ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಎರಡನೇ ರಾಜತಾಂತ್ರಿಕ ಎನ್ ಕ್ಲೇವ್ ಗಾಗಿ ನವದೆಹಲಿಯ ದ್ವಾರಕಾದ ಸೆಕ್ಟರ್ 24ರಲ್ಲಿರುವ 34.87 ಹೆಕ್ಟೇರ್ ಜಮೀನನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರದಿಂದ ಭೂಮಿ ಮತ್ತು ಅಭಿವೃದ್ಧಿ ಇಲಾಖೆ(ಎಲ್.ಅಂಡ್ ಡಿಓ)ಯ ಕಚೇರಿಗೆ ಹಸ್ತಾಂತರಿಸಲು ತನ್ನ ಅನುಮೋದನೆ ನೀಡಿದೆ.
ಪ್ರಸ್ತುತ ಚಾಣಕ್ಯಪುರಿಯಲ್ಲಿ ಒಂದು ರಾಜತಾಂತ್ರಿಕ ಎನ್ ಕ್ಲೇವ್ ಇದ್ದು, ಅಲ್ಲಿ ಎಂಬೆಸಿಗಳಿಗೆ ಎಲ್. ಅಂಡ್ ಡಿಓ, ಭೂಮಿಯನ್ನು ಮಂಜೂರು ಮಾಡುತ್ತದೆ. ವಿವಿಧ ರಾಜತಾಂತ್ರಿಕ ಮಿಷನ್ ಗಳಿಗೆ/ಅಂತಾರಾಷ್ಟ್ರೀಯ ಸಂಘಟನೆಗಳಿಗೆ ತಮ್ಮ ಚಾನ್ಸರಿ/ಎಂಬೆಸಿ ನಿರ್ಮಿಸಿಕೊಳ್ಳಲು ಜಾಗದ ಅಗತ್ಯವಿದೆ ಎಂಬ ಇಂಗಿತವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ವ್ಯಕ್ತಪಡಿಸಿತ್ತು. ಇದಕ್ಕಾಗಿ ಡಿಡಿಎ 34.87 ಹೆಕ್ಟೇರ್ ಭೂಮಿಯನ್ನು ದ್ವಾರಕಾದ ಸೆಕ್ಟರ್ 24ರಲ್ಲಿ ಗುರುತಿಸಿದೆ, ಇದನ್ನು ಎಲ್. ಅಂಡ್ ಡಿಓಗೆ ಹಸ್ತಾಂತರಿಸಲಿದೆ. ಇದು ರಾಷ್ಟ್ರ ರಾಜಧಾನಿಯಲ್ಲಿ ಎರಡನೇ ರಾಜತಾಂತ್ರಿಕ ಎನ್ ಕ್ಲೇವ್ ನಿರ್ಮಿಸಲು ಭೂಮಿಯನ್ನು ಒದಗಿಸುತ್ತದೆ.
AKT/VBA/SH