಾರತ ಸರ್ಕಾರದ ಈ ಉಪಕ್ರಮವು ಪರಿಸರ ಮಾಲಿನ್ಯ ಮತ್ತು ಇಂಧನ ಸುರಕ್ಷತೆಗೆ ಸಂಬಂಧಿಸಿದ ಕಳವಳಗಳನ್ನು ಪರಿಹರಿಸಲು ಮತ್ತು ಸುಸ್ಥಿರ ಸಾರಿಗೆ ಪರಿಹಾರಗಳನ್ನು ಉತ್ತೇಜಿಸುವಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಲು ಸಿದ್ಧವಾಗಿದೆ. ಈ ಯೋಜನೆಯು ಅದರ ಪಿಎಂಪಿ ಜೊತೆಗೆ, ಇವಿ ವಲಯ ಮತ್ತು ಸಂಬಂಧಿತ ಪೂರೈಕೆ ಸರಪಳಿಯಲ್ಲಿ ಹೂಡಿಕೆಯನ್ನು ಉತ್ತೇಜಿಸುತ್ತದೆ. ಈ ಯೋಜನೆಯು ಮೌಲ್ಯ ಸರಪಳಿಯಲ್ಲಿ ಗಮನಾರ್ಹ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಉತ್ಪಾದನೆ ಮತ್ತು ಚಾರ್ಜಿಂಗ್ ಮೂಲಸೌಕರ್ಯಗಳ ಸ್ಥಾಪನೆಯ ಮೂಲಕ ಉದ್ಯೋಗ ಸೃಷ್ಟಿಯೂ ಆಗುತ್ತದೆ.

 

*****