Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಎಫ್.ಸಿ.ಐ.ಎಲ್. ನ ಗೋರಖ್ ಪುರ ಮತ್ತು ಸಿಂಧ್ರಿ ಘಟಕಗಳಿಗೆ ಮತ್ತು ಎಚ್.ಎಫ್.ಸಿ.ಎಲ್. ನ ಬರೌನಿ ಘಟಕಗಳಿಗೆ ರಿಯಾಯತಿ ಒಪ್ಪಂದ ಹಾಗು ಭೂ ಗೇಣಿಒಪ್ಪಂದಗಳಿಗೆ ಸಂಪುಟ ಅನುಮೋದನೆ.


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈಕೆಳಗಿನ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಯಿತು.

· ಹಿಂದುಸ್ಥಾನ ಉರ್ವರಕ್ ಮತ್ತು ರಾಸಾಯನ್ ಲಿಮಿಟೆಡ್ (ಎಚ್.ಯು.ಅರ್.ಎಲ್.) ಗೆ ಲೀಸ್ ಆಧಾರದಲ್ಲಿ ಭೂಮಿ ಒದಗಿಸುವುದು.

· ಭಾರತೀಯ ರಸಗೊಬ್ಬರ ನಿಗಮ ನಿಯಮಿತ (ಎಫ್.ಸಿ.ಐ.ಎಲ್.)ನ ಗೋರಕ್ ಪುರ ಮತ್ತು ಸಿಂದ್ರಿ ಘಟಕಗಳಿಗೆ ಮತ್ತು ಹಿಂದೂಸ್ತಾನ ರಸಗೊಬ್ಬರ ನಿಗಮ ನಿಯಮಿತದ (ಎಚ್.ಎಫ್.ಸಿ.ಎಲ್.) ಬರೌನಿ ಘಟಕಕ್ಕೆ ಎಚ್.ಯು.ಆರ್.ಎಲ್.ನಿಂದ ಪುನಃಶ್ಚೇತನ ನೀಡಲು ರಿಯಾಯತಿ ಒಪ್ಪಂದ ಮತ್ತು ಭೂ ಗೇಣಿ ಒಪ್ಪಂದ

· ಎಫ್. ಸಿ.ಐ.ಎಲ್/ ಎಚ್.ಎಫ್.ಸಿ.ಎಲ್. ಮತ್ತು ಎಚ್.ಯು.ಆರ್. ಎಲ್. ನಡುವೆ ಗೋರಕ್ ಪುರ, ಸಿಂಧ್ರಿ, ಮತ್ತು ಬರೌನಿ –ಈ ಮೂರು ಯೋಜನೆಗಳಿಗೆ ಸಂಬಂಧಿಸಿದ ಯಾವುದಾದರೂ ಪೂರಕ ಒಪ್ಪಂದಗಳನ್ನು ಅಂಗೀಕರಿಸಲು ಮತ್ತು ಇತರ ಒಪ್ಪಂದಗಳಿಗೆ ಅನುಮೋದನೆ ನೀಡಲು ಅಂತರ ಮಂತ್ರಾಲಯ ಸಮಿತಿ (ಐ.ಎಂ.ಸಿ.)ಗೆ ಅಧಿಕಾರ ನೀಡಿಕೆ.

ಪರಿಣಾಮ ಎಫ್.ಸಿ.ಐ.ಎಲ್. / ಎಚ್.ಎಫ್.ಸಿ.ಎಲ್. ಗಳ ಗೋರಕ್ ಪುರ, ಸಿಂಧ್ರಿ, ಮತ್ತು ಬರೌನಿ ಘಟಕಗಳ ಪುನಃಶ್ಚೇತನ ರಸಗೊಬ್ಬರ ವಲಯದಲ್ಲಿ ಸಾಕಷ್ಟು ಹೂಡಿಕೆಯನ್ನು ಖಾತ್ರಿಪಡಿಸಲಿದೆ. ಈ ಘಟಕಗಳು ಪೂರ್ವ ಭಾರತದಲ್ಲಿ ಸಂಕೀರ್ಣ ಮೂಲಸೌಕರ್ಯ ಅಭಿವೃದ್ದಿಗೆ ಜಗದೀಶಪುರ-ಹಾಲ್ಡಿಯಾ ಕೊಳವೆ ಮಾರ್ಗದಲ್ಲಿ ಅಳವಡಿಸಲಾಗುವ ಅನಿಲ ಕೊಳವೆಮಾರ್ಗಕ್ಕೆ ಪ್ರಮುಖ ಬಳಕೆದಾರರನ್ನು ಒದಗಿಸಲಿವೆ. ಇವು ಈ ವಲಯದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿ ಮಾಡಲಿವೆ. ಮತ್ತು ಪೂರ್ವ ವಲಯದಲ್ಲಿ /ರಾಜ್ಯಗಳಲ್ಲಿ ಆರ್ಥಿಕತೆಗೆ ಉತ್ತೇಜನ ನೀಡಲಿವೆ. ರಸಗೊಬ್ಬರ ಘಟಕಗಳ ಪುನಃಶ್ಚೇತನ ಯೂರಿಯಾದ ದೇಶಿಯ ಉತ್ಪಾದನೆಯನ್ನು ಹೆಚ್ಚಿಸಲಿದೆ ಮತ್ತು ಆ ಕ್ಷೇತ್ರದಲ್ಲಿ ಸ್ವಾವಲಂಬನೆಯನ್ನೂ ಹೆಚ್ಚಿಸಲಿದೆ.

ವಿವರಗಳು

· ಎಚ್.ಯು.ಅರ್.ಎಲ್, ಕಂಪೆನಿಯು ಎನ್.ಟಿ.ಪಿ.ಸಿ, ಐ.ಒ.ಸಿ.ಎಲ್., ಸಿ.ಐ.ಎಲ್. ಮತ್ತು ಎಫ್.ಸಿ.ಐ.ಎಲ್./ಎಚ್.ಎಫ್.ಸಿ.ಎಲ್.ಗಳ ಜಂಟಿ ಸಹಯೋಗದ ಉದ್ಯಮವಾಗಿದ್ದು, 2016 ರ ಜೂನ್ ತಿಂಗಳಲ್ಲಿ ಸ್ಥಾಪನೆಯಾಗಿದೆ. ಗೋರಕ್ ಪುರ , ಸಿಂಧ್ರಿ, ಮತ್ತು ಬರೌನಿಗಳ ರಸಗೊಬ್ಬರ ಪುನಃಶ್ಚೇತನ ಯೋಜನೆಗಳನ್ನು ಅನುಷ್ಟಾನಕ್ಕೆ ತರುವುದಕ್ಕಾಗಿ ಇದನ್ನು ಸ್ಥಾಪಿಸಲಾಯಿತು.

ಮೂರು ಸ್ಥಳಗಳಲ್ಲಿ ರಸಗೊಬ್ಬರ ಯೋಜನೆಗಳನ್ನು ಅನುಷ್ಟಾನಕ್ಕೆ ತರುವುದಕ್ಕಾಗಿ ಎಚ್.ಯು.ಅರ್.ಎಲ್,ಗೆ ಅನುಕೂಲಗಳನ್ನು ಒದಗಿಸಿಕೊಡಲು ಎಚ್.ಯು.ಅರ್.ಎಲ್, ಜೊತೆ ಎಫ್.ಸಿ.ಐ.ಎಲ್/ಎಚ್.ಎಫ್.ಸಿ.ಎಲ್.ಗಳು ಗೇಣಿ ಪತ್ರಗಳಿಗೆ ಅಂಕಿತ ಹಾಕಲಿವೆ. ಈ ಭೂಮಿಯ ಗುತ್ತಿಗೆ ಅವಧಿ ೫೫ ವರ್ಷಗಳದ್ದಾಗಿರುತ್ತದೆ.

ಲೀಸ್ ಪಡೆದವರು (ಎಚ್.ಯು.ಅರ್.ಎಲ್,)ವಾರ್ಷಿಕ 1 ಲಕ್ಷ ರೂ. ಲೀಸ್ ಬಾಡಿಗೆಯನ್ನು ಲೀಸ್ ನೀಡಿದವರಿಗೆ (ಎಫ್.ಸಿ.ಐ.ಎಲ್/ಎಚ್.ಎಫ್.ಸಿ.ಎಲ್.) ಪಾವತಿಸಬೇಕು.

ಎಫ್.ಸಿ.ಐ.ಎಲ್. ನ ಸಿಂಧ್ರಿ ಮತ್ತು ಗೋರಕ್ ಪುರದ ಘಟಕಗಳು ಮತ್ತು ಎಚ್.ಎಫ್.ಸಿ.ಎಲ್.ನ ಬರೌನಿ ಘಟಕಗಳಿಗೆ ಸಂಬಂಧಿಸಿ ಎಫ್.ಸಿ.ಐ.ಎಲ್./ಎಚ್.ಎಫ್.ಸಿ.ಎಲ್. ಮತ್ತು ಎಚ್.ಯು.ಅರ್.ಎಲ್. ಗಳ ನಡುವೆ ರಿಯಾಯತಿಗಾಗಿ ಒಪ್ಪಂದಗಳು ಏರ್ಪಡಬೇಕು. ಎಚ್.ಯು.ಆರ್.ಎಲ್.ಗೆ ರಸಗೊಬ್ಬರ ಸ್ಥಾವರಗಳಿಗೆ ಸಂಬಂಧಿಸಿ ಸಂಪೂರ್ಣ ವಿನ್ಯಾಸ, ಇಂಜಿನಿಯರಿಂಗ್, ನಿರ್ಮಾಣ, ಖರೀದಿ, ಪರೀಕ್ಷೆ, ಅನುಷ್ಟಾನ, ಕಾರ್ಯಾಚರಣೆ ಮತ್ತು ರಸಗೊಬ್ಬರ ಘಟಕಗಳ ನಿರ್ವಹಣೆ ಹಾಗು ಅದರ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಮಾಡಿಕೊಡುವುದು ಇದರ ಉದ್ದೇಶವಾಗಿದೆ.

ಎಚ್.ಯು.ಅರ್.ಎಲ್. ಗೆ ಸಾಲ ಪಡೆಯಲು ಅನುಕೂಲವೊದಗಿಸಲು ಭೂಮಿಯನ್ನು ವರ್ಗಾಯಿಸುವುದಕ್ಕೆ ಸಂಬಂಧಿಸಿದ ಪೂರಕ ಒಪ್ಪಂದಗಳನ್ನು ಪ್ರತೀ ಯೋಜನೆಗೆ ಸಾಲ ನೀಡಿಕೆ ವ್ಯವಸ್ಥೆ ಪೂರ್ಣಗೊಂಡ ಬಳಿಕ ಎಚ್.ಯು.ಅರ್.ಎಲ್, ನಿರ್ದಿಷ್ಟ ಯೋಜನೆಗಳಿಗೆ ಸಾಲ ಸೌಲಭ್ಯ ಒದಗಿಸುವವರ ಪ್ರತಿನಿಧಿಗಳು,ಮತ್ತು ಎಫ್.ಸಿ.ಐ.ಎಲ್./ಎಚ್.ಎಫ್.ಸಿ.ಎಲ್. ಗಳ ನಡುವೆ ಅವಶ್ಯ ತ್ರಿಪಕ್ಷೀಯ ಒಪ್ಪಂದಗಳಿಗೆ ಅಂಕಿತ ಹಾಕುವ ಮೂಲಕ ಪೂರೈಸಬಹುದಾಗಿದೆ.